ರವಿಶಾಸ್ತ್ರಿ
ರವಿಶಾಸ್ತ್ರಿ

ಭಾರತೀಯ ಕ್ರಿಕೆಟ್ ಆಟಗಾರರ ಮಾನಸಿಕ ಹಾಗೂ ದೈಹಿಕ ಬಳಲಿಕೆಯೇ ಸೋಲಿಗೆ ಕಾರಣ: ರವಿಶಾಸ್ತ್ರಿ

ಭಾರತೀಯ ತಂಡ ನಮೀಬಿಯ ಎದುರು 9 ವಿಕೆಟ್ಗಳ ಜಯ ಗಳಿಸಿದ ನಂತರ ಅವರು ಮಾತನಾಡುತ್ತಿದ್ದರು. ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಇದುವರೆಗೂ ಹೊಣೆ ನಿರ್ವಹಿಸಿದ್ದ ರವಿ ಶಾಸ್ತ್ರಿ ಅವಧಿ ಇಂದಿಗೆ ಕೊನೆಗೊಳ್ಳಲಿದೆ.

ದುಬೈ: ಟಿ20 ವಿಶ್ವಕಪ್ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲಿದ್ದರು, ಹೀಗಾಗಿಯೇ ಅವರು ಜಯ ಗಳಿಸಲೂ ಪ್ರಯತ್ನಿಸಲು ಆಗಲಿಲ್ಲ ಎಂದು ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಭಾರತ ಟಿ20 ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದಿದೆ.

ಭಾರತೀಯ ತಂಡ ನಮೀಬಿಯ ಎದುರು 9 ವಿಕೆಟ್ಗಳ ಜಯ ಗಳಿಸಿದ ನಂತರ ಅವರು ಮಾತನಾಡುತ್ತಿದ್ದರು. ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಇದುವರೆಗೂ ಹೊಣೆ ನಿರ್ವಹಿಸಿದ್ದ ರವಿ ಶಾಸ್ತ್ರಿ ಅವಧಿ ಇಂದಿಗೆ ಕೊನೆಗೊಳ್ಳಲಿದೆ. ಮುಂದೆ ಕರ್ನಾಟಕರ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಹುದ್ದೆ ನಿರ್ವಹಿಸಲಿದ್ದಾರೆ. 

ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಎದುರು ಭಾರತ ಸೋತಿದ್ದರ ಕುರಿತು ಪ್ರಶ್ನಿಸಿದಾಗ ರವಿ ಶಾಸ್ತ್ರಿ, ವಿಶ್ರಾಂತಿಯ ಕೊರತೆ ಸೋಲಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ತಾವು ಸೋಲನ್ನು ನಿರಾಕರಿಸುತ್ತಿಲ್ಲ. ಸೋತಿದ್ದಕ್ಕೆ ನೆವ ಹೇಳುತ್ತಿಲ್ಲ. ಅದನ್ನು ಸ್ವೀಕರಿಸಿದ್ದೇವೆ. ಇದೇ ಸಮಯದಲ್ಲಿ ನಾವು ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿಯೂ ಹೆದರುವುದಿಲ್ಲ ಎಂದು ಹೇಳಬಯಸುತ್ತೇವೆ.

Related Stories

No stories found.

Advertisement

X
Kannada Prabha
www.kannadaprabha.com