

ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಯುವ ಆಕ್ರಮಣಕಾರಿ ಬಲಗೈ ಆರಂಭಿಕ ಬ್ಯಾಟರ್ ಅಮನ್ ರಾವ್, ತೆಲಂಗಾಣ ಟಿ-20 ಲೀಗ್ ನಲ್ಲಿ ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ದೇಶಿಯ ಟಿ20 ಲೀಗ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮೆದಕ್ ಫಾಲ್ಕನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಾರಂಗಲ್ ವಾರಿಯರ್ಸ್ ಕ್ಯಾಪ್ಟನ್ ಅಮನ್ ರಾವ್ ಕೇವಲ 48 ಎಸೆತಗಳಲ್ಲಿ 142 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಭರ್ಜರಿ ಸಿಕ್ಸರ್‌ಗಳು ಮತ್ತು ಬೌಂಡರಿಗಳ ಮೂಲಕ ಎದುರಾಳಿ ಬೌಲರ್‌ಗಳ ಬೇವರಿಳಿಸಿದರು.
ಅಮನ್ ಒಟ್ಟು 48 ಎಸೆತಗಳನ್ನು ಎದುರಿಸಿ ಮೇಡಕ್ ಫಾಲ್ಕನ್ಸ್ ವಿರುದ್ಧ 12 ಬೌಂಡರಿ ಮತ್ತು 13 ಸಿಕ್ಸರ್‌ಗಳ ಸಹಾಯದಿಂದ 142 ರನ್ ಗಳಿಸಿದರು. ಅವರು 295.83 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು.
ಅಮನ್ ರಾವ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 2026 ಹರಾಜಿನಲ್ಲಿ ₹30 ಲಕ್ಷಕ್ಕೆ ಖರೀದಿಸಿತ್ತು. ದೇಶೀಯ ಕ್ರಿಕೆಟ್‌ನಲ್ಲಿ ಅವರ ನಿರಂತರ ಪ್ರದರ್ಶನದಿಂದ ಅವರು ಈಗ ಫ್ರಾಂಚೈಸಿಯ ಭವಿಷ್ಯದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Advertisement