ಕೊಹ್ಲಿ ಮಾಜಿ ಗೆಳತಿ ಜೊತೆ ಮಾತನಾಡಿದ್ದಕ್ಕಾಗಿ ನನ್ನನ್ನು ಸ್ಲೆಡ್ಜ್ ಮಾಡಿದ್ದರು: ನಿಕ್ ಕಾಂಪ್ಟನ್

2012ರಲ್ಲಿ ಭಾರತ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನನ್ನನ್ನು ಸ್ಲೆಡ್ಜ್ ಮಾಡಿದ್ದರು ಎಂದು ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ನಿಕ್ ಕಾಂಪ್ಟನ್ ಬಹಿರಂಗಪಡಿಸಿದ್ದಾರೆ. ಇನ್ನು ನಿಕ್ ಮಾಡತನಾಡಿರುವ ಕೊಹ್ಲಿಯ ಆ ಮಾಜಿ ಗೆಳತಿ ಯಾರು ಗೊತ್ತಾ.
ಕೊಹ್ಲಿ-ನಿಕ್
ಕೊಹ್ಲಿ-ನಿಕ್
Updated on: 

ಲಂಡನ್: 2012ರಲ್ಲಿ ಭಾರತ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ನನ್ನನ್ನು ಸ್ಲೆಡ್ಜ್ ಮಾಡಿದ್ದರು ಎಂದು ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ನಿಕ್ ಕಾಂಪ್ಟನ್ ಕಹಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಆ ಸರಣಿ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ ಕಾಂಪ್ಟನ್, ಇಂಗ್ಲೆಂಡ್ ಓಪನರ್ ಆಗಿ ಬ್ಯಾಟ್ ಬೀಸಿದ್ದರು. ಆದರೆ ನಾನು ಕೊಹ್ಲಿಯ ಮಾಜಿ ಗೆಳತಿ ಜೊತೆ ಮಾತನಾಡಿದ್ದೆ ಎಂಬ ಕಾರಣಕ್ಕೂ ಮುಂದಿನ ನಾಲ್ಕು ಟೆಸ್ಟ್ ಪಂದ್ಯಗಳವರೆಗೂ ನನ್ನನ್ನು ತಿರಸ್ಕಾರದ ಭಾವದಿಂದ ನೋಡಿದ್ದರು ಎಂದು ಕಾಂಪ್ಟನ್ ಹೇಳಿದ್ದಾರೆ. 

ಸರಣಿಗೂ ಮುನ್ನ ಅಹಮದಾಬಾದ್‌ನಲ್ಲಿ ನಡೆದ ಕೂಟವೊಂದರಲ್ಲಿ ನಾನು ಕೊಹ್ಲಿಯ ಮಾಜಿ ಗೆಳತಿಯೊಂದಿಗೆ ಮಾತನಾಡಿದ್ದೆಈ ವೇಳೆ ಮಾಜಿ ಕ್ರಿಕೆಟಿಗರಾದ ಕೆವಿನ್ ಪೀಟರ್ಸನ್ ಮತ್ತು ಯುವರಾಜ್ ಸಿಂಗ್ ಕೂಡ ಹಾಜರಿದ್ದರು ಎಂದು ಕಾಂಪ್ಟನ್ ಎಡ್ಜ್ ಮತ್ತು ಸ್ಲೆಡ್ಜಸ್ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.

ನಾನು ಆಕೆಯೊಂದಿಗೆ ಮಾತನಾಡಿದ್ದು ವಿರಾಟ್ ಕೊಹ್ಲಿ ಅವರಿಗೆ ಖುಷಿ ಕೊಟ್ಟಿದೆ ಎಂದು ನಾನು ಭಾವಿಸುವುದಿಲ್ಲ. ನಾನು ಬ್ಯಾಟಿಂಗ್ ಮಾಡಲು ಹೊರಟಾಗಲೆಲ್ಲಾ ಕೊಹ್ಲಿ ನನಗೆ ಅವಳು ನನ್ನ ಗೆಳತಿ ಎಂದು ಹೇಳಲು ಪ್ರಯತ್ನಿಸುತ್ತಿದ್ದರು. ಆದರೆ ಆಕೆ ಕೊಹ್ಲಿಯನ್ನು ಮಾಜಿ ಗೆಳೆಯ ಎಂದು ಹೇಳುತ್ತಿದ್ದಳು. ಇಲ್ಲಿ ಯಾವುದು ಸದ್ಯ ನನಗೆ ಗೊತ್ತಿಲ್ಲ. ನಾನು ಏನು ಹೇಳುತ್ತೇನೆಂದು ನಿಮಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಇಂಗ್ಲೆಂಡ್ ಪರ 16 ಟೆಸ್ಟ್ ಪಂದ್ಯಗಳನ್ನು ಆಡಿರುವ ಕಾಂಪ್ಟನ್ 775 ರನ್ ಬಾರಿಸಿದ್ದಾರೆ. ನಿಕ್ ಕಾಂಪ್ಟನ್ ಅವರು ಬ್ರೆಜಿಲ್ ಮಾಡೆಲ್ ಇಜಾಬೆಲ್ಲಾ ಲೈಟ್ ಬಗ್ಗೆ ಮಾತನಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com