ಟೀಂ ಇಂಡಿಯಾ ಪರ ಈಗಲೂ ಟೆಸ್ಟ್‌ನಲ್ಲಿ ರನ್‌ ಗಳಿಸಬಲ್ಲೆ: ಸೌರವ್ ಗಂಗೂಲಿ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಲಿ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್‌ ಗಂಗೂಲಿ, ಈಗಲೂ ಕೂಡ ಕನಿಷ್ಠ ಮೂರು ತಿಂಗಳು ಅಭ್ಯಾಸ ಮಾಡಿದರೆ ಭಾರತ ತಂಡದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ರನ್‌ ಗಳಿಸುವುದಾಗಿ ಹೇಳಿಕೊಂಡಿದ್ದಾರೆ.
ಸೌರವ್ ಗಂಗೂಲಿ
ಸೌರವ್ ಗಂಗೂಲಿ
Updated on: 

ಕೋಲ್ಕತಾ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಲಿ ಅಧ್ಯಕ್ಷ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್‌ ಗಂಗೂಲಿ, ಈಗಲೂ ಕೂಡ ಕನಿಷ್ಠ ಮೂರು ತಿಂಗಳು ಅಭ್ಯಾಸ ಮಾಡಿದರೆ ಭಾರತ ತಂಡದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ರನ್‌ ಗಳಿಸುವುದಾಗಿ ಹೇಳಿಕೊಂಡಿದ್ದಾರೆ.

ದಾದಾ ಖ್ಯಾತಿಯ ಮಾಜಿ ಕಪ್ತನಾ 12 ವರ್ಷಗಳ ಹಿಂದೆ 2008ರಲ್ಲಿ ಭಾರತ ತಂಡದ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ. ಇನ್ನು 2011ರಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯವನ್ನಾಡಿದ್ದಾರೆ. 

ಹೀಗಿದ್ದರೂ ತಮಗೆ ಅಭ್ಯಾಸ ಸಲುವಾಗಿ ಅಗತ್ಯದ ಸಮಯ ನೀಡಿ ರಣಜಿ ಟ್ರೋಫಿ ಕ್ರಿಕೆಟ್‌ಲ್ಲಿ ಕನಿಷ್ಠ ಪಂದ್ಯಗಳನ್ನು ಆಡುವ ಅವಕಾಶ ನೀಡಿದರೆ ಟೆಸ್ಟ್‌ನಲ್ಲಿ ಈಗಲೂ ರನ್‌ ಗಳಿಸಬಲ್ಲೆ ಎಂದಿದ್ದಾರೆ.

ಇತ್ತೀಚೆಗೆ ಬಂಗಾಳಿ ಭಾಷೆಯ ಪತ್ರಿಕೆ 'ಸಂಗ್ಬಾದ್ ಪ್ರತಿದಿನ್'ಗೆ ನೀಡಿದ ವಿಶೇಷ ಸಂದರ್ಶನದ ವೇಳೆ ಸೌರವ್‌ ತಮ್ಮ ಕ್ರಿಕೆಟ್‌ ವೃತ್ತಿಬದುಕಿನ ಅಂತಿಮ ದಿನಗಳನ್ನು ನೆನೆಯುವ ಸಂದರ್ಭದಲ್ಲಿ ಈ ಮಾತುಗಳನ್ನು ಆಡಿದ್ದಾರೆ. ಟೀಮ್‌ ಇಂಡಿಯಾ ಪರ 18 ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿರುವ ಎಡಗೈ ಬ್ಯಾಟ್ಸ್‌ಮನ್‌ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಉತ್ತಮ ಲಯದಲ್ಲಿ ಇದ್ದರೂ ಕೂಡ ಅಂಗಣದಲ್ಲಿ ಮಂದ ಗತಿಯ ಫೀಲ್ಡರ್‌ಗಳೆಂದು ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ಒಂದೆರಡು ಒಡಿಐ ಸರಣಿಗಳಲ್ಲಿ ಆಡುವ ಅವಕಾಶ ಕೊಟ್ಟಿದ್ದರೆ ನಾನು ಇನ್ನಷ್ಟು ರನ್‌ ಗಳಿಸಿರುತ್ತಿದ್ದೆ. ನಾಗ್ಪುರದಲ್ಲಿ ನಡೆದ ಟೆಸ್ಟ್‌ ಪಂದ್ಯದ ಬಳಿಕ ನಿವೃತ್ತಿ ಆಗದೇ ಇದ್ದಿದ್ದರೆ, ಮುಂದಿನ 2 ಟೆಸ್ಟ್‌ ಸರಣಿಗಳಲ್ಲೂ ನಾನು ರನ್‌ ಗಳಿಸಿರುತ್ತಿದ್ದೆ. ಅಂದಹಾಗೆ ಈಗಲೂ ಕೂಡ 6 ತಿಂಗಳ ಅಭ್ಯಾಸ ನಡೆಸಿ ಮೂರು ರಣಜಿ ಪಂದ್ಯಗಳನ್ನು ಆಡಿದರೆ ಟೆಸ್ಟ್‌ನಲ್ಲಿ ಭಾರತದ ಪರ ರನ್‌ ಗಳಿಸಬಲ್ಲೆ. 6 ತಿಂಗಳು ಬೇಡ 3 ತಿಂಗಳು ನೀಡಿ ಸಾಕು, ರನ್‌ ಗಳಿಸುತ್ತೇನೆ ಎಂದು ಸೌರವ್‌ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com