ಸ್ನೇಹಿತೆಯನ್ನೆ ರೇಪ್ ಮಾಡಿ ಬಳಿಕ ದುಡ್ಡಿಗೆ ಮಾರಾಟ ಮಾಡಿದ ಭೂಪ!

ಮೈಸೂರು: ಕಿರುತೆರೆಯಲ್ಲಿ ಅವಕಾಶ ಕೊಡಿಸುವ ಆಮಿಷ ಹೊಡ್ಡಿ ಯುವತಿಯೊರ್ವಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉಡುಪಿಯ ಬ್ರಹ್ಮವರ ಮೂಲದ 19 ವರ್ಷದ ಯುವತಿಯ ಸ್ನೇಹಿತನೇ ಆಗಿದ್ದ ಸಮೀರ್ ಎಂಬಾತ ಆಕೆಗೆ ಸೀರಿಯಲ್‌ನಲ್ಲಿ ನಟಿಸುವ ಅವಕಾಶ ಕೊಡಿಸುವುದಾಗಿ ಹೇಳಿ ಬೆಂಗಳೂರಿಗೆ ಕರೆತಂದಿದ್ದಾನೆ. ನಂತರ ಬೆಂಗಳೂರಿನಲ್ಲಿ ಮನೆ ಮಾಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯುವತಿಯೊಂದಿಗೆ ತನ್ನ ಕಾಮಚೇಷ್ಟೆಯನ್ನು ತೀರಿಸಿಕೊಂಡ ಬಳಿಕ ಸಮೀರ್ ಆಕೆಯನ್ನು ಕೆಲವರೊಂದಿಗೆ ತಮಿಳುನಾಡಿಗೆ ಕಳುಹಿಸಿದ್ದಾನೆ.
ತಮಿಳುನಾಡಿಗೆ ಹೋದ ಯುವತಿಯನ್ನು ಅಲ್ಲಿಯೂ ಸಹ ಕೆಲವರು ತಾವು ಸಿನಿಮದವರು ಎಂದು ಹೇಳಿಕೊಂಡು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಲ್ಲಿಂದ ಬಂದ ನಂತರ ಯುವತಿ ಸಮೀರ್‌ಗೆ ತನ್ನನ್ನು ಊರಿಗೆ ಕಳಿಸುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪದ ಸಮೀರ್ ಮೈಸೂರಿನಲ್ಲಿ ನಿನಗೆ ಅವಕಾಶ ಕೊಡಿಸುವುದಾಗಿ ಹೇಳಿ ಮೈಸೂರು ನಿವಾಸಿ ಸುನೀಲ್ ಎಂಬತನಿಗೆ ಹಣಕ್ಕೆ ಮಾರಾಟ ಮಾಡಿ ಕೈ ತೊಳೆದುಕೊಂಡಿದ್ದಾನೆ.
ಯುವತಿಯನ್ನು ಖರೀದಿಸಿದ್ದ ಸುನೀಲ್ ಐಷಾರಾಮಿ ಜೀವನ ನಡೆಸುತ್ತಿದ್ದು, ಆಕೆಗೋಸ್ಕರ ಮೈಸೂರಿನ ವಿಜಯನಗರದಲ್ಲಿ ಮನೆ ಮಾಡಿ ಆಕೆಯನ್ನು ನಿರಂತರವಾಗಿ ಲೈಂಗಿಕಕ್ರಿಯೆಗೆ ಬಳಸಿಕೊಂಡಿದ್ದಾನೆ. ಯುವತಿ ಮನೆಯಿಂದ ಹೊರಗೆ ಬರದೇ ಇರುವುದನ್ನು ಗಮನಿಸಿದ ಪಕ್ಕದ ಮನೆಯವರು ವಿಜಯನಗರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಯನ್ನು ಬಂಧಮುಕ್ತಗೊಳಿಸಿದ್ದಾರೆ. ಪೊಲೀಸ್ ಠಾಣೆಗೆ ಬಂದ ಯುವತಿ ಸಮೀರ್ ಹಾಗೂ ಸುನೀಲ್ ಎಂಬಾತ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದು, ಈ ದೂರಿನನ್ವಯ ಪೊಲೀಸರು ಸುನೀಲ್‌ನನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಸಮೀರ್ ತಲೆ ಮರೆಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


