ಏಷ್ಯಾ ಕಪ್ 2023: ಭಾರತ- ಪಾಕ್ ನಡುವಿನ ಪಂದ್ಯಕ್ಕೆ ವರುಣನ ಅಡ್ಡಿ! ಆಟಕ್ಕೆ ತಡೆ

ವಿಶ್ವದಾದ್ಯಂತ ಕ್ರಿಕೆಟ್ ಪ್ರಿಯರ ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದ ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ- ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಭಾರತ- ಪಾಕ್ ಆಟಗಾರರ ಚಿತ್ರ
ಭಾರತ- ಪಾಕ್ ಆಟಗಾರರ ಚಿತ್ರ
Updated on

ಪಳ್ಳೆಕಿಲೆ: ವಿಶ್ವದಾದ್ಯಂತ ಕ್ರಿಕೆಟ್ ಪ್ರಿಯರ ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದ ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ- ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಶ್ರೀಲಂಕಾದ ಪಳ್ಳೆಕಿಲೆ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಮಾಡುತ್ತಿದ್ದಾಗ 4.2 ನೇ ಓವರ್ ನಲ್ಲಿ ಅಬ್ಬರದ ಮಳೆ ಸುರಿಯಲು ಆರಂಭಿಸಿದೆ. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಮೈದಾನದ ಸಿಬ್ಬಂದಿ ಪಿಚ್‌ ಅನ್ನು ಕವರ್‌ ಹಾಕಿ ಮುಚ್ಚಿದ್ದಾರೆ. ಸದ್ಯ ರೋಹಿತ್ ಶರ್ಮಾ ಅವರ 11 ರನ್ ಗಳೊಂದಿಗೆ ಭಾರತ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ.

ಟೂರ್ನಿಯಲ್ಲಿ ಭಾರತ ತಂಡಕ್ಕೆ ಇದು ಮೊದಲ ಪಂದ್ಯವಾಗಿದ್ದು, ಪಾಕಿಸ್ತಾನ ಈಗಾಗಲೇ ನೇಪಾಳ ವಿರುದ್ಧ ಗೆದ್ದು ಇದೀಗ ಭಾರತದ ವಿರುದ್ಧ 2 ಪಂದ್ಯಕ್ಕೆ ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ನೇರವಾಗಿ ಸೂಪರ್ 4 ಹಂತಕ್ಕೆ ಅರ್ಹತೆ ಗಿಟ್ಟಿಸಲಿದ್ದು, ಭಾರತ ಗೆದ್ದರೆ ಟೂರ್ನಿಯಲ್ಲಿ ಶುಭಾರಂಭ ಮಾಡಿದಂತಾಗುತ್ತದೆ.

ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಶುಭ್ ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಡಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ ಪ್ರೀತ್ ಬುಮ್ರಾ, ಮಹಮದ್ ಸಿರಾಜ್

ಪಾಕಿಸ್ತಾನ ತಂಡ ಇಂತಿದೆ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಎ ಸಲ್ಮಾನ್, ಐ ಅಹ್ಮದ್, ಮಹಮದ್ ರಿಜ್ವಾನ್ (ವಿಕೆಟ್ ಕೀಪರ್), ಎಸ್ ಖಾನ್, ಎಂ ನವಾಜ್, ಎನ್ ಶಾ, ಶಹೀನ್ ಅಫ್ರಿದಿ, ಹಸನ್ ರೌಫ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com