

2026ರ ಟಿ20 ವಿಶ್ವಕಪ್‌ನಲ್ಲಿನ ಶೋಚನೀಯ ಅಭಿಯಾನದ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವೃತ್ತಿಜೀವನ ಕೊನೆಗೊಳ್ಳುತ್ತಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ಅನುಭವಿ ಆಲ್‌ರೌಂಡರ್ ಕಳಪೆ ಪ್ರದರ್ಶನ ನೀಡಿದರು ಮತ್ತು 3 ಪಂದ್ಯಗಳಲ್ಲಿ ಕೇವಲ 62 ರನ್ ಗಳಿಸುವಲ್ಲಿ ಯಶಸ್ವಿಯಾದರು. ಐರ್ಲೆಂಡ್ ವಿರುದ್ಧ ಕೇವಲ ಒಂದು ಪಂದ್ಯವನ್ನಷ್ಟೇ ಗೆದ್ದು, ಎರಡು ಪಂದ್ಯಗಳನ್ನು ಸೋತ ಆಸ್ಟ್ರೇಲಿಯಾ ಗುಂಪು ಹಂತದಲ್ಲಿಯೇ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ.
ಐಸಿಸಿ ಜೊತೆ ಮಾತನಾಡಿದ ಪಾಂಟಿಂಗ್, ಮ್ಯಾಕ್ಸ್‌ವೆಲ್ LA28 ಒಲಿಂಪಿಕ್ಸ್‌ಗೆ ಆಸ್ಟ್ರೇಲಿಯಾ ತಂಡದ ಭಾಗವಾಗುವುದಿಲ್ಲ ಮತ್ತು ಅವರ ವೃತ್ತಿಜೀವನ ಕೊನೆಗೊಳ್ಳುವಂತಿದೆ ಎಂದು ಭಾವಿಸಿದರು. 'ಬಿಗ್ ಶೋ' ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುವ ಮ್ಯಾಕ್ಸ್‌ವೆಲ್ ಅವರನ್ನು 2025ರ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನದ ನಂತರ ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿತು ಮತ್ತು 2026ರ ಐಪಿಎಲ್ ಹರಾಜಿಗೂ ಅವರು ಹೆಸರು ನೋಂದಾಯಿಸಲಿಲ್ಲ. ಈಗ, ಅವರು ಪೇಶಾವರ್ ಝಲ್ಮಿ ಪರ PKR 4.5 ಕೋಟಿಗೆ (INR 1.47 ಕೋಟಿ) ಬಿಕರಿಯಾಗಿದ್ದಾರೆ.
'ಗ್ಲೆನ್ ಮ್ಯಾಕ್ಸ್‌ವೆಲ್, ಅವರು ಅಲ್ಲಿಗೆ ಬರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರ ವೃತ್ತಿಜೀವನ ಅಂತ್ಯಗೊಳ್ಳುತ್ತಿದೆ ಎಂದು ನನಗೆ ತೋರುತ್ತದೆ. ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಖಂಡಿತವಾಗಿಯೂ ಪಂದ್ಯಾವಳಿಯ ಭಾಗವಾಗುತ್ತಾರೆ. ಆದರೆ, ಸ್ಟೀವ್ ಸ್ಮಿತ್ ಅದರಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ' ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಹೇಳಿದರು.
ಟಿ20 ವಿಶ್ವಕಪ್‌ನಲ್ಲಿ ಜೋಶ್ ಹೇಜಲ್‌ವುಡ್ ಅವರ ಬದಲಿಯಾಗಿ ಸ್ಮಿತ್ ಅವರನ್ನು ಹೆಸರಿಸಲಾಯಿತು ಆದರೆ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ.
2026ರ ಟಿ20 ವಿಶ್ವಕಪ್‌ನಿಂದ ಆಸ್ಟ್ರೇಲಿಯಾ ಔಟ್
ಐರ್ಲೆಂಡ್ ವಿರುದ್ಧ 67 ರನ್‌ಗಳ ಗೆಲುವಿನೊಂದಿಗೆ ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದ ನಂತರ, ಆಸ್ಟ್ರೇಲಿಯಾ ಸತತ ಎರಡು ಹಿನ್ನಡೆಗಳನ್ನು ಅನುಭವಿಸಿತು. ಹೀಗಾಗಿ ಪಂದ್ಯಾವಳಿಯಿಂದಲೇ ಔಟ್ ಆಯಿತು. ಮೊದಲನೆಯದಾಗಿ, ಜಿಂಬಾಬ್ವೆ ವಿರುದ್ಧ 23 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿತು. ನಂತರ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳಿಂದ ಸೋತಿತು.
Advertisement