ಗಗನಸಖಿಯರಿಗೆ ಮೈಸೂರು ಸಿಲ್ಕ್

ಇನ್ನು ಮುಂದೆ ಏರ್ ಇಂಡಿಯಾ ಗಗನಸಖಿಯರು ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಲಿದ್ದಾರೆ...
ಗಗನಸಖಿ
ಗಗನಸಖಿ
Updated on

ಮೈಸೂರು: ಇನ್ನು ಮುಂದೆ ಏರ್ ಇಂಡಿಯಾ ಗಗನಸಖಿಯರು ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಲಿದ್ದಾರೆ.

ಗಗನಸಖಿಯರಿಗಾಗಿ 10,000 ಮೈಸೂರು ರೇಷ್ಮೆ ಸೀರೆಗಳನ್ನು ಪೂರೈಸುವಂತೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮಕ್ಕೆ (ಕೆಎಸ್‌ಐಸಿ) ಏರ್ ಇಂಡಿಯಾ ಬೇಡಿಕೆ ಸಲ್ಲಿಸಿದೆ. ಈ ಸೀರೆಗಳ ಮೌಲ್ಯ ರು.6.5 ಕೋಟಿ. ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ನಿಗಮದ ಅಧ್ಯಕ್ಷ ಡಿ. ಬಸವರಾಜ್, ಮೈಸೂರು ರೇಷ್ಮೆ ಸೀರೆಗಳ ಗುಣಮಟ್ಟವನ್ನು ಪರಿಶೀಲಿಸಿದ ನಂತರ ಏರ್ ಇಂಡಿಯಾವು ಬೇಡಿಕೆ ಸಲ್ಲಿಸಿದೆ. ಇದು ನಿಗಮದ ಪ್ರತಿಷ್ಠೆ ಹೆಚ್ಚಿಸಿದೆ ಎಂದು ಹೇಳಿದರು.

ನಿಗಮವು ಅಂತಾರಾಷ್ಟ್ರೀಯ ಗುಣಮಟ್ಟದ ಸೀರೆಗಳನ್ನು ಉತ್ಪಾದಿಸುತ್ತಿದ್ದು, ರು.12 ಸಾವಿರದಿಂದ ರು.2.50 ಲಕ್ಷ ದರದಲ್ಲಿ ಸೀರೆಗಳು ಲಭ್ಯ ಇವೆ. ದೇಶ-ವಿದೇಶಗಳ ಗಣ್ಯರು, ಚಲನಚಿತ್ರ ತಾರೆಯರು ಹಾಗೂ ರೂಪದರ್ಶಿಗಳನ್ನು ನಿಗಮದ ಸೀರೆಗಳು ಆಕರ್ಷಿಸಿವೆ.

ಇದಲ್ಲದೇ ರಾಷ್ಟ್ರಪತಿಗಳು ದೇಶಕ್ಕೆ ಬರುವ ವಿದೇಶಿ ಗಣ್ಯರಿಗೆ ನೀಡುವ ಉಡುಗೊರೆಯಲ್ಲಿ ರೇಷ್ಮೆ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ಭವನದಿಂದಲೂ ಬೇಡಿಕೆ ಬಂದಿದ್ದು, ರೇಷ್ಮೆ ಶಲ್ಯ ಮತ್ತಿತರ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com