ಸೈನಿ-ಜಡೇಜಾ ಜೊತೆಯಾಟ
ಸೈನಿ-ಜಡೇಜಾ ಜೊತೆಯಾಟ

2ನೇ ಏಕದಿನ: ಸೋಲಿನ ನಡುವೆಯೂ ದಾಖಲೆ ಬರೆದ ಸೈನಿ-ಜಡೇಜಾ ಜೋಡಿ!

ಆಕ್ಲೆಂಡ್ ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋತಿದೆಯಾದರೂ, ಸೋಲಿನ ನಡುವೆಯೂ ನವದೀಪ್ ಸೈನಿ ಮತ್ತು ರವೀಂದ್ರ ಜಡೇಜಾ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

ಆಕ್ಲೆಂಡ್: ಆಕ್ಲೆಂಡ್ ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋತಿದೆಯಾದರೂ, ಸೋಲಿನ ನಡುವೆಯೂ ನವದೀಪ್ ಸೈನಿ ಮತ್ತು ರವೀಂದ್ರ ಜಡೇಜಾ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

ಹೌದು.. ನ್ಯೂಜಿಲೆಂಡ್ ನೀಡಿದ್ದ 274 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ್ದ ಭಾರತ ತಂಡ ಕಿವೀಸ್ ಬೌಲರ್ ಗಳ ಮಾರಕ ವೇಗಕ್ಕೆ ತತ್ತರಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಹೊರತು ಪಡಿಸಿದರೆ ಇನ್ನಾವುದೇ ಆಟಗಾರನಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಶ್ರೇಯಸ್ ಅಯ್ಯರ್ ಔಟಾದ ಬಳಿಕ ಶಾರ್ದೂಲ್ ಠಾಕೂರ್ ಕೂಡ ವಿಕೆಟ್ ಒಪ್ಪಿಸಿದರು. ಈ ವೇಳೆ ತಂಡ ತೀವ್ರ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ 8ನೇ ವಿಕೆಟ್ ಗೆ ಜೊತೆಯಾದ ನವದೀಪ್ ಸೈನಿ ಮತ್ತು ರವೀಂದ್ರ ಜಡೇಜಾ ಜೋಡಿ 76ರನ್ ಗಳ ಅಮೋಘ ಜೊತೆಯಾಟವಾಡಿತು.

ಇದು ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದ 8ನೇ ವಿಕೆಟ್ 2ನೇ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ. ಈ ಹಿಂದೆ 1987ರಲ್ಲಿ ಕಪಿಲ್ ದೇವ್ ಮತ್ತು ಕಿರಣ್ ಮೋರೆ ಜೋಡಿ 8ನೇ ವಿಕೆಟ್ ನಲ್ಲಿ 82ರನ್ ಪೇರಿಸಿತ್ತು. ಇದು ಈ ವರೆಗಿನ ಗರಿಷ್ಛ ಸಾಧನೆಯಾಗಿದೆ. ಇದಕ್ಕೂ ಮೊದಲು 1986ರಲ್ಲಿ ರೋಜರ್ ಬಿನ್ನಿ ಮತ್ತು ಶರ್ಮಾ ಜೋಡಿ 53ರನ್ ಕಲೆಹಾಕಿದ್ದರು. ಇದು 3ನೇ ಗರಿಷ್ಠ ರನ್ ಗಳ ಜೊತೆಯಾಟವಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com