ಸ್ವಿಫ್ಟ್ ಕಾರು ಪಲ್ಟಿ: ಮೂವರ ದುರ್ಮರಣ

ವಿಜಯಾಪುರ ತಾಲೂಕಿನ ಹಿಟ್ನಲ್ಲಿ ಗ್ರಾಮದ ಬಳಿ ಸ್ವಿಫ್ಟ್ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು...
ಸ್ವಿಫ್ಟ್ ಕಾರು ಪಲ್ಟಿ(ಸಾಂದರ್ಭಿಕ ಚಿತ್ರ)
ಸ್ವಿಫ್ಟ್ ಕಾರು ಪಲ್ಟಿ(ಸಾಂದರ್ಭಿಕ ಚಿತ್ರ)

ವಿಜಯಾಪುರ: ವಿಜಯಾಪುರ ತಾಲೂಕಿನ ಹಿಟ್ನಲ್ಲಿ ಗ್ರಾಮದ ಬಳಿ ಸ್ವಿಫ್ಟ್ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ದುರ್ಮರಣ ಹೊಂದಿದ್ದಾರೆ.

ಕೆಎ 28 ಎನ್ 3759 ನಂಬರಿನ ಸ್ವಿಫ್ಟ್ ಕಾರು ಇಂದು ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಚಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com