37ನೇ ವಯಸ್ಸಿನಲ್ಲಿ LinkedInಗೆ ವಿರಾಟ್ ಕೊಹ್ಲಿ ಎಂಟ್ರಿ; ಸುದೀರ್ಘ ಪೋಸ್ಟ್‌ನಲ್ಲಿ 'ದೃಷ್ಟಿಕೋನ ಸ್ಪಷ್ಟ' ಎಂದ ಸ್ಟಾರ್ ಬ್ಯಾಟರ್!

ಸಾಮಾನ್ಯ ಮಿತಿಗಳನ್ನು ಮೀರಿ ಬೆಳೆಯುವ ಆಕಾಂಕ್ಷೆಯೊಂದಿಗೆ, ವಿರಾಟ್ ಕೊಹ್ಲಿ 'Puma' ಸಂಸ್ಥೆಯೊಂದಿಗೆ ಎಂಟು ವರ್ಷಗಳ ಅವಧಿಗೆ ಸುಮಾರು ₹300 ಕೋಟಿ ಮೌಲ್ಯದ ಒಪ್ಪಂದವನ್ನು ವಿಸ್ತರಿಸಿಕೊಳ್ಳುವ ಅವಕಾಶದಿಂದ ಹೊರನಡೆದರು.
Virat Kohli
ವಿರಾಟ್ ಕೊಹ್ಲಿ
Updated on: 

ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಕ್ರಿಕೆಟಿಗರಾಗಿರುವುದಲ್ಲದೆ, ಬ್ರ್ಯಾಂಡ್‌ಗಳನ್ನು ರೂಪಿಸುವಲ್ಲಿಯೂ ವಿಶೇಷ ಒಲವು ಮತ್ತು ಕೌಶಲವನ್ನು ಹೊಂದಿದ್ದಾರೆ. ಹಿಂದೆ ಹಲವು ಬ್ರ್ಯಾಂಡ್‌ಗಳೊಂದಿಗೆ ಗುರುತಿಸಿಕೊಂಡಿದ್ದ ಅವರು, ಇದೀಗ ಕ್ರೀಡಾ ಉಡುಪುಗಳ ಬ್ರ್ಯಾಂಡ್ ಆದ 'ಅಗಿಲಿಟಾಸ್' (Agilitas) ನಲ್ಲಿ ಹೂಡಿಕೆದಾರರಾಗಿದ್ದಾರೆ ಮತ್ತು 'ಒನ್-8-ವರ್ಲ್ಡ್' (one8world)ನ ಸಹ-ಸ್ಥಾಪಕರಾಗಿದ್ದಾರೆ. ಕೆಲ ತಿಂಗಳ ಹಿಂದೆ, ನವದೆಹಲಿಯಲ್ಲಿ ನಡೆದ ಭವ್ಯ ಹಾಗೂ ತಾರೆಯರ ಉಪಸ್ಥಿತಿಯ ಕಾರ್ಯಕ್ರಮವೊಂದರಲ್ಲಿ ಅವರು 'ಅಗಿಲಿಟಾಸ್' ಬ್ರ್ಯಾಂಡ್ ಅನ್ನು ಪರಿಚಯಿಸಿದರು. ಕೊಹ್ಲಿ ತಮ್ಮ 37ನೇ ವಯಸ್ಸಿನಲ್ಲಿ 'ಲಿಂಕ್ಡ್‌ಇನ್' (LinkedIn) ವೇದಿಕೆಗೆ ಸೇರ್ಪಡೆಗೊಂಡಿದ್ದಾರೆ. ತಮ್ಮ ಮೊದಲ ಪೋಸ್ಟ್‌ನಲ್ಲಿ, ಅವರು ತಮ್ಮ ದೂರದೃಷ್ಟಿ ಮತ್ತು ತಾವು ಹೂಡಿಕೆ ಮಾಡಿರುವ ಬ್ರ್ಯಾಂಡ್ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

'ಪ್ರತಿಯೊಂದು ಕ್ರೀಡೆಯನ್ನು ಅನುಸರಿಸುವ, ಆಚರಿಸುವ ಮತ್ತು ಆಡುವ ಭಾರತವನ್ನು ನಾನು ಯಾವಾಗಲೂ ನೋಡಲು ಬಯಸುತ್ತೇನೆ. ಇಂದು, ಆ ದೃಷ್ಟಿಕೋನವು ಎಂದಿಗಿಂತಲೂ ಹತ್ತಿರವಾಗಿದೆ. ಭಾರತವು ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ಉತ್ಪಾದಿಸಬಹುದು ಮತ್ತು ಜಾಗತಿಕ ವೇದಿಕೆಗೆ ಬ್ರ್ಯಾಂಡ್‌ಗಳನ್ನು ನಿರ್ಮಿಸಬಹುದು ಎಂದು ಹೊಸ ಪೀಳಿಗೆ ಸಾಬೀತುಪಡಿಸುತ್ತಿದೆ. ಉತ್ಪಾದನೆ, ಗ್ರಾಹಕ ಬ್ರ್ಯಾಂಡ್‌ಗಳು ಮತ್ತು ಕ್ರೀಡಾ ವಿತರಣೆಯನ್ನು ಒಳಗೊಂಡ ಭಾರತದಿಂದ ಕ್ರೀಡಾ ವೇದಿಕೆಯನ್ನು ನಿರ್ಮಿಸುವುದು ನಮ್ಮ ದೃಷ್ಟಿಕೋನವಾಗಿದೆ. ಭಾರತವು ಜಾಗತಿಕ ಕ್ರೀಡೆಯಲ್ಲಿ ಭಾಗವಹಿಸುವುದಲ್ಲದೆ, ಅದರ ಭವಿಷ್ಯ ರೂಪಿಸಲು ಸಹಾಯ ಮಾಡುತ್ತದೆ ಎಂಬುದು ನಂಬಿಕೆ' ಎಂದು ಅವರು ಬರೆದಿದ್ದಾರೆ.

'ಅದಕ್ಕಾಗಿಯೇ ನಾನು ಹೂಡಿಕೆದಾರನಾಗಿ 'Agilitas' ಸಂಸ್ಥೆಯನ್ನು ಹಾಗೂ 'one8world'ನ ಸಹ-ಸ್ಥಾಪಕ ಮತ್ತು ಸಹ-ಸೃಷ್ಟಿಕರ್ತನಾಗಿ ಸೇರಿಕೊಂಡಿದ್ದೇನೆ. ನನ್ನ ವೃತ್ತಿಜೀವನದಾದ್ಯಂತ ನಾನು ನಂಬಿ ಬಂದಿರುವ ಒಂದು ತತ್ವದ ಮೇಲೆ 'one8' ರೂಪುಗೊಂಡಿದೆ: ಮಿತಿಗಳನ್ನು ಮೀರುವುದು, ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ವಿಭಿನ್ನವಾಗಿ ಏನನ್ನಾದರೂ ಮಾಡುವ ಧೈರ್ಯ ತೋರುವುದರ ಮೂಲಕವೇ ಪ್ರಗತಿ ಸಾಧ್ಯ' ಎಂದು ಕೊಹ್ಲಿ ಬರೆದಿದ್ದಾರೆ.

Virat Kohli
'ಕಹಿ ಭಾವನೆಯಿಂದಲೇ ಹೊರನಡೆದಿದ್ದಾರೆ': ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಗೆ ಅಜಿತ್ ಅಗರ್ಕರ್ ಕಾರಣ ಎಂದ ವಾಸಿಂ ಜಾಫರ್

'ನಾವು ಜಗತ್ತಿಗೆ ಈ ಬ್ರ್ಯಾಂಡ್ ಅನ್ನು ಪರಿಚಯಿಸಿದ್ದು ಹೀಗೆಯೇ; ನನ್ನ ಸ್ವಂತ ನಗರದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ 'one8world' ಸಾಕಾರಗೊಳ್ಳುವುದನ್ನು ನೋಡುವುದು ನನ್ನ ಜೀವನದ ಅತ್ಯಂತ ಅರ್ಥಪೂರ್ಣ ಕ್ಷಣಗಳಲ್ಲಿ ಒಂದಾಗಿತ್ತು' ಎಂದಿದ್ದಾರೆ.

'ನಮ್ಮ ದೃಷ್ಟಿಕೋನ ಸ್ಪಷ್ಟವಾಗಿದೆ. ನಾವೆಲ್ಲರೂ ಇಲ್ಲದಿದ್ದರೂ ಉಳಿದುಕೊಳ್ಳುವಂತಹದ್ದನ್ನು ನಿರ್ಮಿಸುವ ಸಮಯವಿದು. ನಾವು ಅಂತಹದ್ದೇ ಒಂದು ಪಯಣದಲ್ಲಿದ್ದೇವೆ' ಎಂದು ತಿಳಿಸಿದ್ದಾರೆ.

ಸಾಮಾನ್ಯ ಮಿತಿಗಳನ್ನು ಮೀರಿ ಬೆಳೆಯುವ ಆಕಾಂಕ್ಷೆಯೊಂದಿಗೆ, ವಿರಾಟ್ ಕೊಹ್ಲಿ 'Puma' ಸಂಸ್ಥೆಯೊಂದಿಗೆ ಎಂಟು ವರ್ಷಗಳ ಅವಧಿಗೆ ಸುಮಾರು ₹300 ಕೋಟಿ ಮೌಲ್ಯದ ಒಪ್ಪಂದವನ್ನು ವಿಸ್ತರಿಸಿಕೊಳ್ಳುವ ಅವಕಾಶದಿಂದ ಹೊರನಡೆದರು. ಬದಲಾಗಿ, ಅವರು 'ಅಗಿಲಿಟಾಸ್ ಸ್ಪೋರ್ಟ್ಸ್' (Agilitas Sports) ನಲ್ಲಿ ₹40 ಕೋಟಿ ಬಂಡವಾಳ ಹೂಡಿದರು ಮತ್ತು ತಮ್ಮ 'one8' ಬ್ರ್ಯಾಂಡ್ ಅನ್ನು ತಾವು ಷೇರು ಪಾಲುದಾರಿಕೆ ಹೊಂದಿರುವ ವ್ಯವಹಾರವೊಂದಕ್ಕೆ ವರ್ಗಾಯಿಸಿದರು.

Puma ಇಂಡಿಯಾದ ಮಾಜಿ ಮತ್ತು ಆಗ್ನೇಯ ಏಷ್ಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ ಅವರು ಅತುಲ್ ಬಜಾಜ್ ಮತ್ತು ಅಮಿತ್ ಪ್ರಭು ಅವರೊಂದಿಗೆ ಸೇರಿ 2023ರಲ್ಲಿ ಸ್ಥಾಪಿಸಿದ 'ಅಗಿಲಿಟಾಸ್' (Agilitas), ಉತ್ಪನ್ನ ವಿನ್ಯಾಸ, ಉತ್ಪಾದನೆ ಮತ್ತು ಚಿಲ್ಲರೆ ಮಾರಾಟವನ್ನು ಸಂಯೋಜಿಸುವ 'ವರ್ಟಿಕಲಿ ಇಂಟಿಗ್ರೇಟೆಡ್' ಮಾದರಿಯನ್ನು ಅನುಸರಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com