ಐಪಿಎಲ್ 2024: ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟನ್ಸ್‌ ಗೆ 6 ರನ್ ಜಯ!

ಅಹ್ಮದಾಬಾದ್ ನಲ್ಲಿ ನಡೆದ ಐಪಿಎಲ್ 2024 ಟೂರ್ನಿಯ 5 ನೇ ಪಂದ್ಯದಲ್ಲಿ ಗುಜರಾತ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 6 ರನ್ ಗಳಿಂದ ಮಣಿಸಿದೆ.
ಗುಜರಾತ್ ಟೈಟನ್ಸ್‌
ಗುಜರಾತ್ ಟೈಟನ್ಸ್‌

ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ನಡೆದ ಐಪಿಎಲ್ 2024 ಟೂರ್ನಿಯ 5 ನೇ ಪಂದ್ಯದಲ್ಲಿ ಗುಜರಾತ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 6 ರನ್ ಗಳಿಂದ ಮಣಿಸಿದೆ. ಕುತೂಹಲಕಾರಿಯಾಗಿದ್ದ ಪಂದ್ಯ ಕೊನೆಯ ಕೆಲವು ಓವರ್ ಗಳಲ್ಲಿ ತಿರುವು ಪಡೆದುಕೊಂಡಿತ್ತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 168 ರನ್ ಗಳಿಗೆ ಕಟ್ಟಿಹಾಕಿತ್ತು. ಜಸ್ಪ್ರೀತ್ ಬೂಮ್ರಾ 14 ರನ್ ನೀಡಿ 3 ವಿಕೆಟ್ ಗಳಿಸಿದರೆ, ಪೀಯೂಷ್ ಚಾವ್ಲಾ 31 ರನ್ ನೀಡಿ 1 ವಿಕೆಟ್ ಗಳಿಸಿದರು. ಜೆರಾಲ್ಡ್ ಕೋಟ್ಜಿ 27 ರನ್ ನೀಡಿ 2 ವಿಕೆಟ್ ಗಳಿಸಿದರು.

ಗುಜರಾತ್ ಟೈಟನ್ಸ್‌
ಐಪಿಎಲ್ 2024: ಸಂಜು ಸ್ಯಾಮ್ಸನ್ ಅಬ್ಬರ, 20 ರನ್ ಗಳಿಂದ ಲಕ್ನೋ ಮಣಿಸಿದ ರಾಜಸ್ಥಾನ ರಾಯಲ್ಸ್

169 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡದ ಮೇಲೆ ಗುಜರಾತ್ ಬೌಲರ್ ಗಳು ಆರಂಭದಿಂದ ನಿಯಂತ್ರಣ ಸಾಧಿಸಿದ್ದರು. ಆರಂಭಿಕ ಆಟಗಾರ ಇಶಾನ್ ಕಿಶನ್ ಶೂನ್ಯ ರನ್ ಗಳಿಸಿ ಔಟ್ ಆದರೆ, ರೋಹಿತ್ ಶರ್ಮಾ, 29 ಎಸೆತಗಳಲ್ಲಿ 43 ರನ್ ಗಳಿಸಿದರು. ಡೆವಾಲ್ಡ್ ಬ್ರೆವಿಸ್ 38 ಎಸೆತಗಳಲ್ಲಿ 46 ರನ್ ಗಳಿಸಿದರು ಉಳಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳ ವೈಫಲ್ಯದಿಂದ ಮುಂಬೈ ತಂಡ ಗುಜರಾತ್ ಎದುರು ಸೋಲೊಪ್ಪಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com