

-ಪ್ರವಾಸಿ ತಾಣಗಳಿಗೆ ಸುಲಭ ಪ್ರವೇಶ| ಪ್ರವಾಸಿಗರ ಅನುಕೂಲಕ್ಕೆ ಮೈಸೂರು ಜಿಲ್ಲಾಡಳಿತದ ವಿಶಿಷ್ಟ ಯೋಜನೆ
ಕ.ಪ್ರ.ವಾರ್ತೆ| ಮೈಸೂರು |ಆ.31: ಈ ಬಾರಿಯ ದಸರಾಕ್ಕೆ ಮೈಸೂರಿಗೆ ಹೋಗುವವರು ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಏಕೆಂದರೆ ಒಮ್ಮೆ 'ಪಾಸ್ಪೋರ್ಟ್' ಖರೀದಿಸಿಬಿಟ್ಟರೆ ಎಲ್ಲೆಡೆ ಅಡಚಣೆ ರಹಿತ ಪ್ರವೇಶ. ಎಲ್ಲಿಯೂ ಟಿಕೆಟ್ಗಾಗಿ ಕ್ಯೂ ನಿಲ್ಲುವ ಪ್ರಮೇಯವಿಲ್ಲ.
ಪ್ರಮುಖ ಸ್ಥಳಗಳಾದ ಅಂಬಾವಿಲಾಸ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿಬೆಟ್ಟ, ಕೆಆರ್ಎಸ್ ಅಣೆಕಟ್ಟೆ ಹಾಗೂ ರಂಗನತಿಟ್ಟು ಪಕ್ಷಿಧಾಮವನ್ನು ಮೈಸೂರು ಟೂರಿಸ್ಟ್ ಪಾಸ್ಪೋರ್ಟ್ ಒಳಗೊಂಡಿದೆ. ಪಾಸ್ಪೋರ್ಟ್ ಪಡೆದವರು ಯಾವುದೇ ಸಮಸ್ಯೆ ಇಲ್ಲದೆ ಈ ಸ್ಥಳಗಳಿಗೆ ಭೇಟಿ ನೀಡಬಹುದು.
ದಸರಾಕ್ಕೆ ಮತ್ತಷ್ಟು ಕಳೆ ಕಟ್ಟುವ ಸಲುವಾಗಿ ನೂತನವಾಗಿ ಜಾರಿಗೆ ತಂದಿರುವ ಮೈಸೂರು 'ಪ್ರವಾಸೋದ್ಯಮ ಪಾಸ್ಪೋರ್ಟ್' ಅನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಭಾನುವಾರ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ದೇಶ-ವಿದೇಶಗಳಿಂದ ದಸರಾಗೆ ಬರುವು ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಾಸ್ಪೋರ್ಟ್ ಯೋಜನೆಯನ್ನು ಸೆ.15ರಿಂದ ಜಾರಿಗೆ ತರಲಾಗುತ್ತದೆ. ಒಂದು ತಿಂಗಳ ಕಾಲ ಚಾಲ್ತಿಯಲ್ಲಿರುತ್ತದೆ ಎಂದರು.
ಪಾಸ್ಪೋರ್ಟ್ ಮಾಹಿತಿ