ಡಬ್ಲ್ಯುಟಿಸಿ ಫೈನಲ್: 5ನೇ ದಿನದಾಟ ಮಳೆಯಿಂದಾಗಿ ತಡವಾಗಿ ಆರಂಭ; ಇಲ್ಲಿದೆ ಲೈವ್ ಸ್ಕೋರ್!

ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ) ಫೈನಲ್‌ ಪಂದ್ಯದ 5ನೇ ದಿನದಾಟ ಮಳೆಯಿಂದಾಗಿ ತಡವಾಗಿ ಆರಂಭವಾಗಿದೆ.
ಭಾರತ-ನ್ಯೂಜಿಲ್ಯಾಂಡ್
ಭಾರತ-ನ್ಯೂಜಿಲ್ಯಾಂಡ್
Updated on

ಸೌತಾಂಪ್ಟನ್: ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್(ಡಬ್ಲ್ಯುಟಿಸಿ) ಫೈನಲ್‌ ಪಂದ್ಯದ 5ನೇ ದಿನದಾಟ ಮಳೆಯಿಂದಾಗಿ ತಡವಾಗಿ ಆರಂಭವಾಗಿದೆ. 

ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ನಡೆಯುತ್ತಿರುವ ಪಂದ್ಯ ಮಳೆಯಿಂದಾಗಿ ಮೊದಲನೇ ಹಾಗೂ ನಾಲ್ಕನೇ ದಿನದಾಟ ಸ್ಥಗಿತಗೊಂಡಿತ್ತು. ಇಂದು ಸಹ ಮಳೆ ಬೀಳುತ್ತಿದ್ದರಿಂದ ಪಂದ್ಯ ತಡವಾಗಿ ಆರಂಭವಾಗಿದೆ ಎಂದು ಐಸಿಸಿ ಟ್ವೀಟ್ ಮಾಡಿದೆ. 

ಆಟ ಪ್ರಾರಂಭಕ್ಕೂ 20 ನಿಮಿಷಗಳ ಮುಂಚೆ ತುಂತುರು ಮಳೆ ಬೀಳಲು ಪ್ರಾರಂಭವಾಯಿತು. ಹೀಗಾಗಿ ಮೈದಾನದ ಸಿಬ್ಬಂದಿ ಚುರುಕಿನಿಂದ ಮೈದಾನವನ್ನು ಸ್ವಚ್ಛಗೊಳಿಸಿದ್ದು ಸದ್ಯ ಪಂದ್ಯ ಆರಂಭವಾಗಿದೆ. 

ಸದ್ಯ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲ್ಯಾಂಡ್ 3 ವಿಕೆಟ್ ನಷ್ಟಕ್ಕೆ 117 ರನ್ ಬಾರಿಸಿದೆ. ಕಿವೀಸ್ ಪರ ಕೇನ್ ವಿಲಿಯಮ್ಸನ್ ಅಜೇಯ 14 ರನ್ ಬಾರಿಸಿ ಆಡುತ್ತಿದ್ದಾರೆ. 

ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 217 ರನ್ ಗಳಿಗೆ ಆಲೌಟ್ ಆಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com