IPL 2024: ಡೆಲ್ಲಿ ಕ್ಯಾಪಿಟಲ್ಸ್ ಗೆ ಕೊನೆಗೂ ಗೆಲುವು, ಚೆನ್ನೈ ವಿರುದ್ಧ 20ರನ್ ಜಯ!

ಐಪಿಎಲ್ 2024 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಗೆಲುವು ದಾಖಲಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20ರನ್ ಗಳ ಜಯ ದಾಖಲಿಸಿದೆ.
ಡೆಲ್ಲಿಗೆ ಜಯ
ಡೆಲ್ಲಿಗೆ ಜಯ

ವಿಶಾಖಪಟ್ಟಣ: ಐಪಿಎಲ್ 2024 ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಗೆಲುವು ದಾಖಲಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20ರನ್ ಗಳ ಜಯ ದಾಖಲಿಸಿದೆ.

ವಿಶಾಖಪಟ್ಟಣದ ವೈಎಸ್​ ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ರನ್ ಗಳ ರೋಚಕ ಜಯ ದಾಖಲಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 191 ರನ್ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಚೆನ್ನೈ ತಂಡ. ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ಕಳೆದುಕೊಂಡು 131 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಡೆಲ್ಲಿಗೆ ಜಯ
ಐಪಿಎಲ್ 2024: ಪಂಜಾಬ್ ವಿರುದ್ಧ 21 ರನ್ ಗಳ ಭರ್ಜರಿ ಜಯ ದಾಖಲಿಸಿದ ಲಖನೌ

ಡೇವಿಡ್​ ವಾರ್ನರ್​ (52 ರನ್​), ನಾಯಕ ರಿಷಭ್​ ಪಂತ್​ (51 ರನ್​) ಜೋಡಿಯ ಉತ್ತಮ ಬ್ಯಾಟಿಂಗ್​ ಹಾಗೂ ಬೌಲರ್​ಗಳ ಸಾಂಘಿಕ ಹೋರಾಟದ ನೆರವಿನಿಂದ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ (Delhi Capitals) ಐಪಿಎಲ್​ನ (IPL 2024) 17ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ (Chennai Super Kings) ವಿರುದ್ಧ 20 ರನ್​ಗಳ ಗೆಲುವು ದಾಖಲಿಸಿತು. ಇದು ರಿಷಭ್​ ಪಂತ್ ನೇತೃತ್ವದ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಸಿಕ್ಕಿರುವ ಮೊದಲ ಗೆಲುವಾಗಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಪಂಜಾಬ್​ ​ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ತಂಡ ಸೋತು ನಿರಾಸೆ ಎದುರಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡ ನಿಗಧಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಡೇವಿಡ್ ವಾರ್ನರ್ (52 ರನ್), ರಿಷಬ್ ಪಂತ್ (51 ರನ್) ಅರ್ಧಶತಕ ಮತ್ತು ಪೃಥ್ವಿ ಶಾ (43 ರನ್) ಬ್ಯಾಟಿಂಗ್ ನೆರವಿನಿಂದ 191 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ 20 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಚೆನ್ನೈ ಪರ ಅಂಜಿಕ್ಯಾ ರಹಾನೆ 45 ರನ್, ಡರಿಲ್ ಮಿಚೆಲ್ 34 ರನ್ ಮತ್ತು ಎಂಎಸ್ ಧೋನಿ 37 ರನ್ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com