5ನೇ ಟೆಸ್ಟ್: ಒಂದೇ ಓವರ್ ನಲ್ಲಿ 35 ರನ್ ಚಚ್ಚಿ, ಬ್ರಾಡ್ ಬೆವರಿಳಿಸಿದ ಬುಮ್ರಾ, 18 ವರ್ಷ ಹಳೆಯ ಲಾರಾ ದಾಖಲೆ ಪತನ!

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಟಗಾರನೋರ್ವ ಮತ್ತೆ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ರ ಬೆವರಿಳಿಸಿದ್ದು, ಒಂದೇ ಓವರ್ ನಲ್ಲಿ 35 ರನ್ ಗಳನ್ನು ಚಚ್ಚಿದ್ದಾರೆ.
ಜಸ್ ಪ್ರೀತ್ ಬುಮ್ರಾ ದಾಖಲೆ
ಜಸ್ ಪ್ರೀತ್ ಬುಮ್ರಾ ದಾಖಲೆ

ಎಡ್ಜ್ ಬ್ಯಾಸ್ಟನ್: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಟಗಾರನೋರ್ವ ಮತ್ತೆ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ರ ಬೆವರಿಳಿಸಿದ್ದು, ಒಂದೇ ಓವರ್ ನಲ್ಲಿ 35 ರನ್ ಗಳನ್ನು ಚಚ್ಚಿದ್ದಾರೆ.

ಹೌದು.. ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಹಾಗೂ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ರಿಷಬ್ ಪಂತ್ ಮತ್ತು ರವೀಂಜ್ರ ಜಡೇಜಾರ ಅಮೋಘ ಶತಕಗಳ ನೆರವಿನಿಂದ 416 ರನ್ ಗಳನ್ನು ಕಲೆ ಹಾಕಿದ್ದು, ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನ ಅಂತಿಮ ಹಂತದಲ್ಲಿ ಭಾರತ ತಂಡದ ನಾಯಕ ಜಸ್ ಪ್ರೀತ್ ಬುಮ್ರಾ ಅಕ್ಷರಶಃ ಮಾಜಿ ಆಟಗಾರ ಯುವರಾಜ್ ಸಿಂಗ್ ರನ್ನು ನೆನಪಿಸಿದ್ದರು. 

2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಪ್ಟೆಂಬರ್ 19ರಂದು ಡರ್ಬನ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ 36 ರನ್ ಕಲೆಹಾಕಿದ್ದರು. ಈ ಓವರ್ ನಲ್ಲಿ ಯುವಿ 6 ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದ್ದರು. ಅಂತಹುದೇ ಓವರ್ ಅನ್ನು ಇಂದು ಬುಮ್ರಾ ನೆನಪಿಸಿದರು. 

ಒಂದೇ ಓವರ್ ನಲ್ಲಿ 35 ರನ್
ಇನಿಂಗ್ಸ್​ನ 84ನೇ ಓವರ್ ಬೌಲ್ ಮಾಡಿದ ಬ್ರಾಡ್ 35 ರನ್ ನೀಡಿದರು. ಬ್ರಾಡ್ ಎಸೆದ 84ನೇ ಓವರ್ ನ ಮೊದಲ ಎಸೆತವನ್ನೇ ಬುಮ್ರಾ ಬೌಂಡರಿಗೆ ಅಟ್ಟಿದ್ದರು. ಮೊದಲ ಎಸೆತೆದ ವೈಫಲ್ಯದಿಂದ ದೃತ್ತಿಗೆಟ್ಟಿದ್ದ ಬ್ರಾಡ್ ಎರಡನೇ ಎಸೆತವನ್ನು ಬೌನ್ಸರ್ ಎಸೆದರು. ಆದರೆ ದುರಾದೃಷ್ಟವಶಾತ್ ಅದು ಬುಮ್ರಾ ತಲೆ ಮೇಲಿಂದ ಹಾಕಿ ಕೀಪರ್ ಕೈಗೂ ಸಿಗದೇ ಬೌಂಡರಿ ಗೆರೆ ದಾಟಿತ್ತು. ಇದನ್ನು ಅಂಪೈರ್ ವೈಡ್ ಎಂದು ಘೋಷಣೆ ಮಾಡಿದರು. ಹೀಗಾಗಿ ಈ ಎಸೆತದಲ್ಲಿ ಭಾರತಕ್ಕೆ 5 ರನ್ ದೊರೆಯಿತು. ಬಳಿಕ ಎಸೆದ ಎಸೆತದಲ್ಲಿ ಬುಮ್ರಾ ಸಿಕ್ಸರ್ ಸಿಡಿಸಿದರೆ ಆ ಎಸೆತವನ್ನು ಅಂಪೈರ್ ನೋಬಾಲ್ ಎಂದು ಘೋಷಣೆ ಮಾಡಿದರು. 

ಇಲ್ಲಿ ತಂಡಕ್ಕೆ 7ರನ್ ದೊರೆಯಿತು. ಬಳಿಕ ಬ್ರಾಡ್ ಎಸೆದ ಮೂರು ಎಸೆತಗಳನ್ನು ಬುಮ್ರಾ ನಿರ್ಧಾಕ್ಷೀಣ್ಯವಾಗಿ ಬೌಂಡರಿಗೆ ಅಟ್ಟಿದರು. ಐದನೇ ಎಸೆತದಲ್ಲೂ ಕರುಣೆ ತೋರದ ಬುಮ್ರಾ ಸಿಕ್ಸರ್ ಸಿಡಿಸಿದರು. ಅಷ್ಟು ಹೊತ್ತಿಗಾಗಲೇ ಬ್ರಾಡ್ 34 ರನ್ ನೀಡಿ ಹೈರಾಣಾಗಿದ್ದರು. ಅಂತಿಮ ಎಸೆತದಲ್ಲಿ ಬುಮ್ರಾ 1 ರನ್ ಪಡೆದು ಸ್ಚ್ರೈಕ್ ರೊಟೇಟ್ ಮಾಡಿಕೊಂಡರು. ಆದರೆ ಅಷ್ಟು ಹೊತ್ತಿಗಾಗಲೇ ಬುಮ್ರಾ ಇಂಗ್ಲೆಂಡ್ ವೇಗಿ ಬ್ರಾಡ್ ಬೆವರಿಳಿಸಿದ್ದರು. ಈ ಓವರ್ 2007ರ ಟಿ20 ವಿಶ್ವಕಪ್ ಟೂರ್ನಿಯ ಯುವಿ ಆಟವನ್ನು ನೆನಪಿಸುವಂತೆ ಇತ್ತು. 

ಲಾರಾ ದಾಖಲೆ ಮುರಿದ ಬುಮ್ರಾ
ಈ ಅಮೋಘ ಬ್ಯಾಟಿಂಗ್ ಮೂಲಕ ಬುಮ್ರಾ ತಂಡಕ್ಕೆ ನೆರವಾಗಿತ್ತು ಮಾತ್ರವಲ್ಲದೇ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಅವರ 18 ವರ್ಷಗಳ ಹಿಂದಿನ ದಾಖಲೆ ಮುರಿದರು. ಲಾರಾ 2004 ರಲ್ಲಿ ಒಂದು ಓವರ್‌ನಲ್ಲಿ 28 ರನ್ ಗಳಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
- 35 ಜಸ್ರ್ಪೀತ್ ಬುಮ್ರಾ (ಬೌಲರ್ ಸ್ಟುವರ್ಟ್ ಬ್ರಾಡ್) ಬರ್ಮಿಂಗ್ಹ್ಯಾಮ್ 2022
- 28 ಬ್ರಿಯಾನ್ ಲಾರಾ (ಬೌಲರ್ ಆರ್ ಪೀಟರ್ಸನ್) ಜೋಹಾನ್ಸ್‌ಬರ್ಗ್ 2003
- 28 ಜಿ ಬೈಲಿ ಆಫ್ ( ಬೌಲರ್ ಜೆ ಆಂಡರ್ಸನ್) ಪರ್ತ್ 2013
- 28 ಕೆ ಮಹಾರಾಜ್ (ಬೌಲರ್ ಜೆ ರೂಟ್) ಪೋರ್ಟ್ ಎಲಿಜಬೆತ್ 2020

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com