ಕೊಹ್ಲಿ ಜೊತೆಗಿನ 'ಸುಮಧುರ ಬಾಂಧವ್ಯ' ಹಂಚಿಕೊಂಡ ಸ್ವಪ್ನಿಲ್!

ದ್ವಿತೀಯಾರ್ಧದಲ್ಲಿ ಐಪಿಎಲ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್-ರೌಂಡರ್ ಸ್ವಪ್ನಿಲ್ ಸಿಂಗ್ ಹಲವಾರು ಏರಿಳಿತದಿಂದ ಕೂಡಿದ ತಮ್ಮ ಕ್ರಿಕೆಟ್ ಜೀವನ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆಗಿನ ಸುಮಧುರ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.
ಸ್ವಪ್ನಿಲ್
ಸ್ವಪ್ನಿಲ್
Updated on: 

ದ್ವಿತೀಯಾರ್ಧದಲ್ಲಿ ಐಪಿಎಲ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲ್-ರೌಂಡರ್ ಸ್ವಪ್ನಿಲ್ ಸಿಂಗ್ ಹಲವಾರು ಏರಿಳಿತದಿಂದ ಕೂಡಿದ ತಮ್ಮ ಕ್ರಿಕೆಟ್ ಜೀವನ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆಗಿನ ಸುಮಧುರ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.

ಮೊದಲಾರ್ಧದಲ್ಲಿ ಆಡಿದ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದ ಆರ್ ಸಿಬಿ, ದ್ವಿತೀಯಾರ್ಧದಲ್ಲಿ ಸತತ ಆರು ಗೆಲುವು ಸಾಧಿಸುವುದರೊಂದಿಗೆ ಪ್ಲೇ ಆಫ್ ಪ್ರವೇಶಿಸಿತು. ಈ ಆರು ಪಂದ್ಯಗಳಲ್ಲಿ ಸ್ವಪ್ನಿಲ್ ಬ್ಯಾಟಿಂಗ್ ವಿಕೆಟ್-ತೆಗೆದುಕೊಳ್ಳುವ ಸಾಮರ್ಥ್ಯದೊಂದಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ 164.70 ಸ್ಟ್ರೈಕ್ ರೇಟ್‌ನಲ್ಲಿ 28 ರನ್ ಗಳಿಸಿದ್ದಾರೆ ಮತ್ತು 19.00 ರ ಸರಾಸರಿಯಲ್ಲಿ ಆರು ವಿಕೆಟ್‌ ಪಡೆದಿದ್ದಾರೆ.

ಲಖನೌದಲ್ಲಿ ಹುಟ್ಟಿದ ಸ್ವಪ್ನಿಲ್, ಬರೋಡಾ (2005-2020) ಗಾಗಿ ಆಡಿದ್ದಾರೆ. ಪ್ರಸ್ತುತ ಉತ್ತರಾಖಂಡ್ ಗಾಗಿ (2021-22 ಸೀಸನ್‌ನಿಂದ) ಆಡುತ್ತಿದ್ದು, 76 ಪ್ರಥಮ ದರ್ಜೆ ಪಂದ್ಯಗಳಲ್ಲಿ, 26.22 ಸರಾಸರಿಯಲ್ಲಿ 2,727 ರನ್ ಗಳಿಸಿದ್ದಾರೆ, ಎರಡು ಶತಕಗಳು ಮತ್ತು 16 ಅರ್ಧಶತಕಗಳು ಮತ್ತು 181 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸ್ವಪ್ನಿಲ್
IPL 2024: RCB ಅದ್ಭುತ ಪ್ರದರ್ಶನದ ಹಿಂದಿದೆ ವಿರಾಟ್ ಕೊಹ್ಲಿಯ '1 ಪರ್ಸೆಂಟ್ ಚಾನ್ಸ್' ಥಿಯರಿ!

63 ಲಿಸ್ಟ್-ಎ ಪಂದ್ಯಗಳಲ್ಲಿ, ಸ್ವಪ್ನಿಲ್ 25.06 ಸರಾಸರಿಯಲ್ಲಿ 1,153 ರನ್ ಗಳಿಸಿದ್ದಾರೆ, ಆರು ಅರ್ಧಶತಕಗಳು ಮತ್ತು 67 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 81 ಟಿ20 ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ 877 ರನ್ ಗಳಿಸಿ 69 ವಿಕೆಟ್ ಪಡೆದಿದ್ದಾರೆ.

"ನನ್ನ ತಂದೆ ನನ್ನ ಮೊದಲ ತರಬೇತುದಾರ. ಅವರಿಂದಲೇ ಕ್ರಿಕೆಟ್ ಆಡುತ್ತಿದ್ದೇನೆ. ಅವರ ಉತ್ಸಾಹವೇ ಇದೆಲ್ಲ ಸಾಧ್ಯವಾಗಲು ಕಾರಣವಾಯಿತು. ಕ್ರಿಕೆಟ್‌ಗಾಗಿ ಬರೋಡಾಕ್ಕೆ ಸ್ಥಳಾಂತರಗೊಂಡಾಗ ಆರನೇ ತರಗತಿಯಲ್ಲಿದ್ದೆ. ನಾನು ಒಬ್ಬನಾಗಬೇಕೆಂದು ಅವರು ಬಯಸಿದ್ದರು. 14 ವರ್ಷದಲ್ಲಿ ರಣಜಿಗೆ ಪಾದಾರ್ಪಣೆ ಮಾಡಿದ್ದಾಗಿ ನೆನಪಿಸಿಕೊಳ್ಳುತ್ತಾರೆ.

ವಿರಾಟ್ ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡ ಸ್ವಪ್ನಿಲ್, ತಾನು ವಿರಾಟ್‌ನೊಂದಿಗೆ ಅಂಡರ್ -15 ಮತ್ತು ಅಂಡರ್ 19 ಮಟ್ಟದ ಕ್ರಿಕೆಟ್ ಆಡಿದ್ದೇನೆ ಮತ್ತು ಶ್ರೀಲಂಕಾ ಮತ್ತು ಮಲೇಷ್ಯಾ ಪ್ರವಾಸಗಳಲ್ಲಿ ಅವರ ರೂಮ್‌ಮೇಟ್ ಆಗಿದ್ದಾಗಿ ತಿಳಿಸಿದರು.

ಸ್ವಪ್ನಿಲ್
IPL 2024: ಕೋಲ್ಕತಾ vs ರಾಜಸ್ತಾನ ಪಂದ್ಯ ಮಳೆಗಾಹುತಿ; ಎಲಿಮಿನೇಟರ್ ನಲ್ಲಿ RCB vs RR ಮುಖಾಮುಖಿ!

"ಹಲವು ವರ್ಷಗಳ ನಂತರ ನಾನು ಅವರನ್ನು ಭೇಟಿಯಾದಾಗ, ಅದು ತುಂಬಾ ಸುಮಧುರವಾಗಿತ್ತು. ನಾವು ತುಂಬಾ ವರ್ಷಗಳ ನಂತರ ಭೇಟಿಯಾಗಿ,ನಮ್ಮ ಜೀವನ ಮತ್ತು ಕುಟುಂಬಗಳ ಬಗ್ಗೆ ಪರಸ್ಪರ ಕೇಳಿದೆವು. ಇದು ನಿಜವಾಗಿಯೂ ಉತ್ತಮವಾಗಿತ್ತು ಎಂದು ಅವರು ಹೇಳಿದರು.

ಸ್ವಪ್ನಿಲ್ 2008 IPL ನಲ್ಲಿ ಮುಂಬೈ ಇಂಡಿಯನ್ಸ್ (MI) ನಿಂದ ಆಯ್ಕೆಯಾದುದನ್ನು ನೆನಪಿಸಿಕೊಂಡರು, ಇದು ಮೊದಲ ಸೀಸನ್ ಮತ್ತು 2017 ರಲ್ಲಿ ಪಂಜಾಬ್ ಕಿಂಗ್ಸ್‌ಗಾಗಿ ನಾಲ್ಕು ಪಂದ್ಯಗಳನ್ನು ಆಡುವ ಮೂಲಕ ಲೀಗ್‌ಗೆ ಪಾದಾರ್ಪಣೆ ಮಾಡಿದರು.

"ನನ್ನನ್ನು 2008 ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಆಯ್ಕೆ ಮಾಡಲಾಯಿತು. ಸಚಿನ್ (ತೆಂಡೂಲ್ಕರ್) ನಮಗೆಲ್ಲ ದೇವರಂತೆ. ನಾನು ಅವರನ್ನು ಭೇಟಿಯಾದಾಗ ಮತ್ತು ಅವರೊಂದಿಗೆ ಮೊದಲ ಬಾರಿಗೆ ಸಂವಹನ ನಡೆಸಿದಾಗ, ಅದು ತುಂಬಾ ಚೆನ್ನಾಗಿತ್ತು. ಪಂಜಾಬ್ ಪರ ಸಿಎಸ್ ಕೆ ವಿರುದ್ಧ ಆಡುವಾಗ ಮ್ಯಾಕ್ಸ್ ವೆಲ್ ಕ್ಯಾಪ್ಟನ್ ಆಗಿದ್ದರು. ಆಗ ಎಂಎಶ್ ಧೋನಿ ಅವರ ವಿಕೆಟ್ ಪಡೆದಿದ್ದಾಗಿ ಸ್ವಪ್ನಿಲ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com