IPL 2024: ಬೆಂಗಳೂರು ಪಂದ್ಯದ ವೇಳೆ ಮುಂಬೈ ಪಂದ್ಯದ Toss ಕಳ್ಳಾಟ ಬಯಲು?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯವು ಕೇವಲ ರನ್ ಗಳಿಕೆ ವಿಚಾರದಲ್ಲಿ ಮಾತ್ರವಲ್ಲ ಇತರೆ ವಿಚಾರಗಳಿಂದಲೂ ಭಾರಿ ಸದ್ದು ಮಾಡುತ್ತಿದೆ.
ಮುಂಬೈ ಪಂದ್ಯದ Toss ಕಳ್ಳಾಟ
ಮುಂಬೈ ಪಂದ್ಯದ Toss ಕಳ್ಳಾಟ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯವು ಕೇವಲ ರನ್ ಗಳಿಕೆ ವಿಚಾರದಲ್ಲಿ ಮಾತ್ರವಲ್ಲ ಇತರೆ ವಿಚಾರಗಳಿಂದಲೂ ಭಾರಿ ಸದ್ದು ಮಾಡುತ್ತಿದೆ.

ಹೌದು.. ಹೈದರಾಬಾದ್ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ರನ್ ಮಳೆ ಹರಿದಿತ್ತು. ಉಭಯ ತಂಡಗಳೂ ದಾಖಲೆಯ ಮೊತ್ತ ಕಲೆ ಹಾಕಿದ್ದವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರದ ಪಂದ್ಯದಲ್ಲಿಯೂ ಸೋಲನುಭವಿಸಿದೆ.

ನಿನ್ನೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವು ನಾನಾ ವಿಚಾರಕ್ಕೆ ಭಾರಿ ಸದ್ದು ಮಾಡುತ್ತಿದ್ದು, ಉಭಯ ತಂಡಗಳ ಭರ್ಜರಿ ಬ್ಯಾಟಿಂಗ್ ಕುರಿತು ಒಂದೆಡೆಯಾದರೆ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ವಿಚಾರವಾಗಿ ಮತ್ತೊಂದು ಕಡೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಮುಂಬೈ ಪಂದ್ಯದ Toss ಕಳ್ಳಾಟ
IPL 2024: ಒಂದೇ ಟೂರ್ನಿಯಲ್ಲಿ 2 ವಿಶ್ವದಾಖಲೆ ನಿರ್ಮಿಸಿದ ಸನ್ ರೈಸರ್ಸ್ ಹೈದರಾಬಾದ್, RCBಯದ್ದೂ ವಿಶಿಷ್ಟ Record

ಮೈದಾನದಲ್ಲೇ ಮುಂಬೈ ಪಂದ್ಯದ Toss ಕಳ್ಳಾಟ ಬಿಚ್ಚಿಟ್ಟ RCB ನಾಯಕ!

ಇನ್ನು ಈ ಪಂದ್ಯದ ವೇಳೆ RCB ನಾಯಕ ತಮ್ಮ ಹಿಂದಿನ ಪಂದ್ಯ ಅಂದರೆ ಮುಂಬೈ ಪಂದ್ಯದ ಟಾಸ್ ಕಳ್ಳಾಟದ ಕುರಿತು ಚರ್ಚೆ ನಡೆಸಿ ಭಾರಿ ಸುದ್ದಿಗೆ ಗ್ರಾಸವಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಪಂದ್ಯಕ್ಕೂ ಮೊದಲು ಆರ್ ಸಿಬಿಯ ನಾಯಕ ಫಾಫ್ ಡುಪ್ಲೆಸಿಸ್ ಅವರು ಅವರ ನಡೆಯೊಂದು ಭಾರಿ ಗಮನ ಸೆಳೆದಿದ್ದು, ಅವರು ಮುಂಬೈ ವಿರುದ್ಧದ ಪಂದ್ಯದಲ್ಲಿ ನಡೆದ ಟಾಸ್ ಕಳ್ಳಾಟದ ಬಗ್ಗೆ ಫಾಫ್ ಅವರು ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಗೆ ವಿವರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮುಂಬೈ- ಆರ್ ಸಿಬಿ ಪಂದ್ಯದಲ್ಲಿ ರೆಫರಿ ಮತ್ತು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಟಾಸ್‌ ನ ಫಲಿತಾಂಶವನ್ನು ಬದಲಾಯಿಸಿದ್ದಾಗಿ ಆರೋಪಿಸಲಾಗಿದೆ.

ಶ್ರೀನಾಥ್ ನಾಣ್ಯವನ್ನು ತೆಗೆದುಕೊಳ್ಳುವಾಗ ಅದನ್ನು ತಿರುಗಿಸುವ ಮೂಲಕ ಮುಂಬೈ ಇಂಡಿಯನ್ಸ್‌ ಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.

ಟಾಸ್ ಎಡವಟ್ಟಿನಿಂದಲೇ ಮುಂಬೈ ಪಂದ್ಯ ಗೆದ್ದಿತ್ತು ಎಂಬ ಆರೋಪವೂ ಬಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com