IPL 2025: GT ವಿರುದ್ಧ Vaibhav Suryavanshi ಸಿಡಿಲಬ್ಬರದ ಬ್ಯಾಟಿಂಗ್; 35 ಎಸೆತದಲ್ಲಿ ಶತಕ; ಹಲವು ದಾಖಲೆ ಧ್ವಂಸ ಮಾಡಿದ 14ರ ಪೋರ!

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 210 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
Vaibhav Suryavanshi Slams Stunning Century
ವೈಭವ್ ಸೂರ್ಯವಂಶಿ
Updated on

ಜೈಪುರ: ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡದ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಗುಜರಾತ್ ಟೈಟನ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದು, ದಾಖಲೆಯ ಶತಕ ಸಿಡಿಸಿದ್ದಾರೆ.

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ನೀಡಿದ್ದ 210 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಬೃಹತ್ ಗುರಿ ಬೆನ್ನಟ್ಟಿರುವ ರಾಜಸ್ಥಾನಕ್ಕೆ ಯುವ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟಿದ್ದಾರೆ.

ಅದರಲ್ಲೂ ಮೊದಲ ಐಪಿಎಲ್ ಸೀಸನ್ ಆಡುತ್ತಿರುವ 14 ವರ್ಷದ ವೈಭವ್, ತಮ್ಮ ಹೊಡಿಬಡಿ ಆಟದ ಮೂಲಕ ಗುಜರಾತ್ ಬೌಲರ್​ಗಳ ಬೆವರಿಳಿಸುವುದರೊಂದಿಗೆ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಈ ಸೀಸನ್​ನ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ವೈಭವ್ ಕೇವಲ 35 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದ್ದಾರೆ.

Vaibhav Suryavanshi Slams Stunning Century
IPl 2025: 'ರಾಜಸ್ಥಾನ್ ರಾಯಲ್ಸ್ ತಂಡದ ಈ ಸೀಸನ್ ಬಹುತೇಕ ಮುಗಿದಿದೆ'- ಬೌಲಿಂಗ್ ಕೋಚ್

ಯಶಸ್ವಿ ಜೈಸ್ವಾಲ್ ಜೊತೆಗೂಡಿ ಆರ್ ಆರ್ ಪರ ಚೇಸಿಂಗ್ ಆರಂಭಿಸಿದ ವೈಭವ್ ಸೂರ್ಯವಂಶಿ ಆರಂಭಿದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ಮೊದಲ ವಿಕೆಟ್ ಗೆ 166 ರನ್ ಗಳ ದಾಖಲೆಯ ಜೊತೆಯಾಟವಾಡಿದರು. ವೈಭವ್ ಸೂರ್ಯ ವಂಶಿ ಕೇವಲ 38 ಎಸೆತಗಳಲ್ಲಿ ಬರೊಬ್ಬರಿ 11 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು.

ದಾಖಲೆಗಳ ಧೂಳಿಪಟ

ಇನ್ನು ಇಂದಿನ ಭರ್ಜರಿ ಬ್ಯಾಟಿಂಗ್ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ಐಪಿಎಲ್ 2ನೇ ವೇಗದ ಶತಕ

ಇನ್ನು ಇಂದು ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ 2ನೇ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಈ ಹಿಂದೆ 2013ರಲ್ಲಿ ಆರ್ ಸಿಬಿಯ ಕ್ರಿಸ್ ಗೇಯ್ಲ್ ಕೇವಲ 30 ಎಸೆತಗಳಲ್ಲಿ ಪಂಜಾಬ್ ವಿರುದ್ಧ ಶತಕ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದ ಅತಿ ವೇಗದ ಶತಕವಾಗಿದೆ. ಇಂದಿನ ಶತಕದ ಮೂಲಕ ಈ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ 2ನೇ ಸ್ಥಾನಕ್ಕೇರಿದ್ದು, 2010ರಲ್ಲಿ ಇದೇ ರಾಜಸ್ತಾನ ಪರ ಯೂಸುಫ್ ಪಠಾಣ್ ಮುಂಬೈ ವಿರುದ್ಧ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 2013ರಲ್ಲಿ ಪಂಜಾಬ್ ತಂಡದ ಡೇವಿಡ್ ಮಿಲ್ಲರ್ ಆರ್ ಸಿಬಿ ವಿರುದ್ಧ ಮೊಹಾಲಿಯಲ್ಲಿ ಡೇವಿಡ್ ಮಿಲ್ಲರ್ ಶತಕ ಸಿಡಿಸಿದ್ದರು.

  • Fastest IPL 100s (by balls)

  • 30 Chris Gayle RCB vs PWI Bengaluru 2013

  • 35 Vaibhav Suryavanshi RR vs GT Jaipur 2025

  • 37 Yusuf Pathan RR vs MI Mumbai 2010

  • 38 David Miller PBKS vs RCB Mohali 2013

ಟಿ20 ಶತಕ ಸಿಡಿಸಿದ ಅತಿ ಕಿರಿಯ ಆಟಗಾರ

ಅಂತೆಯೇ ವೈಭವ್ ಸೂರ್ಯವಂಶಿ ಈ ಶತಕದ ಮೂಲಕ ಟಿ20 ಮಾದರಿ ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ ಅತಿಕಿರಿಯ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇಂದಿಗ ವೈಭವ್ ಸೂರ್ಯವಂಶಿ ವಯಸ್ಸು 14 ವರ್ಷ 32 ದಿನಗಳಾಗಿದೆ. ಇದಕ್ಕೂ ಮೊದಲು ಈ ಸಾಧನೆ ಮಹಾರಾಷ್ಟ್ರದ ವಿಜಯ್ ಜೋಲ್ ಹೆಸರಲ್ಲಿತ್ತು. ಮುಂಬೈ ವಿರುದ್ಧ ಅವರು ಟಿ20 ಶತಕ ಸಿಡಿಸಿದಾಗ ಅವರ ವಯಸ್ಸು 18 ವರ್ಷ 118 ದಿನಗಳಾಗಿತ್ತು.

Youngest to score a T20 century

  • 14y 32d Vaibhav Suryavanshi RR vs GT 2025

  • 18y 118d Vijay Zol Maharahtra vs Mumbai 2013

  • 18y 179d Pervez Hossain Emon Barishal vs Rajshahi 2020

  • 187 280d Gustav McKeon France vs Switzerland 2022

ಅಧಿಕ ಸಿಕ್ಸರ್ ದಾಖಲೆ ಸರಿಗಟ್ಟಿದ ವೈಭವ್

ವೈಭವ್ ಸೂರ್ಯವಂಶಿ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಕ್ಕೂ ಮೊದಲು, ಮುರಳಿ ವಿಜಯ್ 2010 ರ ಐಪಿಎಲ್‌ನಲ್ಲಿ ಇನ್ನಿಂಗ್ಸ್‌ನಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದ್ದರು.

Vaibhav Suryavanshi Slams Stunning Century
IPL 2025: ಶತಕ ಸಿಡಿಸಿ ಗುರುವಿಗೆ Vaibhav Suryavanshi ಸೆಲ್ಯೂಟ್; ಮುರಿದ ಕಾಲೂ ಲೆಕ್ಕಿಸದೇ ಎದ್ದು ನಿಂತು ಚಪ್ಪಾಳೆ ತಟ್ಟಿದ Rahul Dravid

ಐಪಿಎಲ್ ನಲ್ಲಿ ವೇಗದ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ

ಇದೇ ವೇಳೆ ವೈಭವ್ ಸೂರ್ಯವಂಶಿ ಐಪಿಎಲ್ ಟೂರ್ನಿಯಲ್ಲಿ ವೇಗದ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಈ ಹಿಂದೆ 2010ರಲ್ಲಿ ಇದೇ ರಾಜಸ್ತಾನ ಪರ ಯೂಸುಫ್ ಪಠಾಣ್ ಮುಂಬೈ ವಿರುದ್ಧ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

fastest centuries by Indians in IPL:

  • 35 balls: Vaibhav Suryavanshi vs GT (2025)

  • 37 balls: Yusuf Pathan vs MI (2010)

  • 39 balls: Priyansh vs CSK (2025)

  • 40 balls: Abhishek vs PBKS (2025)

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com