IPL 2023: ಅಲ್ಪ ಮೊತ್ತಕ್ಕೆ ಮುಗ್ಗರಿಸಿದ RCB; ಲಖನೌಗೆ 127 ರನ್ ಗುರಿ!

ಐಪಿಎಲ್ 2023ರ 16ನೇ ಆವೃತ್ತಿಯಲ್ಲಿ ಆರ್ ಸಿಬಿ ತಂಡ ಅಲ್ಪ ಮೊತ್ತಕ್ಕೆ ಕುಸಿದಿದ್ದು ಲಖನೌಗೆ ಗೆಲ್ಲಲು 127 ರನ್ ಗುರಿ ನೀಡಿದೆ.
ಕೊಹ್ಲಿ
ಕೊಹ್ಲಿ
Updated on: 

ಬೆಂಗಳೂರು: ಐಪಿಎಲ್ 2023ರ 16ನೇ ಆವೃತ್ತಿಯಲ್ಲಿ ಆರ್ ಸಿಬಿ ತಂಡ ಅಲ್ಪ ಮೊತ್ತಕ್ಕೆ ಕುಸಿದಿದ್ದು ಲಖನೌಗೆ ಗೆಲ್ಲಲು 127 ರನ್ ಗುರಿ ನೀಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತ್ತು. ಆರಂಭಿಕರಾಗಿ ಕಣಕ್ಕೀಳಿದ ವಿರಾಟ್ ಕೊಹ್ಲಿ 31 ರನ್ ಗಳಿಸಿ ಔಟಾದರೆ, ಫಾಫ್ ಡುಪ್ಲೇಸಿಸ್ ಅಜೇಯ 44 ರನ್ ಗಳಿಸಿ ಔಟಾದರು. 

ಆರ್ ಸಿಬಿ 4 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿದ್ದು ಹೀಗಾಗಿ ಕೆಲಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಪಂದ್ಯ ಪುನರಾರಂಭವಾಗಿದ್ದು ಅಂತಿಮವಾಗಿ ಆರ್ ಸಿಬಿ 9 ವಿಕೆಟ್ ನಷ್ಟಕ್ಕೆ 126 ರನ್ ಪೇರಿಸಿದೆ.

ಇನ್ನುಳಿದಂತೆ ಅನುಜ್ ರಾವತ್ 9, ಗ್ಲೇನ್ ಮ್ಯಾಕ್ಸ್ ವೆಲ್ 4, ಸುಯಶ್ ಪ್ರಭುದೇಸಾಯಿ 6 ರನ್ ಗಳಿಸಿ ಔಟಾಗಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ 16 ರನ್ ಗಳಿಸಿ ಔಟಾಗಿದ್ದಾರೆ.

ಲಖನೌ ಪರ ನವೀನ್ ಉಲ್ ಹಕ್ 3, ರವಿ ಬಿಷ್ಣೋಯ್ ಮತ್ತು ಅಮಿತ್ ಮಿಶ್ರಾ ತಲಾ 2 ವಿಕೆಟ್ ಹಾಗೂ ಗೌತಮ್ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com