ಅರ್ಜುನ್ ತೆಂಡೊಲ್ಕರ್ ಬಗ್ಗೆ ಹೇಳೋದಕ್ಕೆ ನೀನು ಯಾರು? ಆರ್. ಅಶ್ವಿನ್ ವಿರುದ್ಧ ಯುವರಾಜ್ ಸಿಂಗ್ ತಂದೆ ಆಕ್ರೋಶ; ಗಡ್ಡ ಕತ್ತರಿಸುವ ಸವಾಲು!

2023 ರ ಐಪಿಎಲ್ ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪರ ನಾಲ್ಕು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದಿದ್ದರು. 2024 ರಲ್ಲಿ ಅವರು ಆಡಿದ ಏಕೈಕ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ.
Yogaraj singh with Arjuan Tendulkar and R. Ashwin
ಅರ್ಜುನ್ ತೆಂಡೊಲ್ಕರ್ ಜೊತೆಗೆ ಯೋಗರಾಜ್ ಸಿಂಗ್, ಆರ್ .ಅಶ್ವಿನ್ ಸಾಂದರ್ಭಿಕ ಚಿತ್ರ
Updated on

ಮುಂಬೈ: ಈ ಹಿಂದೆ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಅವರ ಪುತ್ರ ಅರ್ಜುನ್ ತೆಂಡೊಲ್ಕರ್ ಈಗ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಗೋವಾ ತಂಡದ ಆಲ್‌ರೌಂಡರ್ ಆಗಿದ್ದಾರೆ.

2023 ರ ಐಪಿಎಲ್ ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪರ ನಾಲ್ಕು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದಿದ್ದರು. 2024 ರಲ್ಲಿ ಅವರು ಆಡಿದ ಏಕೈಕ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಐಪಿಎಲ್ 2026 ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು 30 ಲಕ್ಷ ರೂ.ಗೆ ತೆಗೆದುಕೊಂಡಿತು.

ಅಶ್ವಿನ್ ಹೇಳಿದ್ದೇನು? ಲಕ್ನೋ ತಂಡದಲ್ಲಿ ಈಗಾಗಲೇ ಹಲವು ಭಾರತದ ವೇಗಿಗಳು ಇರುವುದರಿಂದ ಅರ್ಜುನ್ ತೆಂಡೊಲ್ಕರ್ ಪ್ಲೇಯಿಂಗ್ XI ರಲ್ಲಿ ಸ್ಥಾನ ಪಡೆಯಲ್ಲ ಎಂದು ಆರ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಲಕ್ನೋ ತಂಡದಲ್ಲಿ ಮಾಯಾಂಕ್ ಯಾದವ್, ಮೊಯ್ಸಿನ್ ಖಾನ್, ಅವೇಶ್ ಖಾನ್ ಮತ್ತು ಮೊಹಮ್ಮದ್ ಶಮಿಯಂತಹ ವೇಗಿಗಳು ಇರುವುದರಿಂದ ಅರ್ಜುನ್ ತೆಂಡೊಲ್ಕರ್ ಪ್ಲೇಯಿಂಗ್ XI ರಲ್ಲಿ ಸ್ಥಾನ ಪಡೆಯುವುದು ಕಷ್ಟವಿದೆ. ಸಾಕಷ್ಟು ಮಂದಿ ಗಾಯಗೊಳ್ಳುವವರೆಗೂ ಅವರು ತಂಡದಲ್ಲಿ ಆಡಲು ಸಾಧ್ಯವಿಲ್ಲ ಅನಿಸುತ್ತಿದೆ ಎಂದು ಅಶ್ವಿನ್ ತನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.

ಯೋಗರಾಜ್ ಸಿಂಗ್ ಕಿಡಿ: ಈ ಹೇಳಿಕೆ ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಕಿಡಿಕಾರಿದ್ದಾರೆ. ಈ ಹಿಂದೆ ಯೋಗರಾಜ್, ಅರ್ಜುನ್ ಗೆ ಕೋಚ್ ಆಗಿದ್ದರು.

ಅಶ್ವಿನ್ ಬುಲ್ಶಿಟ್ ಮಾತನಾಡುತ್ತಿದ್ದಾನೆ. ಹೀಗೆ ಹೇಳಲು ಆತ ಯಾರು, ಬೇರೊಬ್ಬರ ಬಗ್ಗೆ ಏನು ಮಾತನಾಡಬೇಕೆಂದು ಅವರಿಗೆ ತಿಳಿದಿರಬೇಕು. ಯಾರೋ ಟಿವಿಯಲ್ಲಿ ಕುಳಿತು ಮಾತನಾಡುತ್ತಾರೆ. ಅದನ್ನೇ ಇವರು ಮಾಡಬಾರದು. ಅರೇ ತುಮ್ ಕ್ಯಾ ಹೋ ಭಾಯ್ (ನೀವು ಯಾರು? ನೀವು ಏನು) ಎಂದು ಯೋಗರಾಜ್ ಸಿಂಗ್ ಇನ್‌ಸೈಡ್‌ಸ್ಪೋರ್ಟ್‌ನಲ್ಲಿ ಹೇಳಿದ್ದಾರೆ.

ಕ್ರಿಕೆಟಿಗರು ಹೀಗೆ ಮಾತನಾಡುವಾಗ... ಸಚಿನ್ ತೆಂಡೂಲ್ಕರ್ ಅವರ ಮಗ, ಅದು ಬೇರೆ ಕಥೆ, ಅವರು ಇಲ್ಲಿದ್ದಾಗ, ನೀವೆಲ್ಲರೂ ಅರ್ಜುನ್ ತೆಂಡೂಲ್ಕರ್ ಬಗ್ಗೆ ತಪ್ಪು ವಿಷಯದತ್ತ ಗಮನಹರಿಸುತ್ತಿದ್ದೀರಿ ಎಂದು ಯುವಿಗೆ ಹೇಳಿದ್ದೆ. ಆತ ಬೌಲರ್ ಅಲ್ಲ, ಬೆನ್ನುಮೂಳೆಯ ಸಮಸ್ಯೆ ಇದ್ದು, ಕೈಗಳು 45 ಡಿಗ್ರಿಯಿಂದ ಕೆಳಗಿಳಿದಿವೆ. ಆತ ಇಲ್ಲಿದ್ದಾಗ ಮಾತನಾಡುತ್ತಿದ್ದೆ ಎಂದರು.

Yogaraj singh with Arjuan Tendulkar and R. Ashwin
IPL 2026: ವಿರಾಟ್ ಕೊಹ್ಲಿ ಬೌಲ್ ಮಾಡುತ್ತಾರಾ? ಪೂರ್ವ ತಯಾರಿಯ Video ವೈರಲ್!

ನನ್ನ ಗಡ್ಡವನ್ನು ಕತ್ತರಿಸಿ ಎಸೆಯುತ್ತೇನೆ: ಗೋವಾ ತಂಡದಲ್ಲಿದ್ದಾಗ ಅಲ್ಲಿನ ಕೋಚ್ ಜೊತೆಗೂ ಮಾತನಾಡಿದ್ದೇನೆ. ನಿಮ್ಮಿಂದ ಆಗದಿದ್ದರೆ ನನ್ನ ಬಳಿಗೆ ಕಳುಹಿಸುವಂತೆ ಹೇಳಿದ್ದೇನೆ. ಅರ್ಜುನ್ ತೆಂಡೂಲ್ಕರ್ ನನ್ನ ಜೊತೆ ಆರು ತಿಂಗಳು ಕಳೆದರೆ ಈ ಜಗತ್ತಿನ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಮೀರಿಸುತ್ತಾರೆ ಎಂದು ಇಡೀ ಜಗತ್ತಿಗೆ ಸವಾಲು ಹಾಕುತ್ತೇನೆ. ಇಲ್ಲದಿದ್ದರೆ ನಾನು ನನ್ನ ಗಡ್ಡವನ್ನು ಕತ್ತರಿಸಿ ಎಸೆಯುತ್ತೇನೆ. ನಾನು ನನ್ನ ಕೆಲಸವನ್ನು ಮಾಡುತ್ತೇನೆ" ಎಂದು ಅವರು ಮಾತು ಮುಗಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com