IPL 2026 ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ MI; ಮುಂಬೈ ಇಂಡಿಯನ್ಸ್ ಇನ್‌ಸ್ಟಾಗ್ರಾಂ ಅನ್‌ಫಾಲೋ ಮಾಡಿದ ಹಾರ್ದಿಕ್ ಪಾಂಡ್ಯ!

ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಮರಳಿದ ಹಾರ್ದಿಕ್ ಪಾಂಡ್ಯ ಅವರಿಗೆ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಐಪಿಎಲ್ 2024 ಕ್ಕೂ ಮೊದಲು ನಾಯಕತ್ವ ನೀಡಿದ್ದು ಕೆಲವು ಅಭಿಮಾನಿ ವರ್ಗಗಳನ್ನು ಕೆರಳಿಸಿತ್ತು.
Hardik Pandya
ಹಾರ್ದಿಕ್ ಪಾಂಡ್ಯ
Updated on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಪ್ಲೇಆಫ್‌ನಿಂದ ಮುಂಬೈ ಇಂಡಿಯನ್ಸ್ ತಂಡ ನಿರ್ಗಮಿಸಿದ ನಂತರ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇನ್‌ಸ್ಟಾಗ್ರಾಂನಲ್ಲಿ ಫ್ರಾಂಚೈಸಿಯನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಅಭಿಮಾನಿಗಳು ಗಮನಿಸಿದ ನಂತರ, ಅವರ ಭವಿಷ್ಯದ ಬಗ್ಗೆ ಹೊಸ ಊಹಾಪೋಹಗಳು ಹುಟ್ಟಿಕೊಂಡವು. ಇದು ಸಾಮಾಜಿಕ ಮಾಧ್ಯಮದಲ್ಲಿ ಬೇಗ ವೈರಲ್ ಆಯಿತು. ಅನೇಕರು ಇದು ಹಾರ್ದಿಕ್ ಪಾಂಡ್ಯ ಮುಂಬೈ ತಂಡದಿಂದ ಹೊರನಡೆದಿರುವುದರ ಸೂಚನೆ ಎಂದರು.

ಮೇ 10 ರಂದು ರಾಯ್‌ಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಮುಂಬೈ ಸೋತ ನಂತರ ಅಧಿಕೃತವಾಗಿ ಪ್ಲೇಆಫ್ ರೇಸ್‌ನಿಂದ ಎಂಐ ಹೊರಬಿದ್ದ ನಂತರ ಈ ಊಹಾಪೋಹಗಳು ಪ್ರಾರಂಭವಾದವು. ಪಂದ್ಯದ ನಂತರ ಹಾರ್ದಿಕ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ 150 ಇತರೆ ಖಾತೆಗಳನ್ನು ಫಾಲೋ ಮಾಡುತ್ತಿರುವುದಾಗಿ ವರದಿಯಾಗಿದೆ. ಆದರೆ, ಆ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಕಾಣೆಯಾಗಿತ್ತು.

ಅದಾದ ಕೆಲವೇ ನಿಮಿಷಗಳ ನಂತರ, ಅಭಿಮಾನಿಗಳು ಹಾರ್ದಿಕ್ ಫಾಲೋ ಮಾಡುತ್ತಿರುವ ಸಂಖ್ಯೆ 151ಕ್ಕೆ ಮರಳಿರುವುದನ್ನು ಗಮನಿಸಿದರು. ಮುಂಬೈ ಇಂಡಿಯನ್ಸ್ ತಂಡವು ಮತ್ತೊಮ್ಮೆ ಪಾಂಡ್ಯ ಅವರು ಫಾಲೋ ಮಾಡುತ್ತಿರುವ ಪಟ್ಟಿಯಲ್ಲಿ ಕಾಣಿಸಿಕೊಂಡಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವದಂತಿಗಳಿಗೆ ಕಾರಣವಾಯಿತು.

ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್‌ಗೆ ಮರಳಿದ ಹಾರ್ದಿಕ್ ಪಾಂಡ್ಯ ಅವರಿಗೆ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಐಪಿಎಲ್ 2024 ಕ್ಕೂ ಮೊದಲು ನಾಯಕತ್ವ ನೀಡಿದ್ದು ಕೆಲವು ಅಭಿಮಾನಿ ವರ್ಗಗಳನ್ನು ಕೆರಳಿಸಿತ್ತು. ಅಂದಿನಿಂದಲೂ, ಫ್ರಾಂಚೈಸಿ ಅಥವಾ ನಾಯಕನನ್ನು ಒಳಗೊಂಡ ಪ್ರತಿಯೊಂದು ವಿಚಾರವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಟೀಕಿಸಲಾಗುತ್ತಿದೆ.

Hardik Pandya
ರೋಹಿತ್ ಶರ್ಮಾರನ್ನು ತೆಗೆದುಹಾಕಿದ್ದು 'ಅನ್ಯಾಯ': ನಾಯಕತ್ವದಿಂದ ಕೆಳಗಿಳಿಯುವಂತೆ ಹಾರ್ದಿಕ್ ಪಾಂಡ್ಯಗೆ ಮಾಜಿ ಆಟಗಾರ ಒತ್ತಾಯ

ಹಾರ್ದಿಕ್ ಪಾಂಡ್ಯ ಅನ್‌ಫಾಲೋ ಮಾಡಿದ್ದು ನಿಜಾನಾ?

ಆರ್‌ಸಿಬಿ ವಿರುದ್ಧ ಮುಂಬೈ ಸೋಲಿನ ನಂತರ ಹಾರ್ದಿಕ್ ಪಾಂಡ್ಯ ಅವರ ಫಾಲೋವರ್‌ಗಳ ಪಟ್ಟಿಯಿಂದ ಮುಂಬೈ ಇಂಡಿಯನ್ಸ್ ಕಾಣೆಯಾಗಿದೆ ಎಂದು ತೋರಿಸುವ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಹಂಚಿಕೊಂಡಿದ್ದಾರೆ.

ಆದರೆ, ಅದಾದ ಕೆಲವೇ ನಿಮಿಷಗಳಲ್ಲಿ, MI ಖಾತೆ ಮತ್ತೆ ಅವರ ಪ್ರೊಫೈಲ್‌ನಲ್ಲಿ ಫಾಲೋವರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು. ಇದು ಆಕಸ್ಮಿಕವಾಗಿ ತಂಡವನ್ನು ಅನ್‌ಫಾಲೋ ಮಾಡಿದ್ದೇ, ತಾಂತ್ರಿಕ ದೋಷವೇ ಅಥವಾ ಸೋಲಿನ ನಂತರ ನಿಜವಾಗಿಯೂ ಅನ್‌ಫಾಲೋ ಮಾಡಿದ್ದರೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಹಾರ್ದಿಕ್ ಪಾಂಡ್ಯ ಅಥವಾ ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com