ಹೋಟೆಲ್ ರೂಮ್ ವಿಡಿಯೋ ಲೀಕ್, ದಿಗಿಲುಗೊಂಡ ವಿರಾಟ್ ಕೊಹ್ಲಿ!

ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪರ್ತ್ ನ ಹೊಟೇಲ್ ವೊಂದರಲ್ಲಿ ತಂಗಿರುವ ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ, ಭಯಾನಕ ಅನುಭವೊಂದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಈ ಘಟನೆಯಿಂದ ತನ್ನ ಖಾಸಗಿತನದ  ಬಗ್ಗೆ ಮಾನಸಿಕವಾಗಿ ದಿಗಿಲುಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. 
ವಿರಾಟ್ ಕೊಹ್ಲಿ ಕೊಠಡಿಯ ವಿಡಿಯೋ ಲೀಕ್
ವಿರಾಟ್ ಕೊಹ್ಲಿ ಕೊಠಡಿಯ ವಿಡಿಯೋ ಲೀಕ್
Updated on

ಪರ್ತ್: ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪರ್ತ್ ನ ಹೊಟೇಲ್ ವೊಂದರಲ್ಲಿ ತಂಗಿರುವ ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ, ಭಯಾನಕ ಅನುಭವೊಂದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಈ ಘಟನೆಯಿಂದ ತನ್ನ ಖಾಸಗಿತನದ  ಬಗ್ಗೆ ಮಾನಸಿಕವಾಗಿ ದಿಗಿಲುಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ಕೊಹ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರು ಇಲ್ಲದಿದ್ದಾಗ ಅವರ ಕೊಠಡಿಯೊಳಗೆ ಯಾರೋ ಬಂದಿದ್ದು, ವಿಡಿಯೋ ಮಾಡಿದ್ದಾರೆ. ಕೊಹ್ಲಿಯ ಸೂಟ್ ಕೇಸ್, ಬಟ್ಟೆ ಇಡುವ ಸ್ಥಳ, ಶೂ, ಗ್ಲಾಸ್ ಗಳು  ಮತ್ತಿತರ ವಸ್ತುಗಳ ಸ್ಪಷ್ಟವಾಗಿ ಗೋಚರಿಸುತ್ತಿವೆ. ಪ್ರತಿಯೊಬ್ಬರ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿರುವ ಕೊಹ್ಲಿ, ಅವರನ್ನು ಮನರಂಜನೆಯ ಸರಕನ್ನಾಗಿ ಉಪಚರಿಸದಂತೆ ಕೇಳಿಕೊಂಡಿದ್ದಾರೆ. 

ಅಭಿಮಾನಿಗಳು ತನ್ನ ಅಚ್ಚುಮೆಚ್ಚಿನ ಆಟಗಾರನ್ನು ನೋಡಿದರೆ ತುಂಬಾ ಸಂತೋಷಗೊಳ್ಳುತ್ತಾರೆ ಎಂಬುದು ನನಗೆ ಗೊತ್ತು. ಆದರೆ, ಈ ವಿಡಿಯೋ ನನ್ನ ಖಾಸಗಿತನದ ಬಗ್ಗೆ ದಿಗಿಲು ಮೂಡಿಸಿದೆ. ನನ್ನ ಹೋಟೆಲ್  ರೂಮ್ ನಲ್ಲಿ ಖಾಸಗಿತನ ಹೊಂದದಿದ್ದಾಗ ತನ್ನ ಖಾಸಗಿತನವನ್ನು ಬೇರೆಲ್ಲಿ ಹೊಂದಬಹುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಈ ರೀತಿಯ ಖಾಸಗಿತನಕ್ಕೆ ಧಕ್ಕೆ ತರುವುದು ಸರಿಯಲ್ಲ, ಜನರ ಖಾಸಗಿತನವನ್ನು ಗೌರವಿಸಿ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com