ವರ್ಣಬೇಧ ನೀತಿ ವಿರುದ್ಧ 'ಬೇರ್ ಫುಟ್ ಅಭಿಯಾನ'; ಮೈದಾನದಲ್ಲಿ ಬರಿಗಾಲಲ್ಲಿ ನಿಂತು ಬೆಂಬಲ ಸೂಚಿಸಿದ ಕ್ರಿಕೆಟಿಗರು

ವರ್ಣಬೇಧ ನೀತಿ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯಾ ಹಮ್ಮಿಕೊಂಡಿದ್ದ ಬೇರ್ ಫುಟ್ ಸರ್ಕಲ್ ಅಭಿಯಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಪಾಲ್ಗೊಂಡಿದ್ದರು.
ಬೇರ್ ಫುಟ್ ಸರ್ಕಲ್ ಅಭಿಯಾನದಲ್ಲಿ ಆಟಗಾರರು
ಬೇರ್ ಫುಟ್ ಸರ್ಕಲ್ ಅಭಿಯಾನದಲ್ಲಿ ಆಟಗಾರರು

ಸಿಡ್ನಿ: ವರ್ಣಬೇಧ ನೀತಿ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯಾ ಹಮ್ಮಿಕೊಂಡಿದ್ದ ಬೇರ್ ಫುಟ್ ಸರ್ಕಲ್ ಅಭಿಯಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಪಾಲ್ಗೊಂಡಿದ್ದರು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದ ಆರಂಭಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾದ ಆಟಗಾರರು ಬರಿಗಾಲಲ್ಲಿ ನಿಂತು ವರ್ಣಬೇಧ ನೀತಿ ವಿರುದ್ಧದ ಆಸ್ಟ್ರೇಲಿಯಾ ಹೋರಾಟಕ್ಕೆ ಬೆಂಬಲ ಸೂಚಿಸಿದರು.  ಈ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್  ಮಾಡಿದ್ದು, ಬೇರ್ ಫುಟ್ ಸರ್ಕಲ್, ಪರಸ್ಪರ ಎದುರಾಗಳಿಗಳು ಸಂಪರ್ಕ ಸಾಧಿಸಲು ಮತ್ತು ದೇಶಕ್ಕೆ ಗೌರವವನ್ನು ನೀಡಲು ತೆಗೆದುಕೊಳ್ಳುವ ಕ್ರಿಕೆಟ್ ಕೇಂದ್ರಿತ ಮಾರ್ಗವಾಗಿದೆ. ದೇಶಕ್ಕೆ ಸಂಪರ್ಕ ಸಾಧಿಸುವ ಮಾರ್ಗವಾಗಿ ಇದನ್ನು ಬರಿಗಾಲಿನಿಂದ ಮಾಡಲಾಗುತ್ತದೆ, ನಾವೆಲ್ಲರೂ  ಸಾಮಾನ್ಯ ನೆಲದಿಂದ ಬಂದವರು ಎಂದು ಪ್ರತಿಬಿಂಬಿಸುವ ಒಂದು ಕ್ಷಣ ಇದಾಗಿದ್ದು,  ನಾವೆಲ್ಲರೂ ಮಾನವರು ಮತ್ತು ನಾವು ಒಬ್ಬರಿಗೊಬ್ಬರು ಬಲವಾಗಿ ನಿಲ್ಲಬೇಕು ಎಂಬ ಸಂದೇಶ ಸಾರುತ್ತದೆ ಎಂದು ಟ್ವೀಟ್ ಮಾಡಿದೆ. 

ಇನ್ನು ಇದೇ ಪಂದ್ಯದಲ್ಲಿ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಲಿದ್ದಾರೆ, ಇತ್ತಿಚೆಗಷ್ಟೇ ನಿಧನರಾದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಣೆಕಾರ ಡೀನ್ ಜೋನ್ಸ್ ಮತ್ತು ದಿವಂಗತ ಆಸಿಸ್ ಆಟಗಾರ ಫಿಲಿಪ್ ಹ್ಯೂಸ್ ಅವರ ನಿಧನದ ವಾರ್ಷಿಕ ದಿನಾಚರಣೆ ನಿಮಿತ್ತ ಅವರ  ನೆನಪಿನಾರ್ಥವಾಗಿ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com