ವಿಜಯ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ CSK ಸ್ಟಾರ್! ತಕ್ಷಣ ಕ್ಯಾಬ್ ಹಿಡಿದು ಚೇಪಾಕ್ ತಲುಪು! ಕಾಲೆಳೆದ ಆರ್ ಅಶ್ವಿನ್

ವೇದಿಕೆಯ ಮೇಲಿದ್ದ ಭದ್ರತಾ ಅಧಿಕಾರಿಯೊಬ್ಬರು, ಸಿಎಸ್‌ಕೆ ವೇಗಿ ಅನ್ಶುಲ್ ಕಾಂಬೋಜ್ ಅವರನ್ನೇ ಹೋಲುತ್ತಿದ್ದುದೇ ಇದಕ್ಕೆ ಕಾರಣ.
CM Vijay oathing Ceremony
ವಿಜಯ್ ಪ್ರಮಾಣ ವಚನ ಕಾರ್ಯಕ್ರಮ
Updated on

ಚೆನ್ನೈ: ಭಾನುವಾರ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಿಎಸ್ ಕೆ ಆಟಗಾರನೊಬ್ಬ ಕಾಣಿಸಿಕೊಂಡಿದ್ದಾನೆಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ತಮಾಷೆ ಭಾರೀ ವೈರಲ್ ಆಗಿತ್ತು.

ಅದರಲ್ಲೂ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಪೋಸ್ಟ್ ಹಾಕಿದ್ದ ಮೇಲಂತೂ ಮತ್ತಷ್ಟು ಚರ್ಚೆಯಾಯಿತು. ಚೆನ್ನೈ ತಂಡದ ಮುಂಚೂಣಿ ಬೌಲರ್ ಆಗಿ ಕಾಣಿಸಿಕೊಂಡಿರುವ ಅನ್ಶುಲ್ ಕಾಂಬೋಜ್.!

ಹೌದು. ವೇದಿಕೆಯ ಮೇಲಿದ್ದ ಭದ್ರತಾ ಅಧಿಕಾರಿಯೊಬ್ಬರು, ಸಿಎಸ್‌ಕೆ ವೇಗಿ ಅನ್ಶುಲ್ ಕಾಂಬೋಜ್ ಅವರನ್ನೇ ಹೋಲುತ್ತಿದ್ದುದೇ ಇದಕ್ಕೆ ಕಾರಣ. ಈ ಪೊಲೀಸ್ ರೂಪದ ಕಾಂಬೋಜ್" ಚಿತ್ರ ಟ್ರೆಂಡಿಂಗ್ ಆಗುತ್ತಿದ್ದಂತೆಯೇ, ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ವಿಶಿಷ್ಟ ಹಾಸ್ಯ ಪ್ರಜ್ಞೆಯೊಂದಿಗೆ ಕಾಂಬೋಜ್ ಕಾಲೆಳೆದರು.

ಕರ್ತವ್ಯ ಯಾವಾಗಲೂ ಮೊದಲು, ಆದರೆ ಪಂದ್ಯ ಗೆಲ್ಲಲೇಬೇಕಾದ ದಿನದಂದು ಇದು ಸ್ವಲ್ಪ ಅತಿ ಎನಿಸುತ್ತದೆ ಎಂದು ಅಶ್ವಿನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದರು. ಅಲ್ಲದೇ, "ಇದು ಹಗಲು ಪಂದ್ಯ, ಅನ್ಶುಲ್ ಕಾಂಬೋಜ್... ತಕ್ಷಣ ಕ್ಯಾಬ್ ಹಿಡಿದು ಚೇಪಾಕ್ ತಲುಪು. ಇದು ದೊಡ್ಡ ಪಂದ್ಯ," ಎಂದು ತಮಾಷೆ ಮಾಡಿದರು.

ಮತ್ತೆ ಕೆಲವರು ಸಿಎಸ್ ಕೆಗೆ ಡಬಲ್ ಡ್ಯೂಟಿ. ಕರ್ತವ್ಯ ನಿಷ್ಠ ಸಿಎಸ್ ಕೆ ಬೌಲಕ್ ಎಂದೆಲ್ಲಾ ಹಾಸ್ಯ ಮಾಡಿದರು.

CM Vijay oathing Ceremony
IPL 2026 ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ MI; ಮುಂಬೈ ಇಂಡಿಯನ್ಸ್ ಇನ್‌ಸ್ಟಾಗ್ರಾಂ ಅನ್‌ಫಾಲೋ ಮಾಡಿದ ಹಾರ್ದಿಕ್ ಪಾಂಡ್ಯ!

ಈ ಚರ್ಚೆಯಲ್ಲಿ ಭಾಗಿಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಅನ್ಶುಲ್ ಕಾಂಬೋಜ್ ತಂಡದ ಜೊತೆಗೇ ಇದ್ದಾರೆ ಮತ್ತು ಪಂದ್ಯಕ್ಕೆ ಸಿದ್ಧರಾಗುತ್ತಿದ್ದಾರೆ ಎಂಬುದನ್ನು ಅವರು ಬೌಲಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com