ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ!

2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬುಧವಾರ ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ರೋಹಿತ್ 37 ಎಸೆತಗಳಲ್ಲಿ 140.54 ಸ್ಟ್ರೈಕ್ ರೇಟ್‌ನಲ್ಲಿ 52 ರನ್ ಗಳಿಸಿದರು. 4 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ, ಅವರು ಗಾಯಗೊಂಡಿದ್ದರಿಂದ 10 ನೇ ಓವರ್‌ನ ಅಂತ್ಯದ ನಂತರ ರಿಟೈರ್ಡ್ ಹರ್ಟ್ ಆದರು.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ನ್ಯೂಯಾರ್ಕ್: 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬುಧವಾರ ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ರೋಹಿತ್ 37 ಎಸೆತಗಳಲ್ಲಿ 140.54 ಸ್ಟ್ರೈಕ್ ರೇಟ್‌ನಲ್ಲಿ 52 ರನ್ ಗಳಿಸಿದರು. 4 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ, ಅವರು ಗಾಯಗೊಂಡಿದ್ದರಿಂದ 10 ನೇ ಓವರ್‌ನ ಅಂತ್ಯದ ನಂತರ ರಿಟೈರ್ಡ್ ಹರ್ಟ್ ಆದರು.

ಈ ಪಂದ್ಯದಲ್ಲಿ ಗಳಿಸಿದ ಮೂರು ಸಿಕ್ಸರ್‌ಗಳಿಂದ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆಗೆ ಪಾತ್ರರಾದರು.

ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ನಂತರ ರೋಹಿತ್ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 4000+ ರನ್ ಗಳಿಸಿದ ಎರಡನೇ ಆಟಗಾರರಾದರು. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4000 ರನ್‌ಗಳನ್ನು ಪೂರ್ಣಗೊಳಿಸಿದರು. 144 ಟಿ20I ಪಂದ್ಯಗಳಲ್ಲಿ 139.98 ರ ಸ್ಟ್ರೈಕ್ ರೇಟ್‌ನಲ್ಲಿ 4,026 ರನ್‌ ಗಳಿಸಿದ ಹೆಗ್ಗಳಿಕೆ ಅವರದು. ಈ ಮಾದರಿಯಲ್ಲಿ ಅವರು ಐದು ಶತಕ ಮತ್ತು 30 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ.

ರೋಹಿತ್ ಶರ್ಮಾ
ವರದಿಗಾರರ ಪ್ರಶ್ನೆಗೆ ರೋಹಿತ್ ಶರ್ಮಾ ಸಿಡಿಮಿಡಿ; ಅಭಿಮಾನಿಗಳಿಗೆ ನೀಡಿದ ಎಚ್ಚರಿಕೆ ಏನು?

ರೋಹಿತ್ ಟೆಸ್ಟ್‌ನಲ್ಲಿ 4,137 ರನ್, ಏಕದಿನದಲ್ಲಿ 10,709 ರನ್ ಮತ್ತು ಟಿ20ಯಲ್ಲಿ 4,001 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ 8,848 ರನ್, ಏಕದಿನದಲ್ಲಿ 13, 848 ರನ್ ಮತ್ತು ಟಿ20ಯಲ್ಲಿ 4,038 ರನ್ ಗಳಿಸಿದ್ದಾರೆ.

ಈ ಪಂದ್ಯದ ಮೂಲಕ ರೋಹಿತ್ ಟಿ20 ವಿಶ್ವಕಪ್‌ನಲ್ಲಿ 1000 ರನ್ ಪೂರೈಸಿದರು. ಸದ್ಯ, T20 ವಿಶ್ವಕಪ್‌ಗಳಲ್ಲಿ ರೋಹಿತ್ ಶರ್ಮಾ ಅವರು ಆಡಿರುವ 40 ಪಂದ್ಯಗಳಲ್ಲಿ ಮತ್ತು 37 ಇನಿಂಗ್ಸ್‌ಗಳಲ್ಲಿ 128.48 ಸ್ಟ್ರೈಕ್ ರೇಟ್‌ನಲ್ಲಿ 1,015 ರನ್ ಗಳಿಸಿದ್ದಾರೆ. ಅವರು ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com