ಜಿಲ್ಲಾ ಸುದ್ದಿ

ನಿಲ್ಲದ ಮಳೆ, ಕೊನೆಗಾಣದ ಅವಾಂತರ

ನಿಲ್ಲದ ಮಳೆ, ಕೊನೆಗಾಣದ ಅವಾಂತರ
Published On :

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಕೂಡಾ ಮಳೆ ಸುರಿದು ಜನಜೀವನವನ್ನು ಅಸ್ತವ್ಯಸ್ತಿಗೊಳಿಸಿತು. ಅದರಲ್ಲೂ ಹುಡ್ ಹುಡ್ ಚಂಡಮಾರುತ ಪರಿಣಾಮ ಉಂಟಾಗುವ
ಮುನ್ನವೇ ಮಳೆ ಕಾಣಿಸಿಕೊಂಡು ಅದರ ತೀವ್ರತೆಯನ್ನು ಪರಿಚಯಿಸಿತು.
ಮಲ್ಲೇಶ್ವರ, ಮೆಜೆಸ್ಟಿಕ್, ಮಹಾದೇವಪುರ, ಯಶವಂತಪುರ, ಮತ್ತಿಕೆರೆ ಹಾಗು ಜೆ.ಸಿ ರಸ್ತೆ ಮಾರುಕಟ್ಟೆ ಸುತ್ತಮುತ್ತ ಭಾರಿ ಮಳೆ ಸುರಿದು ಸಂಚಾರಕ್ಕೆ ಅಡ್ಡಿ ಉಂಟು ಮಾಡಿತು. ನಿರೀಕ್ಷೆಯಂತೆ ಕಿನೋ ಟಾಕೀಸ್ ಬಳಿ ಕೆಲವೇ ನಿಮಿಷಗಳಲ್ಲಿ ಕೆಳ ಸೇತುವೆಯಲ್ಲಿ ನೀರು ತುಂಬಿ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಕೆ. ಆರ್. ಪುರದಲ್ಲಿ ಸುರಿದ ಮಳೆ ಕೋಲಾರ ರಸ್ತೆಯಲ್ಲಿ ಸಂಚಾರ ನಿಲ್ಲಿಸಿತ್ತು.

ಕೇವಲ ಅರ್ಧ ತಾಸು ಸುರಿದ ಮಳೆಯಿಂದ ನಗರದ 4 ತಗ್ಗು ಪ್ರದೇಶಗಳ ಕೆಲವು ಮನೆಗಳಿಗೆ ನೀರು ನುಗ್ಗಿ ಗಾಬರಿ ಹುಟ್ಟಿಸಿತ್ತು. ವಿಜಯನಗರ 9ನೇ ಬ್ಲಾಕ್‌ನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ತಂದಿಟ್ಟಿತ್ತು.  ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಸಿಬ್ಬಂದಿ ನೀರು ಹೊರ ತೆಗೆಯುವ ಕಾರ್ಯ ಆರಂಭಿಸಿದರು. ಮತ್ತಿಕೆರೆ, ಜಯನಗರ ಸೇರಿದಂತೆ ಅನೇಕ ಕಡೆ ಬೀದಿ ದೀಪಗಳು ಬಂದ್ ಆಗಿ ಮಳೆ ಆವಾಂತರ ಇನ್ನೂ ಹೆಚ್ಚಾಗುವಂತಾಗಿತ್ತು. ಅದರಲ್ಲೂ ಸಿ.ವಿ ರಾಮನ್‌ನಗರ, ಕಗ್ಗದಾಸಪುರ, ಆನೆಪಾಳ್ಯ, ಯಲಹಂಕದ ಅಲ್ಲಾಳಸಂದ್ರ, ನಾಗವಾರ, ಬಾಣಸವಾಡಿ ಸೇರಿದಂತೆ ಅನೇಕ ಕಡೆ ಮನೆಗಳಿಗೆ ಅಲ್ಪ ಪ್ರಮಾಣದ ನೀರು ನುಗ್ಗಿತ್ತು.

ಭಾರಿ ಮಳೆ ಮುನ್ಸೂಚನೆ:  ಹುಡ್ ಹುಡ್ ಚಂಡಮಾರುತ ಇನ್ನಷ್ಟು ಬಲವಾಗಿದ್ದು ಗುರುವಾರ ಆಂಧ್ರ , ಒಡಿಶಾ ಸೇರಿದಂತೆ ಅನೇಕ ಕಡೆ ಭಾರಿ ಮಳೆ ಉಂಟು ಮಾಡಿದೆ. ಇದರ ಪರಿಣಾಮ ಕರ್ನಾಟಕದಲ್ಲೂ ಭಾರಿ ಮಳೆಯಾಗಲಿದೆ. ಅಕ್ಟೋಬರ್ 12ರಂದು ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹು ಭಾಗಗಳಲ್ಲಿ ಭಾರಿ ಮಳೆ ಬೀಳುವಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.