'ಶಾರ್ಟ್-ಬಾಲ್' ಮೂಲಕ ಭಾರತಕ್ಕೆ ಪರೀಕ್ಷೆಯೊಡ್ಡಲು ಇಂಗ್ಲೆಂಡ್ ಸಜ್ಜು; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಎಚ್ಚರಿಕೆ!

ಇಂಗ್ಲೆಂಡ್ vs ಭಾರತ 5ನೇ ಟಿ20ಐಗೂ ಮೊದಲು, ಭಾರತೀಯ ಬ್ಯಾಟ್ಸ್‌ಮನ್‌ಗಳು 118 ಶಾರ್ಟ್-ಪಿಚ್ ಎಸೆತಗಳಿಂದ 171 ರನ್ ಗಳಿಸಿದ್ದಾರೆ ಮತ್ತು 11 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾರೆ.
Virat Kohli - Rohit Sharma
ವಿರಾಟ್ ಕೊಹ್ಲಿ - ರೋಹಿತ್ ಶರ್ಮಾ
Updated on

ಇಂಗ್ಲೆಂಡ್ ಕ್ರಿಕೆಟ್ ತಂಡವು, ಏಕದಿನ ಸರಣಿಯಲ್ಲಿಯೂ ಅನುಭವಿ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಲು T20I ಸರಣಿಯಲ್ಲಿ ಬಳಸಲಾದ ತಂತ್ರವನ್ನೇ ಮತ್ತೆ ಬಳಸಲು ಯೋಜಿಸಿದೆ. ಐದು ಪಂದ್ಯಗಳ T20I ಸರಣಿಯಲ್ಲಿ 0-4 ಅಂತರದಲ್ಲಿ ಕ್ಲೀನ್ ಸ್ವೀಪ್ ಅನುಭವಿಸಿದ ನಂತರ, ಮೆನ್ ಇನ್ ಬ್ಲೂ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಹ್ಯಾರಿ ಬ್ರೂಕ್ ಮತ್ತು ತಂಡದ ವಿರುದ್ಧ ಸೆಣಸಲಿದೆ. T20I ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ನಲ್ಲಿ ಶಾರ್ಟ್-ಡೆಲಿವರಿಗಳನ್ನು ಎದುರಿಸಲು ಹೆಣಗಾಡಿದರು. ಹೆಚ್ಚಿನ ಸಂದರ್ಭಗಳಲ್ಲಿ ಬೌಲರ್‌ಗಳು ವಿಕೆಟ್ ಪಡೆದರು. ಈಗ, ಇಂಗ್ಲೆಂಡ್ ಏಕದಿನ ಪಂದ್ಯಗಳಲ್ಲಿಯೂ ಭಾರತದ ಅನುಭವಿ ಬ್ಯಾಟ್ಸ್‌ಮನ್‌ಗಳಿಗೆ ಅದೇ ತಂತ್ರವನ್ನು ಪುನರಾವರ್ತಿಸಲು ಯೋಜಿಸಿದೆ.

ಇಂಗ್ಲೆಂಡ್ vs ಭಾರತ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆನ್ ಡಕೆಟ್, ಇಂಗ್ಲೆಂಡ್ ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ಶಾರ್ಟ್ ಬಾಲ್‌ಗಳಿಂದ ಪರೀಕ್ಷಿಸಲಿದೆ. ಆದಾಗ್ಯೂ, ಭಾರತೀಯ ಬ್ಯಾಟ್ಸ್‌ಮನ್‌ಗಳು ಆ ರೀತಿಯ ಎಸೆತಗಳನ್ನು ಆಡುವಲ್ಲಿ ಉತ್ತಮರಾಗಿದ್ದರೆ ಆತಿಥೇಯರು ಈ ತಂತ್ರವನ್ನು ಕೈಬಿಡಬಹುದು ಎಂದು ಹೇಳಿದರು.

ಇಂಗ್ಲೆಂಡ್ vs ಭಾರತ 5ನೇ ಟಿ20ಐಗೂ ಮೊದಲು, ಭಾರತೀಯ ಬ್ಯಾಟ್ಸ್‌ಮನ್‌ಗಳು 118 ಶಾರ್ಟ್-ಪಿಚ್ ಎಸೆತಗಳಿಂದ 171 ರನ್ ಗಳಿಸಿದ್ದಾರೆ ಮತ್ತು 11 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾರೆ. ವೈಭವ್ ಸೂರ್ಯವಂಶಿಯಿಂದ ಹಿಡಿದು ಇಶಾನ್ ಕಿಶನ್‌ನಂತಹ ಅನುಭವಿ ಬ್ಯಾಟ್ಸ್‌ಮನ್‌ಗಳವರೆಗೆ, ಹೆಚ್ಚಿನವರು ಶಾರ್ಟ್ ಬಾಲ್ ಎದುರಿಸಲು ಹೆಣಗಾಡಿದ್ದಾರೆ.

'ನಾವು ಅವರನ್ನು ಪರೀಕ್ಷಿಸಿ ನೋಡುತ್ತೇವೆ. ಒಂದು ವೇಳೆ ಅವರು ಅದರಲ್ಲಿ (ಶಾರ್ಟ್ ಬಾಲ್ ಎದುರಿಸುವುದರಲ್ಲಿ) ಉತ್ತಮವಾಗಿದ್ದರೆ, ಬಹುಶಃ ನಾವು ಆ ತಂತ್ರವನ್ನು ಅಷ್ಟಾಗಿ ಬಳಸುವುದಿಲ್ಲ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೂ ಖಚಿತವಿಲ್ಲ; ಅದು ಫಲಪ್ರದವಾಗುತ್ತಿದೆ ಎಂದು ಕಂಡಬಂದರೆ ನಾವು ಅದನ್ನು ಮುಂದುವರಿಸಬಹುದು' ಎಂದು ಡಕೆಟ್ ಹೇಳಿದರು.

Virat Kohli - Rohit Sharma
'ಗೌತಮ್ ಗಂಭೀರ್ ಅಷ್ಟೇ ಅಲ್ಲ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ ಸಹ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ': ಸಬಾ ಕರೀಮ್

ಆದಾಗ್ಯೂ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಇತರರನ್ನು ಒಳಗೊಂಡ ಭಾರತೀಯ ತಂಡವು ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಆಡುವುದು ಹೊಸದೇನಲ್ಲ. ಹಿಟ್‌ಮ್ಯಾನ್ ಶಾರ್ಟ್ ಎಸೆತಗಳನ್ನು ನಿಭಾಯಿಸಲು ಪುಲ್ ಶಾರ್ಟ್ ಅನ್ನು ಕರಗತ ಮಾಡಿಕೊಂಡಿದ್ದಾರೆ. ಕೊಹ್ಲಿ ಅವುಗಳನ್ನು ನಿಭಾಯಿಸಲು ತನ್ನದೇ ಆದ ತಂತ್ರಗಳನ್ನು ಹೊಂದಿದ್ದಾರೆ. ಸರಣಿಗೆ ತಯಾರಿ ನಡೆಸಲು ಇಬ್ಬರೂ ತಾರೆಯರು ವಾರಗಳಿಂದ ತರಬೇತಿ ಪಡೆಯುತ್ತಿದ್ದಾರೆ.

'ವಿರಾಟ್ ಮತ್ತು ರೋಹಿತ್ ಇಬ್ಬರೂ ಅದ್ಭುತ ಆಟಗಾರರು. ಆದರೆ, ನಮ್ಮ ತಂಡದ ಕಾರ್ಯವೈಖರಿಯಲ್ಲಿ ನಾವು ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ. ನಾವು ನಮ್ಮದೇ ಆದ ಶೈಲಿಗೆ ಬದ್ಧರಾಗಿರಬೇಕು ಮತ್ತು ಅದನ್ನು ಅವರಿಗಿಂತ ಉತ್ತಮವಾಗಿ ನಿರ್ವಹಿಸಲು ಪ್ರಯತ್ನಿಸಬೇಕು. ಅಂತಿಮವಾಗಿ, ಕಣಕ್ಕಿಳಿದಾಗ ನಾವು ಯಾರನ್ನೂ ಹೆದರುವುದಿಲ್ಲ' ಎಂದು ಡಕೆಟ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com