
ಬೆಂಗಳೂರು: ತವರು ಬೆಂಗಳೂರಿನಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎರಡೆರಡು ಆಘಾತಗಳು ಎದುರಾಗಿವೆ.
ಹೌದು.. ನಿನ್ನೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ತವರಿನ ಚೊಚ್ಚಲ ಪಂದ್ಯದಲ್ಲೇ ಆರ್ ಸಿಬಿ ಮುಗ್ಗರಿಸಿದ್ದು, ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
ಅಂತೆಯೇ ಇದೇ ಪಂದ್ಯದಲ್ಲಿ ಆರ್ ಸಿಬಿ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೈಗೆ ಮಾಡಿಕೊಳ್ಳುವ ಮೂಲಕ ತಂಡಕ್ಕೆ ಮತ್ತೊಂದು ಆಘಾತ ನೀಡಿದ್ದಾರೆ.
ಆರ್ ಸಿಬಿ ನೀಡಿದ್ದ 170 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ತಂಡ 17.5 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಕೊಹ್ಲಿಗೆ ಗಾಯ
ಆರ್ ಸಿಬಿಯ 170ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ ರನ್ ಚೇಸಿಂಗ್ ವೇಳೆ ಕೃಣಾಲ್ ಪಾಂಡ್ಯ ಓವರ್ ನ ಐದನೇ ಎಸೆತದಲ್ಲಿ ಗುಜರಾತ್ ನ ಸಾಯಿ ಸುದರ್ಶನ್ ಬಲವಾಗಿ ಸ್ವೀಪ್ ಹೊಡೆದರು. ಈ ವೇಳೆ ಚೆಂಡು ನೇರವಾಗಿ ಡೀಪ್ ಮಿಡ್-ವಿಕೆಟ್‌ನತ್ತ ಸಾಗಿತು.
ಆದರೆ ಅಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಚೆಂಡನ್ನು ತಡೆಯಲು ಯತ್ನಿಸಿದರು. ಈ ವೇಳೆ ಚೆಂಡು ಕೊಹ್ಲಿ ಕೈಗೆ ತಗುಲಿ ವೇಗವಾಗಿ ಬೌಂಡರಿ ಲೈನ್ ದಾಟಿತು. ಈ ವೇಳೆ ಕೊಹ್ಲಿ ಕೈ ಬೆರಳಿಗೆ ಗಾಯವಾಗಿದೆ. ಈ ವೇಳೆ ನೋವಿಗೆ ತುತ್ತಾದ ಕೊಹ್ಲಿ ಮೈದಾನದಲ್ಲೇ ಕೆಲ ಹೊತ್ತು ನೋವಿನಿಂದ ಒದ್ದಾಡಿದರು. ಇದು ಅಭಿಮಾನಿಗಳಿದೆ ಆತಂತ ತಂದೊಡ್ಡಿದೆ.
ಕೋಚ್ ಆ್ಯಂಡಿ ಫ್ಲವರ್ ಸ್ಪಷ್ಟನೆ
ಇನ್ನು ವಿರಾಟ್ ಕೊಹ್ಲಿ ಕೈಗಾಯದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಸಿಬಿ ಕೋಚ್ ಆ್ಯಂಡಿ ಫ್ಲವರ್, ಗಾಯ ಅಷ್ಟೇನೂ ಗಂಭೀರವಾಗಿಲ್ಲ. ಅವರು ಚೇತರಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಗುಜರಾತ್ ಟೈಟನ್ಲ್ ತಂಡ 8 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು. ಗುಜರಾತ್ ಪರ ಭರ್ಜರಿ ಬೌಲಿಂಗ್ ಮಾಡಿ 3 ವಿಕೆಟ್ ಪಡೆದ ಸಿರಾಜ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
Advertisement