ಜಿ.ಎಂ.ಸಿದ್ದರಾಜುಗೆ ರಾಜ್ಯ ಪ್ರಶಸ್ತಿ ನೀಡುವಂತೆ ಕುಂಬಾರ ಸಂಘ ಒತ್ತಾಯ
ಬೆಂಗಳೂರು: ಕುಂಬಾರ ಸಮುದಾಯಕ್ಕೆ ಸೇರಿದ ಜಿ.ಎಂ.ಸಿದ್ದರಾಜು ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ತಮ್ಮ ಪ್ರತಿಭೆಗಾಗಿ ಅನೇಕ ಪ್ರಶಸ್ತಿಗಳನ್ನುಗಳಿಸಿದ್ದು ಇವರಿಗೆ ರಾಜ್ಯ ಪ್ರಶಸ್ತಿ ನೀಡುವಂತೆ ಕರ್ನಾಟಕ ರಾಜ್ಯ ಕುಂಬಾರರ ಮಹಾ ಮಂಡಳಿ ಒತ್ತಾಯಿಸಿದೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕುಂಬಾರರ ಮಹಾಮಂಡಳಿ ರಾಜ್ಯಾಧ್ಯಕ್ಷ ಎಸ್.ಡಿ. ನಾಗರಾಜು ಜಿ.ಎಂ.ಸಿದ್ದರಾಜು ಕುಂಬಾರರ ಸಮುದಾಯಕ್ಕೆ ಸೇರಿದವರಾಗಿದ್ದು ತಮ್ಮ ಪ್ರತಿಭೆಯಿಂದ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಇಂತಹ ಪ್ರತಿಭೆಯನ್ನು ಗುರ್ತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಬೇಕೆಂದು ತಿಳಿಸಿದ್ದಾರೆ.
ಇದೇ ವೇಳೆ ಕುಂಬಾರ ಸಂಘಗಳ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ 19 ಲಕ್ಷಕ್ಕಿಂತ ಅಧಿಕ ಕುಂಬಾರರ ಜನಾಂಗದವರಿದ್ದು, ಸಂಘ ಸಂಸ್ಥೆಗಳ ಒಳ ಜಗಳಗಳಿಂದಾಗಿ ಕುಂಬಾರರ ಜನಾಂಗ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಮಸ್ಯೆಯ ಕುರಿತು ಎಲ್ಲಾ ಸಂಘಗಳು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡಿದ್ದು ಕರ್ನಾಟಕ ರಾಜ್ಯದ ಕುಂಬಾರರ ಒಕ್ಕೂಟವನ್ನು ನಿರ್ಮಿಸಲಾಗಿದ್ದು ಇನ್ನು ಮುಂದೆ ಒಕ್ಕೂಟದಿಂದಲೇ ಎಲ್ಲಾ ನಿರ್ಧಾರವನ್ನು ಕೈ ಗೊಳ್ಳಲಾಗುತ್ತದೆ ಎಂದು ಹೇಳಿದರು.
ಕುಂಬಾರರ ಜನಾಂಗ ಈಗಾಗಲೇ ರಾಜ್ಯದಲ್ಲಿ ಹಿಂದುಳಿದ ಜನಾಂಗವಾಗಿದ್ದು ರಾಜ್ಯದಲ್ಲಿ ಕುಂಬಾರರಿಗೆ ಸ್ಥಾನಮಾನಗಳನ್ನು ನೀಡುವಂತೆ ಹಾಗೂ ಸರ್ಕಾರದಿಂದ ಅನುದಾನ ತಮಗೂ ದೊರೆಯುವಂತೆ ಮಾಡಬೇಕೆಂದು ಮನವಿ ಇಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

