T20 World Cup 2026: 'ಈಗ ಭಾರತ ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ': ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್

ಭಾರತದ ವಿರುದ್ಧ ಪಾಕಿಸ್ತಾನ ಕೊನೆಯ T20I ಗೆಲುವು ಸಾಧಿಸಿದ್ದು 2024 ರ ಸೆಪ್ಟೆಂಬರ್‌ನಲ್ಲಿ. ಅಂದಿನಿಂದ, ಎರಡೂ ತಂಡಗಳು ಆರು ಪಂದ್ಯಗಳನ್ನು ಆಡಿದ್ದು, ಭಾರತ ಎಲ್ಲ ಪಂದ್ಯಗಳಲ್ಲಿ ಗೆದ್ದಿದೆ.
Mohammad Amir
ಮೊಹಮ್ಮದ್ ಅಮೀರ್
Updated on

ಫೆಬ್ರುವರಿ 15 ರಂದು ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ 61 ರನ್‌ಗಳ ಜಯ ಸಾಧಿಸುವ ಮೂಲಕ ಭಾರತ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮೇಲೆ ತನ್ನ ಪ್ರಾಬಲ್ಯ ಮುಂದುವರಿಸಿದೆ. 2007ರಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ನಂತರ ಎರಡೂ ತಂಡಗಳು 9ನೇ ಬಾರಿಗೆ ಮುಖಾಮುಖಿಯಾಗಿವೆ. ಆದರೆ, ಪಾಕಿಸ್ತಾನ ಇಲ್ಲಿಯವರೆಗೆ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾನುವಾರದ ಗೆಲುವಿನೊಂದಿಗೆ, ಭಾರತವು ಮೆಗಾ ಈವೆಂಟ್‌ನಲ್ಲಿ ಏಷ್ಯಾದ ತನ್ನ ನೆರೆಯ ದೇಶದ ವಿರುದ್ಧ 8-1 ಮುನ್ನಡೆ ಸಾಧಿಸಿದೆ. ಒಟ್ಟಾರೆಯಾಗಿ ಟಿ20ಐಗಳಲ್ಲಿ, ತಂಡಗಳು ಇಲ್ಲಿಯವರೆಗೆ 17 ಪಂದ್ಯಗಳನ್ನು ಆಡಿದ್ದು, ಹಾಲಿ ಚಾಂಪಿಯನ್‌ಗಳು ಅವುಗಳಲ್ಲಿ 14 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಕೇವಲ ಮೂರರಲ್ಲಿ ಸೋತಿದ್ದಾರೆ.

ಭಾರತದ ವಿರುದ್ಧ ಪಾಕಿಸ್ತಾನ ಕೊನೆಯ T20I ಗೆಲುವು ಸಾಧಿಸಿದ್ದು 2024 ರ ಸೆಪ್ಟೆಂಬರ್‌ನಲ್ಲಿ. ಅಂದಿನಿಂದ, ಎರಡೂ ತಂಡಗಳು ಆರು ಪಂದ್ಯಗಳನ್ನು ಆಡಿದ್ದು, ಭಾರತ ಎಲ್ಲ ಪಂದ್ಯಗಳಲ್ಲಿ ಗೆದ್ದಿದೆ.

ಸದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ಗುಣಮಟ್ಟದಲ್ಲಿನ ತೀವ್ರ ವ್ಯತ್ಯಾಸವನ್ನು ಪಾಕ್ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಎತ್ತಿ ತೋರಿಸಿದ್ದಾರೆ. ಭಾರತೀಯ ಆಟಗಾರರು ಪಾಕಿಸ್ತಾನದ ವಿಕೆಟ್‌ಗಳು ಅಥವಾ ತಂಡದ ವಿರುದ್ಧದ ವಿಜಯಗಳನ್ನು ಸಹ ಆಚರಿಸುವುದಿಲ್ಲ. ಏಕೆಂದರೆ, ಇದು ಅವರಿಗೆ ನಿಯಮಿತ ಕೆಲಸವಾಗಿದೆ ಎಂದು ಅವರು ಗಮನಸೆಳೆದರು.

'1990ರ ದಶಕದ ಭಾರತ ತಂಡಕ್ಕೂ ಈಗಿನ ತಂಡಕ್ಕೂ ವ್ಯತ್ಯಾಸವಿದೆ. 1990ರ ದಶಕದಲ್ಲಿ, ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಸೋಲುವ ಭಯ ಹೊಂದಿತ್ತು. ಈಗ, ಅವರು ಪಾಕಿಸ್ತಾನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ಪಾಕಿಸ್ತಾನದ ವಿಕೆಟ್‌ಗಳನ್ನು ಮತ್ತು ತಮ್ಮ ವಿಜಯಗಳನ್ನು ಸಹ ಆಚರಿಸುವುದಿಲ್ಲ. ಇದೊಂದೇ ವ್ಯತ್ಯಾಸ' ಎಂದು ಜಿಯೋ ನ್ಯೂಸ್‌ನಲ್ಲಿ ಮೊಹಮ್ಮದ್ ಅಮೀರ್ ಹೇಳಿದರು.

Mohammad Amir
T20 World Cup 2026: 'ನಾವು ಅನಕ್ಷರಸ್ಥರು, ಅದಕ್ಕೆ ಭಾರತದ ವಿರುದ್ಧ ಸೋಲು ಕಾಣಬೇಕಾಯಿತು'; ಪಾಕಿಸ್ತಾನದ ಮಾಜಿ ಆಟಗಾರ

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026ರ ಗ್ರೂಪ್ ಎ ಪಂದ್ಯದಲ್ಲಿ, ಇಶಾನ್ ಕಿಶನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಜಸ್ಪ್ರೀತ್ ಬುಮ್ರಾ ಪಾಕಿಸ್ತಾನದ ಅಗ್ರ ಕ್ರಮಾಂಕವನ್ನು ನಾಶಪಡಿಸಿದರು. ಭಾರತವು 61 ರನ್‌ಗಳ ಜಯ ಸಾಧಿಸಿತು. ಇದು ಟಿ20ಐಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅತಿದೊಡ್ಡ ಗೆಲುವು (ರನ್ ಅಂತರದಿಂದ) ಇದಾಗಿದೆ.

ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಪ್ರೇಮದಾಸ ಕ್ರೀಡಾಂಗಣದ ನಿಧಾನಗತಿಯ ಪಿಚ್‌ನಲ್ಲಿ 40 ಎಸೆತಗಳಲ್ಲಿ 77 ರನ್ ಗಳಿಸಿ ಇಶಾನ್ ಕಿಶನ್ ಆರಂಭಿಕ ಅಡಿಪಾಯ ಹಾಕಿದರು. ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿದ್ದವು. ಅಂತಿಮವಾಗಿ ಏಳು ವಿಕೆಟ್‌ ನಷ್ಟಕ್ಕೆ 175 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಪಾಕಿಸ್ತಾನ 18 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ ಡಬಲ್ ವಿಕೆಟ್ ಪಡೆದರು. ಭಾರತವು ಪಾಕಿಸ್ತಾನವನ್ನು ನಿಯಂತ್ರಣದಲ್ಲಿಟ್ಟಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com