ಭಾರತ- ಇಂಗ್ಲೆಂಡ್ ಸರಣಿ: ಎಲ್ಲಾ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲ್ಲ ವೈಭವ್​ ಸೂರ್ಯವಂಶಿ! ಕಾರಣವೇನು ಗೊತ್ತಾ?

ಇಂಗ್ಲೆಂಡ್​ನಲ್ಲಿ ವೈಭವ್ ಸೂರ್ಯವಂಶಿ ಆಡುವುದು ಖಚಿತವಾಗಿದೆ. ಇನ್ನು ಮತ್ತೊಂದು ಕಾರಣಕ್ಕಾಗಿ ವೈಭವ್ ಸೂರ್ಯವಂಶಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ.
Vaibhav Sooryavanshi
ವೈಭವ್ ಸೂರ್ಯವಂಶಿonline desk
Updated on

ಜೂನ್ 26 ರಿಂದ ಆರಂಭವಾಗಲಿರುವ ಭಾರತ ಹಾಗೂ ಐರ್ಲೆಂಡ್ ನಡುವೆ ಎರಡು ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆಯೇ, ಭಾರತ- ಇಂಗ್ಲೆಂಡ್ ಟಿ20 ಸರಣಿ ಆರಂಭವಾಗಲಿದೆ.

ಇಂಗ್ಲೆಂಡ್ ನಲ್ಲಿ ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಎರಡೂ ಪ್ರವಾಸಗಳಿಗೂ ಟೀಂ ಇಂಡಿಯಾದಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್​ನಲ್ಲಿ ವೈಭವ್ ಸೂರ್ಯವಂಶಿ ಆಡುವುದು ಖಚಿತವಾಗಿದೆ. ಇನ್ನು ಮತ್ತೊಂದು ಕಾರಣಕ್ಕಾಗಿ ವೈಭವ್ ಸೂರ್ಯವಂಶಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇಂಗ್ಲೆಂಡ್​ನಲ್ಲಿ ವೈಭವ್ ಪ್ರತ್ಯೇಕ ಡ್ರೆಸ್ಸಿಂಗ್ ರೂಂ ಬಳಸಬೇಕಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ.

Vaibhav Sooryavanshi
ತ್ರಿಕೋನ ಏಕದಿನ ಸರಣಿ ಫೈನಲ್: ಬಿಗ್ ಫೈಟ್ ಬಳಿಕ ಲಂಕಾ ಬೌಲಿಂಗ್ ಛಿದ್ರ ಮಾಡಿದ Vaibhav Sooryavanshi; 21 ವರ್ಷಗಳ ಹಳೆಯ ದಾಖಲೆ ಉಡೀಸ್!

ವೈಭವ್​ಗೆ ಪ್ರತ್ಯೇಕ ಡ್ರೆಸಿಂಗ್ ರೂಂ

ತಂಡದ ಇಡೀ ಆಟಗಾರರ ಒಂದೇ ಡ್ರೆಸ್ಸಿಂಗ್ ರೂಮ್ ಬಳಸುವುದು ವಾಡಿಕೆ. ಆದರೆ ಇಂಗ್ಲೆಂಡ್​ನಲ್ಲಿ ಮಾತ್ರ ವೈಭವ್​ಗೆ ಬೇರೆ ನಿಯಮವಿದೆ. ವೈಭವ್ ಇಂಗ್ಲೆಂಡ್ ನಲ್ಲಿ ನಡೆಯುವ ಎಲ್ಲಾ 5 ಪಂದ್ಯಗಳಲ್ಲೂ ತಮ್ಮ ಬಟ್ಟೆ ಬದಲಿಸಲು ಪ್ರತ್ಯೇಕ ಡ್ರೆಸ್ಸಿಂಗ್ ರೂಮ್ ಬಳಸಬೇಕಾಗುತ್ತದೆ. ಇದಕ್ಕೆ ಕಾರಣ ಐಸಿಸಿ ಮತ್ತು ಇಂಗ್ಲೆಂಡ್‌ ಕ್ರಿಕೆಟ್​ನಲ್ಲಿ ನಿಯಮ.

ಏನದು ವಿಶೇಷ ನಿಯಮ?

ಐಸಿಸಿ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸುರಕ್ಷತೆ ಮತ್ತು ಮಕ್ಕಳ ರಕ್ಷಣಾ ನೀತಿಗಳ ಅಡಿಯಲ್ಲಿ, 16 ವರ್ಷದೊಳಗಿನ ಆಟಗಾರರು ವಯಸ್ಕರೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳುವಂತಿಲ್ಲ. ಈ ನಿಯಮದ ಪ್ರಕಾರ, 15 ವರ್ಷದವರಾಗಿರುವ ವೈಭವ್ ಇಂಗ್ಲೆಂಡ್‌ನ ಎಲ್ಲಾ ಐದು ಸ್ಥಳಗಳಲ್ಲಿ ಪಂದ್ಯಗಳ ಮೊದಲು ಮತ್ತು ನಂತರ ಬಟ್ಟೆ ಬದಲಾಯಿಸಲು ಅಥವಾ ಸಿದ್ಧರಾಗಲು ಪ್ರತ್ಯೇಕವಾದ ಬಟ್ಟೆ ಬದಲಾಯಿಸುವ ಕೋಣೆಯನ್ನು ಬಳಸಲಿದ್ದಾರೆ. ಉಳಿದಂತೆ ಮಾತುಕತೆ ಸಭೆಯ ವೇಳೆ ವೈಭವ್ ತಂಡದೊಂದಿಗೆ ಇರಬಹುದಾಗಿದೆ.

ಹಾಗೆಯೇ ಇಡೀ ಇಂಗ್ಲೆಂಡ್‌ ಪ್ರವಾಸದಲ್ಲಿ ವೈಭವ್ ಅವರ ಪೋಷಕರು ಕೂಡ ವೈಭವ್ ಅವರೊಂದಿಗೆ ಇರಲಿದ್ದಾರೆ. ಅಲ್ಲದೆ ತಂಡ ತಂಗುವ ಹೋಟೆಲ್‌ನಲ್ಲಿಯೇ ವೈಭವ್ ಪೋಷಕರು ವಾಸ್ತವ್ಯ ಹೂಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com