ಐಪಿಎಲ್ 2020: ಸೂಪರ್ ಓವರ್ ನಲ್ಲಿ ಹೈದರಾಬಾದ್ ವಿರುದ್ಧ ಗೆದ್ದ ಕೆಕೆಆರ್

ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ತೀವ್ರ ಕುತೂಹಲ ಮೂಡಿಸಿದ್ದು ಸೂಪರ್ ಓವರ್ ನಲ್ಲಿ ಕೆಕೆಆರ್ ಗೆದ್ದು ಬೀಗಿದೆ.
ಕೆಕೆಆರ್
ಕೆಕೆಆರ್

ದುಬೈ: ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ತೀವ್ರ ಕುತೂಹಲ ಮೂಡಿಸಿದ್ದು ಸೂಪರ್ ಓವರ್ ನಲ್ಲಿ ಕೆಕೆಆರ್ ಗೆದ್ದು ಬೀಗಿದೆ. 

ಹೈದರಾಬಾದ್ ಮತ್ತು ಕೆಕೆಆರ್ ನಡುವಿನ ಪಂದ್ಯ ಟೈ ಆಗಿತ್ತು. ಈ ಹಿನ್ನೆಲೆಯಲ್ಲಿ ಸೂಪರ್ ಓವರ್ ಮೊರೆ ಹೋಗಲಾಗಿತ್ತು. ಈ ಸೂಪರ್ ಓವರ್ ನಲ್ಲಿ ಕೆಕೆಆರ್ ತಂಡ ಎದುರಾಳಿ ತಂಡವನ್ನು 2 ರನ್ ಗೆ ಕಟ್ಟಿ ಹಾಕಿ ಗೆಲುವು ಸಾಧಿಸಿದೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಪೇರಿಸಿತ್ತು. 164 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ ಸಹ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಬಾರಿಸಿದ್ದು ಪಂದ್ಯ ಟೈ ಆಗಿತ್ತು. 

ಕೋಲ್ಕತ್ತಾ ಪರ ಶುಭ್ಮನ್ ಗಿಲ್ 36, ರಾಹುಲ್ ತ್ರಿಪಾಠಿ 23, ರಾಣಾ 29, ಇಯಾನ್ ಮೋರ್ಗನ್ 34 ರನ್ ಬಾರಿಸಿದ್ದರು. 

ಹೈದರಾಬಾದ್ ಪರ ಬ್ಯಾಟಿಂಗ್ ನಲ್ಲಿ ಬೈರ್ಸ್ಟೋವ್ 36, ಕೇನ್ ವಿಲಿಯಮ್ಸನ್ 29, ಡೇವಿಡ್ ವಾರ್ನರ್ 47, ಅಬ್ದುಲ್ ಸಮಾದ್ 23 ರನ್ ಸಿಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com