ಐಪಿಎಲ್ 2021: ದುಬೆ, ತೆವಾಟಿಯಾ ಅಬ್ಬರ, ಆರ್ಸಿಬಿಗೆ 178 ರನ್ ಗುರಿ ನೀಡಿದ ರಾಜಸ್ತಾನ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 14ನೇ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡ 177 ರನ್ ಪೇರಿಸಿದ್ದು ಆರ್ ಸಿಬಿಗೆ ಗೆಲ್ಲಲು 178 ರನ್ ಗಳ ಗುರಿ ನೀಡಿದೆ.
ಆರ್ ಸಿಬಿ
ಆರ್ ಸಿಬಿ
Updated on: 

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 14ನೇ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡ 177 ರನ್ ಪೇರಿಸಿದ್ದು ಆರ್ ಸಿಬಿಗೆ ಗೆಲ್ಲಲು 178 ರನ್ ಗಳ ಗುರಿ ನೀಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ರಾಜಸ್ತಾನ ಬ್ಯಾಟಿಂಗ್ ಮಾಡಿತ್ತು. ಆರಂಭಿಕ ಆಘಾತ ಎದುರಿಸಿದ್ದ ರಾಜಸ್ತಾನ 5 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಶಿವಂ ದುಬೆ 46 ಹಾಗೂ ರಾಹುಲ್ ತೆವಾಟಿಯಾ 40 ರನ್ ಬಾರಿಸಿ ತಂಡ ಸ್ಫರ್ಧಾತ್ಮಕ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

ರಾಜಸ್ತಾನ ಪರ ಜೋಸ್ ಬಟ್ಲರ್ 8, ಮನನ್ ವೊವ್ರಾ 7 ಮತ್ತು ಡೇವಿಡ್ ಮಿಲ್ಲರ್ ಶೂನ್ಯಕ್ಕೆ ಔಟಾಗಿದ್ದರು. ನಾಯಕ ಸಂಜು ಸ್ಯಾಮ್ಸನ್ 21 ಹಾಗೂ ರಿಯಾನ್ ಪರಾಗ್ 25 ರನ್ ಸಿಡಿಸಿದ್ದಾರೆ.

ಬೆಂಗಳೂರು ಪರ  ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ 3 ಮತ್ತು ಜ್ಯಾಮಿನ್ಸನ್, ರಿಚರ್ಡ್ಸನ್ ಮತ್ತು ಸುಂದರ್ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com