ಎಬಿ ಡಿವಿಲಿಯರ್ಸ್ ಶೀಘ್ರ ತಂಡಕ್ಕೆ ಮರಳಲಿದ್ದಾರೆ: ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಆರ್‌ಸಿಬಿ

ಮುಂದಿನ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ಸಿದ್ಧತೆಗಳು ಭರ್ಜರಿಯಾಗಿ ಆರಂಭವಾಗಿದ್ದು, ಇದರ ನಡುವೆಯೇ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸಿಹಿಸುದ್ದಿಯೊಂದನ್ನು ನೀಡಿದೆ.
ಎಬಿಡಿ-ಕೊಹ್ಲಿ
ಎಬಿಡಿ-ಕೊಹ್ಲಿ

ಬೆಂಗಳೂರು: ಮುಂದಿನ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ (IPL)ಗೆ ಸಿದ್ಧತೆಗಳು ಭರ್ಜರಿಯಾಗಿ ಆರಂಭವಾಗಿದ್ದು, ಇದರ ನಡುವೆಯೇ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸಿಹಿಸುದ್ದಿಯೊಂದನ್ನು ನೀಡಿದೆ.

ಇತ್ತೀಚೆಗಷ್ಟೇ ಐಪಿಎಲ್ ಸೇರಿದಂತೆ ಎಲ್ಲ ರೀತಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಎಬಿ ಡಿವಿಲಿಯರ್ಸ್ "ಶೀಘ್ರದಲ್ಲೇ ಬೆಂಗಳೂರಿಗೆ ಮರಳಲಿದ್ದಾರೆ" ಎಂದು ಹೇಳಿದೆ. ಆದರೆ ಡಿವಿಲಿಯರ್ಸ್ ಯಾವ ಪಾತ್ರದಲ್ಲಿ ತಂಡ ಸೇರಲಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಹೇಳಿಲ್ಲ. 

"ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಫಾರೆವರ್! ಕಳೆದ ವರ್ಷ ಈ ದಿನದಂದು ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷ ತಂದ ವ್ಯಕ್ತಿ, ನಮ್ಮ ನೆಚ್ಚಿನ ಸೂಪರ್ ಹೀರೋ, @ABdeVilliers17, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಆದರೆ... ಅವರು ಶೀಘ್ರದಲ್ಲೇ ಬೆಂಗಳೂರಿಗೆ ಹಿಂತಿರುಗುತ್ತಾರೆ. ! #PlayBold #ABForever," ಎಂದು RCB ಟ್ವೀಟ್ ಮಾಡಿದೆ.

ಡಿವಿಲಿಯರ್ಸ್ ಇತ್ತೀಚೆಗೆ ಬೆಂಗಳೂರಿನಲ್ಲಿದ್ದರು ಎಂಬುದು ಗಮನಾರ್ಹ. ಅವರ ನೋಟವು ಕೆಲವು ಸಾಮರ್ಥ್ಯದಲ್ಲಿ RCB ಗೆ ಹಿಂದಿರುಗುವ ಬಗ್ಗೆ ಊಹಾಪೋಹಗಳನ್ನು ಹೆಚ್ಚಿಸಿತು. "ಮುಂದಿನ ವರ್ಷದ ಐಪಿಎಲ್‌ಗಾಗಿ ಆರ್‌ಸಿಬಿ ಹುಡುಗರೊಂದಿಗೆ ಚಾಟ್ ಮಾಡಲು ನಾನು ಇಲ್ಲಿದ್ದೇನೆ" ಎಂದು ಡಿವಿಲಿಯರ್ಸ್ ನವೆಂಬರ್ 3 ರಂದು ಫ್ರಾಂಚೈಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದರು.

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಒಂದು ವರ್ಷವಾಗಿದೆ. 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದ ಎಬಿಡಿ ಟಿ20 ಲೀಗ್​ಗಳಲ್ಲಿ ಆಡುತ್ತಿದ್ದರು. ಆದರೆ ಕಳೆದ ವರ್ಷ ನವೆಂಬರ್ 19 ರಂದು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಎಬಿಡಿ ನಿವೃತ್ತಿ ಆರ್​ಸಿಬಿ ಅಭಿಮಾನಿಗಳಿಗೆ ಸಡನ್ ಶಾಕ್ ನೀಡಿತ್ತು. ಏಕೆಂದರೆ ಆರ್​ಸಿಬಿ ಆಪತ್ಬಾಂಧವ ಎಂದಲೇ ಪ್ರಸಿದ್ಧರಾಗಿದ್ದ ಡಿವಿಲಿಯರ್ಸ್ ಆರ್​ಸಿಬಿ ಪರವಾಗಿ ಅದೇಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದರು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಎಬಿಡಿಯ ವಿಶೇಷ ವೀಡಿಯೊವನ್ನು ಹಂಚಿಕೊಂಡು ಅವರಿಗೆ ವಿದಾಯ ಹೇಳಿತ್ತು.

ತಂಡಕ್ಕೆ ಮತ್ತೆ ಎಂಟ್ರಿಕೊಡುತ್ತಿರುವ ಡಿವಿಲಿಯರ್ಸ್ ತಂಡದ ಸಹಾಯಕ ಸಿಬ್ಬಂದಿಯಾಗಿ ಕಾಣಿಸಿಕೊಳ್ಳಬಹುದು ಎಂಬ ವರದಿಗಳಿವೆ. ವಾಸ್ತವವಾಗಿ, ಎಬಿಡಿ ತನ್ನ ನಿವೃತ್ತಿಯನ್ನು ಘೋಷಿಸುವ ಸಮಯದಲ್ಲಿ, 2023 ರ ಸೀಸನ್​ನಲ್ಲಿ ಮತ್ತೆ RCB ಗೆ ಮರುಸೇರ್ಪಡೆಯಾಗುವುದಾಗಿ ಹೇಳಿದ್ದರು. ಡಿವಿಲಿಯರ್ಸ್ ಐಪಿಎಲ್‌ನಲ್ಲಿ 150ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದು ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಐಪಿಎಲ್‌ನಲ್ಲಿ ಸಾಕಷ್ಟು ವರ್ಷ ಆರ್​ಸಿಬಿ ಪರ ಆಡಿದ ಎಬಿಡಿಗೆ ಆರ್‌ಸಿಬಿ ಹಾಲ್ ಈ ವರ್ಷ ಆಫ್ ಫೇಮ್‌ ಗೌರವ ನೀಡಿ ಸತ್ಕರಿಸಿತ್ತು. 

ಡಿವಿಲಿಯರ್ಸ್ ಅವರು 2011-2021ರಲ್ಲಿ 157 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಅವರು 41.10 ರ ಸರಾಸರಿಯಲ್ಲಿ 4,522 ರನ್ ಗಳಿಸಿದ್ದು, ಅವರು 158 ಸ್ಟ್ರೈಕ್ ರೇಟ್‌ನಲ್ಲಿ ಎರಡು ಶತಕ ಮತ್ತು 37 ಅರ್ಧಶತಕಗಳನ್ನು ಗಳಿಸಿದ್ದಾರೆ. ಗಮನಾರ್ಹವಾಗಿ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ದೊಡ್ಡ ಹೆಸರುಗಳನ್ನು ಉಳಿಸಿಕೊಂಡಿದೆ, ವೆಸ್ಟ್ ಇಂಡೀಸ್ ಬ್ಯಾಟರ್ ಶೆರ್ಫೇನ್ ರುದರ್‌ಫೋರ್ಡ್ ಫ್ರಾಂಚೈಸ್ ಬಿಡುಗಡೆ ಮಾಡಿದ ಏಕೈಕ ದೊಡ್ಡ ಹೆಸರಾಗಿದೆ. ಉಳಿದಂತೆ ತಂಡದ ದೈತ್ಯ ಆಟಗಾರರಾದ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹೇಜಲ್‌ವುಡ್ ಅವರನ್ನೊಳಗೊಂಡ ತಂಡವನ್ನು ಉಳಿಸಿಕೊಳ್ಳಲಾಗಿದೆ. 

ಸತತ ಮೂರು ಬಾರಿ ಪ್ಲೇಆಫ್‌ಗಳಿಗೆ ಅರ್ಹತೆ ಪಡೆದ ನಂತರ, RCB ತನ್ನ ಮೊದಲ ಟ್ರೋಫಿಯನ್ನು ಗೆಲ್ಲಲು ತನ್ನ ಪ್ರಮುಖ ಆಟಗಾರರನ್ನು ಆಯ್ಕೆ ಮಾಡುತ್ತಿದೆ, ರಜತ್ ಪಾಟಿದಾರ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ ಮತ್ತು ಫಿನ್ ಅಲೆನ್ ಅವರಂತಹ ಯುವ ಆಟಗಾರರಿಂದ ಬೆಂಬಲವನ್ನು ಪಡೆಯಬಹುದು. ಆರ್ ಸಿಬಿ ಖಾತೆಯಲ್ಲಿ ಇನ್ನೂ 8.75 ಕೋಟಿ ರೂ ಉಳಿದಿದ್ದು, ಎರಡು ಸಾಗರೋತ್ತರ ಅಂದರೆ ವಿದೇಶಿ ಆಟಗಾರರ ಸ್ಲಾಟ್‌ಗಳು ಖಾಲಿ ಉಳಿದಿವೆ. 

ಕಳೆದ ಋತುವಿನಲ್ಲೂ ತಂಡವು ಪ್ಲೇಆಫ್‌ಗೆ ತಲುಪಿತ್ತು. ಹೀಗಾಗಿ ಈ ಬಾರಿ ಪ್ರಶಸ್ತಿ ಮೇಲೆ ಕಣ್ಮಿಟ್ಟಿರುವ ಆರ್ ಸಿಬಿ ಹರಾಜಿನಲ್ಲಿ ಇಬ್ಬರು ಪ್ರಬಲ ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆಯುವ ಸಾದ್ಯತೆ ಇದೆ. 

ಆರ್ ಸಿಬಿ ತಂಡದಿಂದ ಬಿಡುಗಡೆಯಾದ ಆಟಗಾರರು:
ಜೇಸನ್ ಬೆಹ್ರೆಂಡಾರ್ಫ್, ಅನೀಶ್ವರ್ ಗೌತಮ್, ಚಾಮಾ ಮಿಲಿಂದ್, ಲುವ್ನಿತ್ ಸಿಸೋಡಿಯಾ, ಶೆರ್ಫೇನ್ ರುದರ್‌ಫೋರ್ಡ್

ಪ್ರಸ್ತುತ ತಂಡ: 
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್, ಮಹಿಪಾಲ್, ಮಹಿಪಾಲ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com