ಚೆನ್ನೈ: ಹಾಲಿ ಐಪಿಎಲ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಸೋಲಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮಾಹಿ ಪಂದ್ಯದ ಬಳಿಕ ಯಾವ ನಿರ್ಧಾರವನ್ನೂ ಮಾಡದೇ ರಾಂಚಿಗೆ ತೆರಳಿದ್ದು, ಈ ಬಗ್ಗೆ ಸಿಎಸ್ ಕೆ ಆಡಳಿತ ಮಂಡಳಿ ಮಹತ್ವದ ಹೇಳಿಕೆ ನೀಡಿದೆ.
ಮೇ 18ರ ಶನಿವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಸಿಎಸ್‌ಕೆ ತಂಡದ ಅಂತಿಮ ಲೀಗ್ ಪಂದ್ಯದಲ್ಲಿ ರೋಚಕ ಘಟನೆಗಳ ನಂತರ, ಎಂಎಸ್ ಧೋನಿ ನಿವೃತ್ತಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಸ್ ಕೆ ಆಡಳಿತ ಮಂಡಳಿ ಸಧ್ಯಕ್ಕಂತೂ ಧೋನಿ ತಮ್ಮ ನಿವೃತ್ತಿ ಬಗ್ಗೆ ತಮ್ಮೊಂದಿಗೆ ಮಾತುಕತೆಯಾಡಿಲ್ಲ.
"ಎಂಎಸ್ ಧೋನಿ ಅವರು ಸಿಎಸ್‌ಕೆಯಲ್ಲಿ ಯಾರೊಂದಿಗೂ ನಿವೃತ್ತಿ ಹೇಳುವುದಾಗಿ ತಿಳಿಸಿಲ್ಲ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಒಂದೆರಡು ತಿಂಗಳು ಕಾಯುವುದಾಗಿ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ," ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.
ಮೈದಾನದಲ್ಲಿ ನಡೆದ ಘಟನೆಗಳು ಧೋನಿ ನಿರ್ಧಾರ ಬದಲಿಗೆ ಕಾರಣ?
ಆರ್ ಸಿಬಿ ವಿರುದ್ಧ ಚೆನ್ನೈ ಗೆದ್ದಿದ್ದರೆ ಅದು ಪ್ಲೇಆಫ್ ಗೆ ಪ್ರವೇಶ ಪಡೆಯುತ್ತಿತ್ತು. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಫೈನಲ್‌ನಲ್ಲಿ ಧೋನಿ ಐಪಿಎಲ್ ವಿದಾಯ ಪಂದ್ಯವನ್ನು ಆಡಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ತವರಿನ ಅಂಗಳದಲ್ಲಿ ಆರ್‌ಸಿಬಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದರಿಂದ ಸಿಎಸ್‌ಕೆ ತಂಡ ಯೋಜನೆಗಳು ತಲೆಕಳೆಗಾಯಿತು.
ಬಾಲ್ ಕಳೆದುಹೋಗಿದ್ದರಿಂದ ಸೋಲಬೇಕಾಯಿತು; ಸಿಎಸ್‌ಕೆ ಅಧಿಕಾರಿ
ಪಂದ್ಯದ ಅಂತಿಮ ಓವರ್‌ನಲ್ಲಿ 42 ವರ್ಷದ ಎಂಎಸ್ ಧೋನಿ ಅವರು ಯಶ್ ದಯಾಲ್ ಅವರ ಬೌಲಿಂಗ್‌ನ ಮೊದಲ ಎಸೆತವನ್ನು 110 ಮೀಟರ್‌ಗಳ ಬೃಹತ್ ಸಿಕ್ಸರ್ ಬಾರಿಸಿದಾಗ, ಚೆಂಡು ಮೈದಾನದ ಹೊರಗೆ ಹೋಯಿತು. ನಂತರ ಯಶ್ ದಯಾಳ್‌ಗೆ ನೀಡಿದ ಹೊಸ ಚೆಂಡು ಒಣಗಿತ್ತು ಮತ್ತು ರನ್ ಗಳಿಸಲು ಕಷ್ಟವಾಯಿತು.
"ಸಿಕ್ಸರ್ ಬಾರಿಸಿದಾಗ ಚೆಂಡು ಕಳೆದುಹೋಯಿತು ಮತ್ತು ಚೆಂಡು ಬದಲಾಯಿಸಬೇಕಾಯಿತು. ಯಶ್ ದಯಾಳ್ ಒಣ ಚೆಂಡನ್ನು ಪಡೆದರು ಮತ್ತು ಇದ್ದಕ್ಕಿದ್ದಂತೆ ಹೊಡೆಯುವುದು ಕಷ್ಟಕರವಾಯಿತು," ಎಂದು ಸಿಎಸ್‌ಕೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಲಿನಿಂದ ಧೋನಿ ಸಿಟ್ಟು
ಆರ್‌ಸಿಬಿ ಎದುರು ಸಿಎಸ್‌ಕೆ ಸೋಲಿನ ನಂತರ ಕಣ್ಣಿಗೆ ಕಂಡಂತೆ, ಸಿಟ್ಟುಗೊಂಡಿದ್ದ ಎಂಎಸ್ ಧೋನಿ ಪಂದ್ಯದ ನಂತರದ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ಸಮಯದಲ್ಲಿ ಆರ್‌ಸಿಬಿ ಆಟಗಾರರ ಕೈಕುಲುಕದೆ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದ್ದರು. ಹೀಗಾಗಿ ಸಿಎಸ್‌ಕೆ ಮೂಲಗಳ ಪ್ರಕಾರ, ಲೆಜೆಂಡ್ ಕ್ರಿಕೆಟಿಗ ಎಂಎಸ್ ಧೋನಿ ಇನ್ನೂ ಐಪಿಎಲ್‌ನಿಂದ ನಿವೃತ್ತಿಯಾಗುವುದು ಖಚಿತವಾಗಿ ನಿರ್ಧರಿಸಿಲ್ಲ ಎಂದು ಸೂಚಿಸುತ್ತವೆ.
ಅಂದಹಾಗೆ ಮೇ 22ರಂದು ಅಹ್ಮದಾಬಾದ್‌ನಲ್ಲಿ ಎಲಿಮಿನೇಟರ್ 1ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.
Advertisement