ನಿಸಾರ್ ಅಹಮದ್‌ರ 'ನಿತ್ಯೋತ್ಸವ'ದ ಹಕ್ಕು ಮಾರಾಟ

ಬೆಂಗಳೂರು: ನಾಡೋಜ ಕೆ.ಎಸ್ ನಿಸಾರ್ ಅಹಮದ್ ರಚಿಸಿದ ನಿತ್ಯೋತ್ಸವ ಗೀತೆಯ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಆಡಿಯೋ ಕ್ಷೇತ್ರದ ಲಹರಿ ಸಂಸ್ಥೆ ಇದರ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.
ನಿಸಾರ್ ಅಹಮದ್ ಅವರೇ ಇದನ್ನು ಖಚಿತ ಪಡಿಸಿದಾದಾರೆ. ಭಾವಗೀತೆಗಳ ಸಂಗೀತ ಲೋಕದಲ್ಲಿ ನಿತ್ಯೋತ್ಸವ ದಾಖಲೆ ಬರೆದ ಭಾವಗೀತೆ. ವಿಶ್ವ ವಿಖ್ಯಾತ ಜೋಗ ಜಲಪಾತದ ಹಿರಿಮೆಯನ್ನು ಸುಂದರವಾದ ಪದಗುಚ್ಛಗಳಲ್ಲಿ ಹಿಡಿದಿಟ್ಟು , ಸುಮಧುರವಾದ ಸಂಗೀತದ ಬೆಳಕಿನಲ್ಲಿ ಸಮ್ಮಿಳಿತಗೊಳಿಸಿ ಜಗದ್ವಿಖ್ಯಾತಗೊಳಿಸಿದ ಹೆಗ್ಗಳಿಕೆ ಇದರದ್ದು. ಇಂತಹ ಗೀತೆ ಈಗ, ಇದೇ ಮೊದಲ ಬಾರಿಗೆ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.
ನಿತ್ಯೋತ್ಸವ ಗೀತೆಯ ಹಕ್ಕುಗಳನ್ನು ಲಹರಿ ಸಂಸ್ಥೆಗೆ ಮಾರಾಟ ಮಾಡಲಾಗಿದೆ. ಅವರು ಹಾಲಲ್ಲಿ ಹಾಕುತ್ತಾರೋ ಅಥವಾ ಅಲ್ಕೋಹಾಲಿನಲ್ಲಿ ಹಾಕುತ್ತಾರೋ ಗೊತ್ತಿಲ್ಲ. ಅದನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತಾರೆನ್ನುವ ನಂಬಿಕೆ ಇದೆ. ಹೀಗಾಗಿ ಯಾವುದನ್ನು ಯೋಚನೆ ಮಾಡದೆ ಹಕ್ಕು ಮಾರಾಟ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ ಎಂದು ನಿಸಾರ್ ಅಹಮದ್ ಪ್ರತಿಕ್ರಿಯಿಸಿದ್ದಾರೆ. ಈ ಒಪ್ಪಂದದ ಪ್ರಕಾರ ಇನ್ನು ಮುಂದೆ ನಿತ್ಯೋತ್ಸವದ ಹಕ್ಕುಗಳು ಲಹರಿ ಸಂಸ್ಥೆಗೆ ಸೇರಿವೆ.
1978ರಲ್ಲಿಯೇ ನಿಸಾರ್ ನಿತ್ಯೋತ್ಸವ ಗೀತೆ ರಚಿಸಿದ್ದರು. ಆ ಕಾಲಕ್ಕೆ ಇದನ್ನು ಆಡಿಯೋ ಸಿ.ಡಿ ಮೂಲಕ ಧ್ವನಿ ಮುದ್ರಿಕೆಗೊಳಿಸಿ, ಹೊರ ತರಲು ಪ್ರಯತ್ನಿಸಿದಾಗ ಯಾವುದೇ ಆಡಿಯೋ ಸಂಸ್ಥೆ ಬಂಡವಾಳ ಹಾಕಲು ಮುಂದೆ ಬಂದಿರಲಿಲ್ಲ. ಕೊನೆಗೆ ಅವರೇ ಬಂಡವಾಳ ತೊಡಗಿಸಿ, ಮೈಸೂರು ಅನಂತಸ್ವಾಮಿ ಅವರಿಂದ ಹಾಡಿಸಿ, ಧ್ವನಿ ಮುದ್ರಿಕೆಯಾಗಿ ಹೊರ ತಂದಾಗ ಭಾರಿ ಪ್ರತಿಕ್ರಿಯೆ ಸಿಕ್ಕಿತ್ತು. ಅಂದಿನಿಂದ ಇಂದಿನ ತನಕ ಆಡಿಯೋ ಸಿ.ಡಿ ಮಾರಾಟದ ಹಕ್ಕನ್ನು ಅವರು ತಮ್ಮ ಬಳಿಯೇ ಉಳಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


