ಜಿಲ್ಲಾ ಸುದ್ದಿ

ಸರ್ಕಾರಕ್ಕೆ ಮತ್ತೆ ಕಾಗೋಡು ಚಾಟಿ ಏಟು

ಸರ್ಕಾರಕ್ಕೆ ಮತ್ತೆ ಕಾಗೋಡು ಚಾಟಿ ಏಟು
Published On :

ಬೆಂಗಳೂರು: ಗಾಂಧಿ ಪ್ರತಿಮೆ ನೋಡಿಯಾದರೂ ನಿದ್ದೆ ಹೊಡೆಯುತ್ತಾ ಇರುವ ಆಡಳಿತ ಯಂತ್ರ ಎಚ್ಚೆತ್ತುಕೊಳ್ಳುವಂತಾಗಲಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸರ್ಕಾರಕ್ಕೆ ಚಾಟಿ ಏಟು ನೀಡಿದ್ದಾರೆ.

ವಿಧಾನಸೌಧ-ವಿಕಾಸಸೌಧದ ಮಧ್ಯೆ ಸ್ಥಾಪಿಸಿರುವ ಧ್ಯಾನಸ್ಥ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಆಡಳಿತ ಯಂತ್ರ ನಿದ್ದೆ ಹೊಡೀತಾ ಇದೆ. ಪ್ರತಿಮೆಯನ್ನು ನೋಡಿಯಾದರೂ ಅವರಲ್ಲಿ ಚೈತನ್ಯ ಬರಲಿ. ಕಡತಗಳು ಆ ಕಡೆಯಿಂದ ಈ ಕಡೆಗೆ ಅಲ್ಲಾಡಲಿ. ಈ ಸಭೆಯಲ್ಲಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೈಶಿಕ್ ಮುಖರ್ಜಿ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತರಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಅವೆಲ್ಲವೂ ಜನರನ್ನು ತಲುಪಬೇಕು ಎಂದು ಕಾಗೋಡು ಹೇಳಿದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಂಸತ್ತಿನ ಮುಂದೆ ಇರುವ ಗಾಂಧಿ ಪ್ರತಿಮೆ ಮಾದರಿಯಲ್ಲಿ ಧ್ಯಾನಸ್ಥ ಗಾಂಧಿ ಪ್ರತಿಮೆಯನ್ನು ನಮ್ಮ ರಾಜ್ಯದಲ್ಲೂ ಸ್ಥಾಪಿಸುವಂತೆ ಶಂಕರಮೂರ್ತಿ ಅವರು ಸಲಹೆ ನೀಡಿದ್ದರು. ವಿಶ್ವದಲ್ಲೇ ಇಂಥ ಪ್ರತಿಮೆ ಇರಲಿಕ್ಕಿಲ್ಲ ಎಂದರು. ಸಮಾಜವನ್ನು ಒಡೆಯುವ ಮತಾಂಧರು ಇನ್ನೂ ಜೀವಂತವಾಗಿದ್ದಾರೆ. ಅಂಥವರ ವಿರುದ್ಧ ಹೋರಾಡುವುದೇ ಗಾಂಧಿಗೆ ಸಲ್ಲಿಸುವ ದೊಡ್ಡ ಗೌರವ ಎಂದರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ, ಸಚಿವರಾದ ಡಾ.ಎಚ್.ಎಸ್. ಮಹಾದೇವಪ್ರಸಾದ್, ಅಂಬರೀಷ್, ಎಚ್.ಕೆ.ಪಾಟೀಲ್, ರಮಾನಾಥ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.