ಐಸಿಸಿ ಕ್ರಿಕೆಟ್: ನಿರೀಕ್ಷೆಗಳ ಒತ್ತಡವನ್ನು ನಿಭಾಯಿಸಿಕೊಂಡರೆ ವಿಶ್ವಕಪ್ ಜಯ ಸಾಧ್ಯ: ಟೀಂ ಇಂಡಿಯಾಗೆ ಕಪಿಲ್ ದೇವ್ ಕಿವಿಮಾತು

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ತವರು ನೆಲದ ನಿರೀಕ್ಷೆಗಳ ಒತ್ತಡ ಮೀರಿ ಆಡಿದರೆ ವಿಶ್ವಕಪ್ ಜಯ ಸಾಧ್ಯ ಭಾರತದ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಹೇಳಿದ್ದಾರೆ.
ಕಪಿಲ್ ದೇವ್
ಕಪಿಲ್ ದೇವ್

ಬೆಂಗಳೂರು: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ತವರು ನೆಲದ ನಿರೀಕ್ಷೆಗಳ ಒತ್ತಡ ಮೀರಿ ಆಡಿದರೆ ವಿಶ್ವಕಪ್ ಜಯ ಸಾಧ್ಯ ಭಾರತದ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಹೇಳಿದ್ದಾರೆ.

ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಈ ಬಾರಿ ಭಾರತದ ಆತಿಥ್ಯದಲ್ಲಿ ನಡೆಯುತ್ತಿದ್ದು, ಅದರಿಂದಾಗಿ ತಂಡದ ಮೇಲೆ ಅಪಾರ ನಿರೀಕ್ಷೆಗಳ ಒತ್ತಡ ಇರುತ್ತದೆ. ಇದನ್ನು ಮೀರಿ ನಿಂತರೆ ವಿಶ್ವಕಪ್ ಜಯಿಸುವುದು ಸಾಧ್ಯವಾಗಲಿದೆ ಎಂದು ಕಪಿಲ್ ದೇವ್ ಟೀಂ ಇಂಡಿಯಾ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

ಮಂಗಳವಾರ ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ)ಯಲ್ಲಿ ಕಾಲ್‌ವೇ ಗಾಲ್ಫ್ ಇಂಡಿಯಾದ ಫಿಟ್ಟಿಂಗ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, 'ಕಳೆದ ಹಲವಾರು ವರ್ಷಗಳಿಂದ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲಿಯೂ ಭಾರತ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದೆ. ಭಾರತ ತಂಡವು ಸದ್ಯ ಯಾವ ರೀತಿಯಲ್ಲಿ ಸಿದ್ಧತೆಗಳನ್ನು ಆರಂಭಿಸಿದೆ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಭಾರತ ತಂಡವು ತವರಿನಲ್ಲಿಯೂ ವಿಶ್ವಕಪ್ ಜಯಿಸಿದೆ. ಆದ್ದರಿಂದ ಈ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ತಂಡಕ್ಕಿದೆ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್ ಟೂರ್ನಿಗಾಗಿ ಎಲ್ಲ ಆಟಗಾರರೂ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆಂಬ ವಿಶ್ವಾಸವಿದೆ‘ ಎಂದರು.

ಅಂತೆಯೇ ‘ನಾವು ಆಡುವ ಕಾಲಘಟ್ಟ ಬೇರೆ ಇತ್ತು. ಆಗ ಇಷ್ಟೊಂದು ಪ್ರಮಾಣದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರಲಿಲ್ಲ. ಈಗ ಪೈಪೋಟಿ ಮತ್ತು ಪಂದ್ಯಗಳ ಸಂಖ್ಯೆ ಎರಡೂ ಹೆಚ್ಚಾಗಿದೆ. ಆದ್ದರಿಂದ ದೇಹದ ಕ್ಷಮತೆಯನ್ನು ಕಾಪಾಡಿಕೊಳ್ಳುವುದೇ ಮುಖ್ಯ ಸವಾಲು. ಗಾಯದಿಂದ ರಕ್ಷಿಸಿಕೊಳ್ಳುವುದು ಕೂಡ ಮಹತ್ವದ ಕಾರ್ಯವಾಗಿದೆ‘ ಎಂದು ಕಪಿಲ್ ದೇವ್ ಹೇಳಿದರು.

ಇದೇ ವೇಳೆ ಹಾಲಿ ವರ್ಷದ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ಕುರಿತು ಮಾತನಾಡಿರುವ ಕಪಿಲ್ ದೇವ್, 'ವಾಸ್ತವವಾಗಿ, ಅವರು ಈ ವರ್ಷದ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ, ಇದು ಅವರ ಅಂತಸ್ತಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲನೆಯದು.ಆದಾಗ್ಯೂ, ವಿಂಡೀಸ್ ಶೀಘ್ರದಲ್ಲೇ ವೈಭವದ ದಿನಕ್ಕೆ ಮರಳುತ್ತದೆ ಎಂಬ ವಿಶ್ವಾಸವಿದೆ. ವೆಸ್ಟ್ ಇಂಡೀಸ್ ವಿಶ್ವಕಪ್‌ನಲ್ಲಿ ಆಡದಿರುವುದು ನೋವಿನ ಸಂಗತಿಯಾಗಿದೆ. ಅವರಿಲ್ಲದೆ ಏಕದಿನ ಪಂದ್ಯಾವಳಿಯನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಅವರು ಅಂತಹ ಶ್ರೇಷ್ಠ ಆಟಗಾರರನ್ನು ನಿರ್ಮಿಸಿದ್ದಾರೆ. ಅವರಿಗೆ ಈಗ ಏನು ನೋವುಂಟುಮಾಡುತ್ತಿದೆ ಎಂದು ನನಗೆ ತಿಳಿದಿಲ್ಲ ಆದರೆ, ಆಶಾದಾಯಕವಾಗಿ, ಅವರು ಹಿಂತಿರುಗುತ್ತಾರೆ ಎಂದು ಎಂದು ಕಪಿಲ್ ದೇವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com