ರಿಂಕು, ರಾಣಾ ಅಬ್ಬರ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತಾ ಗೆ 6 ವಿಕೆಟ್ ಜಯ!

ಚೆನ್ನೈ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕೋಲ್ಕತಾ 6 ವಿಕೆಟ್ ಗಳ ಜಯ ಗಳಿಸಿದೆ.
ಕೋಲ್ಕತ್ತ ತಂಡ
ಕೋಲ್ಕತ್ತ ತಂಡ
Updated on

ಚೆನ್ನೈ: ಚೆನ್ನೈ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕೋಲ್ಕತಾ 6 ವಿಕೆಟ್ ಗಳ ಜಯ ಗಳಿಸಿದೆ.

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕೋಲ್ಕತಾ ಉತ್ತಮ ಪ್ರದರ್ಶನ ನೀಡಿತು.

ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 6 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತಾ ಕೋಲ್ಕತ್ತಾ 18.3 ಓವರ್‌ಗಳಲ್ಲಿ 147 ರನ್‌ ಗಳಿಸುವ ಮೂಲಕ ಗೆಲುವನ್ನು ತನ್ನದಾಗಿಸಿಕೊಂಡಿತು.

ಕೋಲ್ಕತಾ ಆರಂಭದಲ್ಲಿ ಬಹುಬೇಗ ಅಂದರೆ 33 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿತು. ಆದರೆ 4 ನೇ ವಿಕೆಟ್ ಗೆ ಜೊತೆಯಾದ ನಿತೀಶ್‌ ರಾಣಾ (44 ಎಸೆತಗಳಲ್ಲಿ 57 ರನ್) ಮತ್ತು ರಿಂಕು ಸಿಂಗ್ (43 ಎಸೆತಗಳಲ್ಲಿ 54 ರನ್) 76 ಎಸೆತಗಳಲ್ಲಿ 99 ರನ್‌ ಜೊತೆಯಾಟದ ಮೂಲಕ ತಂಡ ಜಯಗಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. 

ಈ ಗೆಲುವಿನೊಂದಿಗೆ ಕೋಲ್ಕತ್ತಾ 8ನೇ ಸ್ಥಾನದಿಂದ 12 ಅಂಕಗಳೊಂದಿಗೆ 7ನೇ ಸ್ಥಾನಕ್ಕೆ ಜಿಗಿದು ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡರೆ, ಚೆನ್ನೈ 15 ಅಂಕಗಳೊಂದಿಗೆ 2ನೇ ಸ್ಥಾನ ಕಾಯ್ದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com