ಫಲಪುಷ್ಪ ಪ್ರದರ್ಶನಕ್ಕೆ ತೆರೆ, ದಾಖಲೆ ಆದಾಯ

- ಟಿಕೆಟ್ನಿಂದಲೇ ರು. 1.79 ಕೋಟಿ ಆದಾಯ ಸಂಗ್ರಹ
ಬೆಂಗಳೂರು: ಲಾಲ್ಬಾಗ್ನಲ್ಲಿ 10 ದಿನಗಳಿಂದ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದ್ದು, ಭೇಟಿ ನೀಡಿದವರ ಸಂಖ್ಯೆ ಕಳೆದ ಸಾಲಿಗಿಂತ ಹೆಚ್ಚಾಗಿ ನಿರೀಕ್ಷೆ ಮೀರಿ ದಾಖಲೆಯ ಆದಾಯ ಸಂಗ್ರಹವಾಗಿದೆ.
ಲಾಲ್ಬಾಗ್ನ 200ನೇ ಫಲಪುಷ್ಪ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಕರಿಕರು ಸ್ಪಂದಿಸಿದ್ದಾರೆ. ತೋಟಗಾರಿಕೆ ಇಲಾಖೆ ಪ್ರಕಾರ 4 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ಟಿಕೆಟ್ನಿಂದಲೇ ರು.1.79ಕೋಟಿ ಆದಾಯ ಸಂಗ್ರಹವಾಗಿದೆ. ಈ ಬಾರಿ ರು.1.4ಕೋಟಿ ಸಂಗ್ರಹದ ಗುರಿ ಹೊಂದಲಾಗಿತ್ತು.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಗಾಜಿನ ಮನೆಯಲ್ಲಿ ಸಿದ್ಧಪಡಿಸಿದ್ಧ ಅರಮನೆ ಹಾಗೂ ಮೈಸೂರ ರಾಜಪರಿವಾರದ ಕಲಾಕೃತಿಗಳು ಹೆಚ್ಚು ಆಕರ್ಷಣೀಯವೆನಿಸಿದ್ದು, ಹೂಗಳೊಂದಿಗೆ ಕಲಾಕೃತಿಗಳೂ ಜನರ ಮನ ಸೆಳೆದಿತ್ತು. ಸ್ವಾತಂತ್ರ್ಸತ್ಸವ ದಿನವೊಂದರಲ್ಲೇ 1.14 ಲಕ್ಷ ಮಂದಿ ಭೇಟಿ ನೀಡಿದ್ದರು. ಕಳೆದ ವರ್ಷದ ಪ್ರದರ್ಶನದಲ್ಲಿ 1.5 ಕೋಟಿ ಸಂಗ್ರಹವಾಗಿತ್ತು. ಈ ಬಾರಿ 1.4ಕೋಟಿ ಸಂಗ್ರಹದ ಗುರಿ ಹೊಂದಲಾಗಿತ್ತು.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಗಾಜಿನ ಮನೆಯಲ್ಲಿ ಸಿದ್ದಪಡಿಸಿದ್ದ ಅರಮನೆ ಹಾಗೂ ಮೈಸೂರು ರಾಜಪರಿವಾರದ ಕಲಾಕೃತಿಗಳು ಹೆಚ್ಚು ಆಕರ್ಷಣೀಯವೆನಿಸಿದ್ದು, ಹೂಗಳೊಂದಿಗೆ ಕಲಾಕೃತಿಗಳೂ ಜನರ ಮನ ಸೆಳೆದಿತ್ತು. ಸ್ವಾತಂತ್ರ್ಸೋತ್ಸವ ಅಂಗವಾಗಿ ನಡೆಸುವ ಪ್ರದರ್ಶನದಲ್ಲಿ ಪ್ರತಿ ವರ್ಷ ಬೃಹತ್ ಕಲಾಕೃತಿ ನಿರ್ಮಿಸಲಾಗುತ್ತದೆ. ಆದರೆ ಈ ಬಾರಿ ಮೈಸೂರು ದಸರಾ ಹಬ್ಬದ ವಿಶೇಷದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು.
4 ಲಕ್ಷ ಗುಲಾಬಿ ಹೂಗಳಿಂದ ಕಟ್ಟಿದ್ದ ಅರಮನೆ, ಹಸಿರುವ ಪ್ರಿಯರು ಮತ್ತೆ ಮತ್ತೆ ಭೇಟಿ ನೀಡಲು ಕಾರಣವಾಯಿತು.
ಈ ಬಾರಿ ವಿದೇಶಿ ಹೂಗಳ ಬದಲು ಸ್ವದೇಶಿ ಹೂಗಳಿಗೆ ಒತ್ತು ನೀಡಿದ್ದು, ಪುಷ್ಪಪ್ರೇಮಿಗಳಿಗೆ ಸಂತಸ ಉಂಟುಮಾಡಿತ್ತು. ಕರಕುಶಲ ವಸ್ತುಗಳ ಮಾರಾಟ ಮಳಿಗೆ, ಸಸಿಗಳ ಮಾರಾಟಕ್ಕೆ ಸಸ್ಯ ಸಂತೆ, ಕುಬ್ಜ ಸಸಿಗಳ ಪ್ರದರ್ಶನ, ತರಕಾರಿ ಬೆಳೆಗಳನ್ನು ನೋಡುವುದರೊಂದಿಗೆ, ಬೆಳೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದುಕೊಂಡರು. ಮೊದಲ ದಿನ 6 ಸಾವಿರ ಸಂಖ್ಯೆಯಲ್ಲಿ ಭೇಟಿ ನೀಡಿದ್ದರಿಂದ ನೀರಸ ಪ್ರತಿಕ್ರಿಯೆ ದೊರೆತಿದೆ ಎಂದೇ ಹೇಳಲಾಗಿತ್ತು. ಆದರೆ ಕ್ರಮೇಣ ಈ ಸಂಖ್ಯೆ ಏರಿದ್ದಲ್ಲದೇ, ಲಾಲ್ಬಾಗ್ಗೆ ಸಾಕಷ್ಟು ಆದಾಯವನ್ನೂ ತಂದಿದೆ. ಪ್ರಮುಖ ಆಕರ್ಷಣೆಯಾದ ಅರಮನೆ ಕಲಾಕೃತಿಯಲ್ಲಿನ ಹೂಗಳನ್ನು ದೀರ್ಘಕಾಲ ಬಾಡದಂತೆ ಸಿಬ್ಬಂದಿ ಕಾರ್ಯನಿರ್ವಹಿಸಿದ್ದು, 2 ಅಥವಾ 3 ದಿನಗಳಿಗೊಮ್ಮೆ ಗುಲಾಬಿ ಹೂಗಳನ್ನು ಬದಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


