ಅಕ್ಟೋಬರ್ 5ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭ; ನವೆಂಬರ್ 19ರಂದು ಅಹ್ಮದಾಬಾದ್ ನಲ್ಲಿ ಫೈನಲ್ ಪಂದ್ಯ
ಭಾರತ ಆತಿಥ್ಯ ವಹಿಸಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವ ಕಪ್ (World Cup 2023) ಟೂರ್ನಿ ಮುಂಬರುವ ಅಕ್ಟೋಬರ್ 5ರಿಂದ ಆರಂಭಗೊಂಡು ನವೆಂಬರ್ 19ರವರೆಗೆ ನಡೆಯಲಿದ್ದು, ಅಹ್ಮದಾಬಾದ್ ನಲ್ಲಿ ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
Published: 22nd March 2023 12:52 AM | Last Updated: 22nd March 2023 12:54 AM | A+A A-

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ
ಮುಂಬೈ: ಭಾರತ ಆತಿಥ್ಯ ವಹಿಸಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವ ಕಪ್ (World Cup 2023) ಟೂರ್ನಿ ಮುಂಬರುವ ಅಕ್ಟೋಬರ್ 5ರಿಂದ ಆರಂಭಗೊಂಡು ನವೆಂಬರ್ 19ರವರೆಗೆ ನಡೆಯಲಿದ್ದು, ಅಹ್ಮದಾಬಾದ್ ನಲ್ಲಿ ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕ ದಿನ ಕ್ರಿಕೆಟ್ ವಿಶ್ವ ಕಪ್ (World Cup 2023) ಅಕ್ಟೋಬರ್ 2ರಿಂದ ಆರಂಭಗೊಂಡು ನವೆಂಬರ್ 19ರವರೆಗೆ ನಡೆಯಲಿದೆ. ಬಿಸಿಸಿಐ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ 12 ನಗರಗಳ ಪಟ್ಟಿ ಸಿದ್ಧಗೊಳಿಸಿದ್ದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಫೈನಲ್ ಪಂದ್ಯ ನವೆಂಬರ್ 19ರಂದು ನಡೆಯಲಿದೆ.
ಇದನ್ನೂ ಓದಿ: ಭಾರತದ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ: ವಿರಾಟ್ ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಟ ರಣವೀರ್ ಸಿಂಗ್
ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು ಒಟ್ಟು 46 ದಿನಗಳ ಕಾಲ ವಿಶ್ವ ಕಪ್ ಆಯೋಜನೆಗೊಳ್ಳಲಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಪಂದ್ಯಗಳು ಆಯೋಜನೆಗೊಳ್ಳಲಿರುವ ಇತರ ನಗರಗಳಾಗಿವೆ. ಆದರೆ, ಯಾವ ಪಂದ್ಯಗಳು ಎಲ್ಲಿ ನಡೆಯುತ್ತವೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಅದೇ ರೀತಿ ಕೆಲವು ನಗರಗಳಲ್ಲಿ ಅಭ್ಯಾಸ ಪಂದ್ಯಗಳನ್ನೂ ಆಯೋಜಿಸಲಾಗಿದೆ. ಭಾರತದ ನಾನಾ ನಗರಗಳಲ್ಲಿ ಮಳೆ ಬರುವ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ವೇಳಾಪಟ್ಟಿಯನ್ನು ಸಿದ್ಧಪಡಿಸುವುದು ಬಿಸಿಸಿಐ ಉದ್ದೇಶವಾಗಿದೆ.
ಸಾಮಾನ್ಯವಾಗಿ ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಕನಿಷ್ಠ ಒಂದು ವರ್ಷ ಮುಂಚಿತವಾಗಿ ಪ್ರಕಟಿಸುತ್ತದೆ. ಆದರೆ ಈ ಬಾರಿ ಬಿಸಿಸಿಐ ಭಾರತ ಸರ್ಕಾರದಿಂದ ಅಗತ್ಯ ಅನುಮತಿಗಳನ್ನು ಪಡೆಯಬೇಕಾಗಿದೆ. ಪಂದ್ಯಾವಳಿಗೆ ತೆರಿಗೆ ವಿನಾಯಿತಿ ನೀಡುವುದು ಮತ್ತು ಪಾಕಿಸ್ತಾನ ತಂಡಕ್ಕೆ ವೀಸಾ ಕ್ಲಿಯರೆನ್ಸ್ ನೀಡುವುದು ಬಾಕಿ ಉಳಿದಿರುವ ಸಮಸ್ಯೆಗಳಾಗಿವೆ. ಕಳೆದ ವಾರಾಂತ್ಯದಲ್ಲಿ ದುಬೈನಲ್ಲಿ ನಡೆದ ಐಸಿಸಿಯ ತ್ರೈಮಾಸಿಕ ಸಭೆ ನಡೆದಿದೆ. ಅದರಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತ ಸರ್ಕಾರದಿಂದ ವೀಸಾ ಕೊಡಿಸುವ ಭರವಸೆಯನ್ನು ಬಿಸಿಸಿಐ ಕೊಟ್ಟಿದೆ.
ಇದನ್ನೂ ಓದಿ: 2019 ವಿಶ್ವಕಪ್ ನಂತರ ನಾಲ್ಕು ವರ್ಷ ಕಳೆದರೂ ಪ್ರಶ್ನೆಯಾಗಿಯೇ ಉಳಿದ ಭಾರತದ ನಂ-4 ಕ್ರಮಾಂಕ!
2016ರ ಟಿ20 ವಿಶ್ವ ಕಪ್ ಹಾಗೂ 2018ರ ಚಾಂಪಿಯನ್ಸ್ ಟ್ರೋಫಿ ಭಾರತದಲ್ಲಿ ಆತಿಥ್ಯದಲ್ಲಿ ನಡೆದಿತ್ತು. 2021ರ ಟಿ20 ವಿಶ್ವ ಕಪ್ ಭಾರತಕ್ಕೆ ಸಿಕ್ಕಿದ್ದರೂ ಕೊರೊನಾ ಕಾರಣಕ್ಕೆ ಅದನ್ನು ಯುಎಇನಲ್ಲಿ ನಡೆಸಲಾಗಿತ್ತು.
ಏನಿದು ಟ್ಯಾಕ್ಸ್ ಸಮಸ್ಯೆ?
ಐಸಿಸಿ ಆತಿಥ್ಯದ ಒಪ್ಪಂದದ ಪ್ರಕಾರ ಆತಿಥೇಯ ಕ್ರಿಕೆಟ್ ಸಂಸ್ಥೆ ಅಲ್ಲಿನ ಸರಕಾರದಿಂದ ತೆರಿಗೆ ವಿನಾಯಿತಿಯನ್ನು ಕೊಡಿಸಬೇಕು. ಅದರಂತೆ ಹಾಲಿ ಆವೃತ್ತಿಯ ವಿಶ್ವ ಕಪ್ನಲ್ಲಿ ಐಸಿಸಿ 43 ಕೋಟಿ ರೂಪಾಯಿ ಆದಾಯ ಪಡೆಯಲಿದೆ. ಅದಕ್ಕೆ ಭಾರತದಲ್ಲಿ ಸುಮಾರು ಶೇಕಡಾ 20ರಷ್ಟು ತೆರಿಗೆಯಿದೆ. ಆ ವಿನಾಯಿತಿಯನ್ನು ಬಿಸಿಸಿಐ ಕೊಡಿಸಬೇಕಾಗಿದೆ. ಒಂದು ವೇಳೆ ಕೊಡದೇ ಹೋದರೆ ಆತಿಥೇಯರಿಗೆ ನೀಡಬೇಕಾದ ಲಾಭಾಂಶದಲ್ಲಿ ಕಡಿತ ಮಾಡಲಾಗುತ್ತದೆ.