'Test cricket ಗೌರವಿಸಿ': ನರೇಂದ್ರ ಮೋದಿ ಕ್ರೀಡಾಂಗಣದಿಂದ ಯುವ ಕ್ರಿಕೆಟಿಗರಿಗೆ ಸಂದೇಶ ನೀಡಿದ Virat Kohli

ಪಂದ್ಯದ ಕೊನೆಯ ಓವರ್‌ನಿಂದ ಅಳುತ್ತಿದ್ದರು. ತಮ್ಮ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ಕುಟುಂಬ ಮತ್ತು ಮುಖ್ಯವಾಗಿ ಆರ್‌ಸಿಬಿ ಅಭಿಮಾನಿಗಳ ಪ್ರಯತ್ನಗಳ ಬಗ್ಗೆ ಅವರು ಹೆಮ್ಮೆಪಟ್ಟರು.
Virat Kohli
ವಿರಾಟ್ ಕೊಹ್ಲಿ
Updated on: 

2025 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವೀಕ್ಷಕ ವಿವರಣೆಗಾರರಲ್ಲಿ ಒಬ್ಬರಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು 18 ವರ್ಷಗಳ ನಂತರ ಮೊದಲ ಬಾರಿಗೆ ಟ್ರೋಫಿ ಗೆದ್ದ ನಂತರ ವಿರಾಟ್ ಕೊಹ್ಲಿ ಅವರೊಂದಿಗೆ ಮಾತುಕತೆ ನಡೆಸಿದರು.

ಅಹಮಾದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧದ ಸವಾಲನ್ನು 6 ರನ್‌ಗಳಿಂದ ಜಯಿಸಿತು. 2008 ರಿಂದ ಈ ಕ್ಷಣಕ್ಕಾಗಿ ಕಾಯುತ್ತಿರುವ ವಿರಾಟ್ ಕೊಹ್ಲಿ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ ಆನಂದಭಾಷ್ಪ ಸುರಿಸಿದರು.

ಪಂದ್ಯದ ಕೊನೆಯ ಓವರ್‌ನಿಂದ ಅಳುತ್ತಿದ್ದರು. ತಮ್ಮ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ಕುಟುಂಬ ಮತ್ತು ಮುಖ್ಯವಾಗಿ ಆರ್‌ಸಿಬಿ ಅಭಿಮಾನಿಗಳ ಪ್ರಯತ್ನಗಳ ಬಗ್ಗೆ ಅವರು ಹೆಮ್ಮೆಪಟ್ಟರು.

Virat Kohli
IPL 2025: RCB ಗೆಲುವನ್ನು ವಿರುಷ್ಕಾ ಜೋಡಿ ಆಚರಿಸಿದ್ದು ಹೀಗೆ!

ಟೆಸ್ಟ್ ಕ್ರಿಕೆಟ್‌ನ ಮಹತ್ವದ ಬಗ್ಗೆ ಯುವ ಆಟಗಾರರಿಗೆ ಸಂದೇಶ ನೀಡಬೇಕೆಂದು ಹೇಡನ್ ವಿರಾಟ್ ಅವರನ್ನು ಈ ಸಂದರ್ಭದಲ್ಲಿ ಕೇಳಿಕೊಂಡರು. 36 ವರ್ಷದ ವಿರಾಟ್ ಕೊಹ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. 123 ಟೆಸ್ಟ್‌ಗಳನ್ನು ಆಡಿ 9,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ನಂತರ, ಅವರು ಐದು ದಿನಗಳ ಆಟದ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅನುಭವಿ ಆಟಗಾರ 30 ಶತಕಗಳನ್ನು ಬಾರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ನ್ನು ಗೌರವಿಸಬೇಕು

ಯುವ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್ ನ್ನು ಗೌರವದಿಂದ ಕಾಣಬೇಕು. ಟೆಸ್ಟ್ ಕ್ರಿಕೆಟ್‌ಗೆ ನಿಮ್ಮ ಹೃದಯ ಮತ್ತು ಆತ್ಮವನ್ನು ನೀಡಿ. ಜನರು ನಿಮಗೆ ಕೈಕುಲಿಕಿದಾಗ, ನೀವು ಚೆನ್ನಾಗಿ ಆಡಿದ್ದೀರಿ ಎಂದು ಹೇಳಿದಾಗ ನೀವು ಸಂತೋಷಪಡುತ್ತೀರಿ, ಟೆಸ್ಟ್ ಕ್ರಿಕೆಟ್ ಏನೆಂದು ಅರಿತುಕೊಳ್ಳುತ್ತೀರಿ. ನನಗೆ ಈ ಸ್ವರೂಪ ತುಂಬಾ ಇಷ್ಟವಾಯಿತು, ಟೆಸ್ಟ್ ಕ್ರಿಕೆಟ್ ನಲ್ಲಿ ನಿಮ್ಮ ದೇಶವನ್ನು ಪ್ರತಿನಿಧಿಸುವುದಕ್ಕಿಂತ ಉತ್ತಮವಾದದ್ದು ಇನ್ನೊಂದಿಲ್ಲ ಎಂದು ನಾನು ನಿಮಗೆ ತಿಳಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಭಾರತ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದು, ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ನಿವೃತ್ತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com