ಜಿಲ್ಲಾ ಸುದ್ದಿ

ನಟಿಯಿಂದ ಡಿವಿಎಸ್ ಪುತ್ರ ಕಾರ್ತಿಕ್ ವಿರುದ್ಧ ವಂಚನೆ ಆರೋಪ

ನಟಿಯಿಂದ ಡಿವಿಎಸ್ ಪುತ್ರ ಕಾರ್ತಿಕ್ ವಿರುದ್ಧ ವಂಚನೆ ಆರೋಪ
Published On :

ಮಡಿಕೇರಿ: ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡರ ಪುತ್ರ ಕಾರ್ತಿಕ್‌ಗೆ ಅವರು ಮೊದಲೇ ನನ್ನ ಜೊತೆ ಮದುವೆಯಾಗಿದೆ ಅಂತಾ ಟೋಪಿವಾಲ ಚಿತ್ರದಲ್ಲಿ ನಟಿಸಿರುವ ಮೈತ್ತೇಯಿಗೌಡ ಆರೋಪಿಸಿದ್ದಾರೆ.

2014 ಜೂನ್ 5 ರಂದು ಮಂಗಳೂರಿನಲ್ಲಿ ನಮ್ಮಿಬ್ಬರ ಮದುವೆಯಾಗಿತ್ತು. ಆದರೆ, ನನಗೆ ವಿಷಯ ತಿಳಿಸದೇ ಕಾರ್ತಿಕ್ ಇನ್ನೊಂದು ಮದುವೆಯಾಗಲು ಹೊರಟಿದ್ದಾರೆ ಅಂತಾ ನಟಿ ಮೈತ್ರೇಯಿಗೌಡ ಆರೋಪಿಸಿದ್ದಾರೆ. ಜುಲೈ 25ರವರೆಗೆ ನಿರಂತರ ಸಂಪರ್ಕದಲ್ಲಿದ್ದ ಕಾರ್ತಿಕ್‌ಗೌಡ ನಂತರ ಮಾತನಾಡುವುದನ್ನೇ ಬಿಟ್ಟಿದ್ದ. ಈ ವಿಚಾರ ಡಿ.ವಿ. ಸದಾನಂದಗೌಡ ಅವರ ಕುಟುಂಬಕ್ಕೆ ಗೊತ್ತಿದ್ದರೂ ಮೋಸ ಮಾಡಿರುವುದಾಗಿ ತಿಳಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಪೊಲೀಸರಿಗೆ ದೂರು ನೀಡುವುದಾಗಿ ನಟಿ ಮೈತ್ತೇಯಿ ತಿಳಿಸಿದ್ದಾರೆ.

ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಕಾರ್ತಿಕ್‌ಗೌಡ, ನನಗೆ ಮೈತ್ರೇಯಿಗೌಡ ಅವರಿಗೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ನನ್ನ ಅಪ್ಪನ ಮರ್ಯಾದೆ ಹಾಳು ಮಾಡಲು ಮಾಡುತ್ತಿರುವ ಹುನ್ನಾರ ಎಂದಿದ್ದಾರೆ. ನಾನು ಕಾಲೇಜಿನಲ್ಲಿ ಇದ್ದಾಗಲು ಈ ರೀತಿಯ ಯಾವುದೇ ಆಫೇರ್‌ಗಳನ್ನು ಇಟ್ಟುಕೊಂಡಿರಲಿಲ್ಲ. ನನ್ನಷ್ಟಕ್ಕೆ ನಾನು ಓದಿಕೊಂಡು ಸದ್ಯ ಕೆಲಸ ಮಾಡ್ತಿದೀನಿ. ನಾನು ಆಫೀಸ್‌ಬಿಟ್ರೇ ಮನೆ, ಮನೆ ಬಿಟ್ರೇ ಆಫೀಸ್‌ಗೆ ಹೋಗ್ತೀನಿ ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ವಾತಿ ಅವರೊಂದಿಗೆ ಕಾರ್ತಿಕ್‌ರ ನಿಶ್ಚಿತಾರ್ಥ ಕಾರ್ಯಕ್ರಮ ಕೊಡಗಿನ ಕುಶಾಲನಗರದಲ್ಲಿ ನಡೆದಿದೆ.

ಪುತ್ರ ಕಾರ್ತಿಕ್ ವಿರುದ್ಧದ 2ನೇ ಮದುವೆ ಆರೋಪ ಕುರಿತಂತೆ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಪ್ರತಿಕ್ರಿಯಿಸಿದ್ದು,
‘ಈ ಸುದ್ದಿ ಕೇಳಿ ನನಗೆ ಆಘಾತವಾಗಿದೆ, ಕಾರ್ತಿಕ್​ ಅಂಥ ಹುಡುಗನಲ್ಲ, ಆ ರೀತಿ ಮಾಡಿಲ್ಲ, ಈ ಬಗ್ಗೆ ಕಾರ್ತಿಕ್​ನನ್ನು ವಿಚಾರಿಸುತ್ತೇನೆ, ಅಪಘಾತ ಬಳಿಕ ಕಾರ್ತಿಕ್​ ಚೇತರಿಸಿಕೊಳ್ಳುತ್ತಿದ್ದಾನೆ’ ಎಂದು ಸದಾನಂದಗೌಡರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.