ಎಂಎಸ್ ಧೋನಿ ಮಾನಸಿಕ ಹಿಡಿತ ಅವರನ್ನು ಬೇರೆಯವರಿಗಿಂತ ಭಿನ್ನವಾಗಿಸಿದೆ: ಜಿಂಬಾಬ್ವೆ ಮಾಜಿ ನಾಯಕ

ಮಹೇಂದ್ರ ಸಿಂಗ್ ಧೋನಿ ಅವರ ಮಾನಸಿಕ ಕಠೋರತೆಯು ತನ್ನ ಸಮಕಾಲೀನರಿಂದ ಬೇರ್ಪಟ್ಟಿದೆ ಎಂದು ಜಿಂಬಾಬ್ವೆಯ ಮಾಜಿ ನಾಯಕ ಟಟೆಂಡಾ ತೈಬು ಅಭಿಪ್ರಾಯಪಟ್ಟಿದ್ದಾರೆ.
ಎಂಎಸ್ ಧೋನಿ
ಎಂಎಸ್ ಧೋನಿ

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಅವರ ಮಾನಸಿಕ ಸದೃಢತೆ ಅವರನ್ನು ವಿಶೇಷಗೊಳಿಸಿದೆ ಎಂದು ಜಿಂಬಾಬ್ವೆಯ ಮಾಜಿ ನಾಯಕ ಟಟೆಂಡಾ ಟೈಬು ಅಭಿಪ್ರಾಯಪಟ್ಟಿದ್ದಾರೆ.

ನಾನು ಧೋನಿ ಅವರನ್ನು ಮೊದಲ ಬಾರಿಗೆ ನೋಡಿದಾಗ ಅವನು ಇಂಡಿಯಾ ಎ ಸೈಡ್‌ನೊಂದಿಗೆ ಬಂದಿದ್ದರು. ಧೋನಿಗಿಂತ ಕಾರ್ತಿಕ್ ಹೆಚ್ಚು ನೈಸರ್ಗಿಕ ಎಂದು ನಾನು ಭಾವಿಸಿದ್ದೇನೆ. ಆದರೆ ಕೆಲವೊಂದ ತಂತ್ರಗಳಿಂದ ಧೋನಿ ವಿಭಿನ್ನವಾಗಿ ಕಾಣಿಸುತ್ತಾರೆ ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಟೈಬು ಹೇಳಿದ್ದಾರೆ.

ಧೋನಿ ಕೀಪಿಂಗ್ ಮಡುವಾಗ ಅವರ ಕೈಗಳು ಯಾವಾಗಲೂ ಜೊತೆಯಾಗಿರುವುದಿಲ್ಲ. ಇದು ಸ್ವಾಭಾವಿಕ ವಿಕೆಟ್ ಕೀಪಿಂಗ್ ಅಲ್ಲ. ಆದರೆ ತನ್ನದೇ ಆದ ತಂತ್ರದಿಂದ ಧೋನಿ ಉತ್ತಮವಾಗಿ ಆಡುತ್ತಾರೆ ಎಂದರು. 

ಧೋನಿ ಯಾವಾಗಲೂ ಚೆಂಡನ್ನು ಹಿಡಿಯಲು ಮತ್ತು ಬೇಲ್‌ಗಳನ್ನು ಒಂದು ವಿಭಿನ್ನ ತಂತ್ರದಿಂದ ಕ್ಷಣ ಮಾತ್ರದಲ್ಲಿ ಎಗರಿಸುತ್ತಾರೆ. ಜೊತೆಗೆ ಧೋನಿ ಬ್ಯಾಟಿಂಗ್ ತಂತ್ರವು ವಿಭಿನ್ನವಾಗಿದೆ. ಅವರ ಕೈ-ಕಣ್ಣಿನ ಸಮನ್ವಯ ಮತ್ತು ಮಾನಸಿಕ ಹಿಡಿತ ಬೇರೆಯವರಿಗಿಂತ ಅವರನ್ನು ಭಿನ್ನವಾಗಿಸಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com