ವಿಶ್ವಕಪ್ 2023: ನ್ಯೂಜಿಲೆಂಡ್ ತಂಡವನ್ನು 273 ರನ್ ಗಳಿಗೆ ಕಟ್ಟಿಹಾಕಿದ ಭಾರತ

ಡೇರಿಲ್ ಮಿಚೆಲ್ ಅವರ ಶತಕ ಮತ್ತು ರಚಿನ್ ರವೀಂದ್ರ ಅವರ ದೊಡ್ಡ ಶತಕದ ಜೊತೆಯಾಟದ ಹೊರತಾಗಿಯೂ, ಭಾನುವಾರ ಇಲ್ಲಿ ನಡೆದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಐದು ವಿಕೆಟ್‌ಗಳಿಗೆ ನೆರವಿನಿಂದ ಭಾರತವು ನ್ಯೂಜಿಲೆಂಡ್ ಅನ್ನು 273 ರನ್‌ಗಳಿಗೆ ಆಲೌಟ್ ಮಾಡಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಧರ್ಮಶಾಲಾ: ಡೇರಿಲ್ ಮಿಚೆಲ್ ಅವರ ಶತಕ ಮತ್ತು ರಚಿನ್ ರವೀಂದ್ರ ಅವರ ದೊಡ್ಡ ಶತಕದ ಜೊತೆಯಾಟದ ಹೊರತಾಗಿಯೂ, ಭಾನುವಾರ ಇಲ್ಲಿ ನಡೆದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಐದು ವಿಕೆಟ್‌ಗಳಿಗೆ ನೆರವಿನಿಂದ ಭಾರತವು ನ್ಯೂಜಿಲೆಂಡ್ ಅನ್ನು 273 ರನ್‌ಗಳಿಗೆ ಆಲೌಟ್ ಮಾಡಿದೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ಪರ ಡೇರಿನ್ ಮಿಚೆಲ್ 127 ಎಸೆತಗಳಲ್ಲಿ ಐದು ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳ ನೆರವಿನಿಂದ 130 ರನ್ ಗಳಿಸಿದರು. ಇನ್ನು ರಚಿನ್ ರವೀಂದ್ರ (75 ರನ್, 87 ಎಸೆತ, ಆರು ಬೌಂಡರಿ, ಒಂದು ಸಿಕ್ಸರ್) ಮೂರನೇ ವಿಕೆಟ್‌ಗೆ 159 ರನ್ ಪೇರಿಸಿದರು.

ಶಮಿ ಅವರು ತಮ್ಮ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ 54 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ದುಬಾರಿ ಎನಿಸಿದರು. 73 ರನ್ ನೀಡಿ ಎರಡು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ (45 ರನ್‌ಗಳಿಗೆ ಒಂದು ವಿಕೆಟ್) ಮತ್ತು ಜಸ್ಪ್ರೀತ್ ಬುಮ್ರಾ (45 ರನ್‌ಗಳಿಗೆ ಒಂದು ವಿಕೆಟ್) ಬೌಲಿಂಗ್ ಮಾಡಿ ತಲಾ ಒಂದು ವಿಕೆಟ್ ಪಡೆದರು.

ಇಡೀ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮೊದಲ ಬಾರಿಗೆ ಒತ್ತಡದಲ್ಲಿದ್ದಾರೆ. ಭಾರತದ ನಿಖರ ಬೌಲಿಂಗ್ ಎದುರು ತಂಡ ಕೊನೆಯ 13 ಓವರ್ ಗಳಲ್ಲಿ ಕೇವಲ 68 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com