ಸೌರವ್ ಗಂಗೂಲಿ ದಾಖಲೆ ಮುರಿಯಲು ರನ್ ಮೆಷಿನ್ ಕೊಹ್ಲಿಗೆ ಬೇಕು ಕೇವಲ 11 ರನ್!

ಭಾರತೀಯ ಕ್ರಿಕೆಟ್ ನ ದಂತಕಥೆ ಸೌರವ್ ಗಂಗೂಲಿ ಅವರ ಮತ್ತೊಂದು ದಾಖಲೆ ಮುರಿಯಲು ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೂದಲೆಳೆ ಅಂತರದ ದೂರದಲ್ಲಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಕ್ರಿಕೆಟ್ ನ ದಂತಕಥೆ ಸೌರವ್ ಗಂಗೂಲಿ ಅವರ ಮತ್ತೊಂದು ದಾಖಲೆ ಮುರಿಯಲು ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೂದಲೆಳೆ ಅಂತರದ ದೂರದಲ್ಲಿದ್ದಾರೆ. 

ಹೌದು.. ಇದೇ ಫೆಬ್ರವರಿ 21 ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಭಾರತದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಹಲವರ ದಾಖಲೆ ಹಿಂದಿಕ್ಕಲಿದ್ದಾರೆ.

ಪ್ರಸ್ತುತ ವಿರಾಟ್ ಕೊಹ್ಲಿ ಸೌರವ್ ಗಂಗೂಲಿ ಅವರ ದಾಖಲೆ ಹಿಂದಿಕ್ಕಲು ಕೇವಲ 12 ರನ್ ಗಳ ಅಗತ್ಯವಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿ ಇದುವರೆಗೆ 84 ಟೆಸ್ಟ್‌ಗಳಲ್ಲಿ 54.97 ಸರಾಸರಿಯಲ್ಲಿ 7207 ರನ್ ಗಳಿಸಿದ್ದಾರೆ. ಗಂಗೂಲಿ ತಮ್ಮ ವೃತ್ತಿ ಜೀವನದಲ್ಲಿ 113 ಟೆಸ್ಟ್ ಪಂದ್ಯಗಳಲ್ಲಿ 42.17 ಸರಾಸರಿಯಲ್ಲಿ 7212 ರನ್ ಗಳಿಸಿದ್ದಾರೆ. ಗಂಗೂಲಿ ಸಾಧನೆ ಮೆಟ್ಟಿ ನಿಲ್ಲಲು ವಿರಾಟ್ ಕೊಹ್ಲಿ ಗೆ ಇನ್ನು ಕೇವಲ 11 ರನ್ ಅವಶ್ಯಕತೆ ಇದೆ. 

ಅಂತೆಯೇ ಕೊಹ್ಲಿ ಕ್ರಿಸ್ ಗೇಯ್ಲ್ (7214 ರನ್) ಅವರ ದಾಖಲೆಯನ್ನೂ ಹಿಂದಿಕ್ಕುವ ಸಾಧ್ಯತೆ ಇದೆ. ಭಾರತದ ಪರ ಅತೀ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 15,921 ರನ್ಗಳ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. 13,288 ರನ್ ಗಳಿಸಿರುವ ಸವ್ಯಸಾಚಿ ರಾಹುಲ್ ದ್ರಾವಿಡ್ 2ನೇ ಸ್ಥಾನದಲ್ಲಿದ್ದು, 10,122 ರನ್ ಗಳಿಸಿರುವ ಸುನಿಲ್ ಗವಾಸ್ಕರ್ 3ನೇ ಸ್ಥಾನದಲ್ಲಿದ್ದಾರೆ. 8781 ರನ್ ಗಳಿಸಿರುವ ವಿವಿಎಸ್ ಲಕ್ಷ್ಮಣ್ 4, 8503 ರನ್ ಗಳಿಸಿರುವ ವಿರೇಂದ್ರ ಸೆಹ್ವಾಗ್ 5 ಮತ್ತು 7212 ರನ್ ಗಳಿಸಿರುವ ಗಂಗೂಲಿ 6ನೇ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com