ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ Smriti Mandhana ಭರ್ಜರಿ ಶತಕ: ಹಲವು ದಾಖಲೆ ಪತನ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಮಾಡಿ ಅಮೋಘ ಶತಕ ಸಿಡಿಸಿದ ಸ್ಮೃತಿ ಮಂದಾನ ಹಲವು ದಾಖಲೆಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ.
Smriti Mandhana
ಸ್ಮೃತಿ ಮಂದಾನ
Updated on

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಮಾಡಿ ಅಮೋಘ ಶತಕ ಸಿಡಿಸಿದ ಸ್ಮೃತಿ ಮಂದಾನ ಹಲವು ದಾಖಲೆಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ.

ಹೌದು.. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ ಭರ್ಜರಿ ಬ್ಯಾಟಿಂಗ್ ನಡೆಸಿ 127 ಎಸೆತಗಳಲ್ಲಿ 117 ರನ್ ಗಳಿಸಿದ್ದರು.

116 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 6ನೇ ಶತಕ ದಾಖಲಿಸಿದ ಸ್ಮೃತಿ ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ, 1 ಸಿಕ್ಸರ್‌ ಸಿಡಿಸಿದ್ದರು. ಆ ಮೂಲಕ ಟೂರ್ನಿಯ ತಮ್ಮ ಮೊದಲ ಶತಕ ಸಿಡಿಸಿದರು, ಇದು ಅವರ ಆರನೇ ಏಕದಿನ ಶತಕವಾಗಿದ್ದು, ಈ ಶತಕದ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ.

Smriti Mandhana
ICC Championship: ಸ್ಮೃತಿ ಮಂದಾನ ಭರ್ಜರಿ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 143 ರನ್ ಅಮೋಘ ಜಯ

ಮಹಿಳೆಯರ ಏಕದಿನ ಕ್ರಿಕೆಟ್​​ನಲ್ಲಿ ಆರನೇ ಶತಕ ಸಿಡಿಸಿದ ಸ್ಮೃತಿ ಮಂದಾನ, ಇದೇ ಮೊದಲ ಬಾರಿಗೆ ತವರಿನ ಮೈದಾನದಲ್ಲಿ ಶತಕ ಸಿಡಿಸಿದ್ದಾರೆ. ಆ ಮೂಲಕ ತಂಡದ ನಾಯಕ ಹರ್ಮನ್​ಪ್ರೀತ್ ಕೌರ್ ದಾಖಲೆಯನ್ನೂ ಮುರಿದಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್‌ಮನ್ ಸ್ಮೃತಿ ಮಂದಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7000 ರನ್ ಗಡಿ ದಾಟಿ ವಿಶೇಷ ಮೈಲಿಗಲ್ಲು ತಲುಪಿದರು. ಇನ್ನಿಂಗ್ಸ್ ನಲ್ಲಿ ತಮ್ಮ 59 ರನ್ ಗಳಿಸಿದಾಗ ಈ ದಾಖಲೆ ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ಬಳಿಕ 7000 ರನ್‌ಗಳ ಗಡಿ ದಾಟಿದ ಭಾರತದ ಮಹಿಳಾ ತಂಡದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ. ಮಿಥಾಲಿ 10868 ರನ್ ಸಿಡಿಸಿದ್ದಾರೆ.

ಇದಲ್ಲದೆ ಮಹಿಳಾ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರ್ತಿಯಾಗಿ ಅತ್ಯಧಿಕ 50+ ಸ್ಕೋರ್ ಗಳಿಸಿದ 3ನೇ ಆಟಗಾರ್ತಿ ಎನಿಸಿದ್ದು, ನ್ಯೂಜಿಲೆಂಡ್​ನ ಸೂಜಿ ಬೇಟ್ಸ್​ ಏಕದಿನ ಕ್ರಿಕೆಟ್​​ನಲ್ಲಿ 32 ಬಾರಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಭಾರತ ಮಹಿಳಾ ತಂಡದ ಪರ ಅಧಿಕ ಶತಕ ಸಿಡಿಸಿದ 2ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹರ್ಮನ್​ಪ್ರೀತ್ ಕೌರ್​ 5 ಶತಕ ಸಿಡಿಸಿದ್ದು, ಅವರನ್ನು ಸ್ಮೃತಿ ಹಿಂದಿಕ್ಕಿದ್ದಾರೆ. ಮಿಥಾಲಿ ರಾಜ್ 7 ಏಕದಿನ ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com