

ಕೋಲಾರ: ಜಿಲ್ಲಾಧಿಕಾರಿ ಡಿ.ಕೆ.ರವಿ ವರ್ಗಾವಣೆ ಖಂಡಿಸಿ ಜಿಲ್ಲಾ ಸಮಾನ ಮನಸ್ಥರ ವೇದಿಕೆ ನೀಡಿದ್ದ ಕರೆ ಮೇರೆಗೆ ಗುರುವಾರ ನಡೆದ ಬಂದ್ಗೆ ಕೋಲಾರ, ಮುಳಬಾಗಲು ಹಾಗೂ ಶ್ರೀನಿವಾಸಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂಗಾರಪೇಟೆಯಲ್ಲಿ ವಿವಿಧ ಸಂಘಟನೆಗಳು ಸಭೆ ಸೇರಿ ಶುಕ್ರವಾರ ಬಂದ್ ಆಚರಿಸಲು ನಿರ್ಧರಿಸಿವೆ. ಮಾಲೂರು ಮತ್ತು ಕೆಜಿಎಫ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ದತೆಗಳ ಕೊರತೆಯಿಂದ ಸಾಧ್ಯವಾಗಿಲ್ಲ. ಕೋಲಾರದಲ್ಲಿ ಭಾಗಶಹಃ ಸ್ಥಗಿತಗೊಂಡಿತ್ತು. ಡಿಸಿ ಕಚೇರಿ ವೃತ್ತದಲ್ಲಿ ಸರ್ಕಾರದ ಪ್ರತಿ ಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು. ಡಿಸಿ ವರ್ಗಾವಣೆಗೆ ಜಿಲ್ಲೆಯ ಪ್ರತಿನಿಧಿಗಳೇ ಕಾರಣವೆಂದು ಆರೋಪಿಸಿ ಧಿಕ್ಕಾರ ಕೂಗಿದರು. ಮೂರು ಬಸ್ಸುಗಳಿಗೆ ಕಲ್ಲು ತೂರಿದ್ದರಿಂದ ವಾಹನಗಳು ಜಖಂಗೊಂಡವು. ಉಳಿದಂತೆ ಬಂದ್ ಶಾಂತಿಯುತವಾಗಿತ್ತು. ಪ್ರತಿಭಟನಾಕಾರರು ಸಂಸದ ಕೆ.ಎಚ್.ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.
ಪ್ಲೀಸ್ ನಾನು ಹೋಗಲು ಅವಕಾಶ ಮಾಡಿಕೊಡಿ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಋಣಿ. ಪ್ರತಿಭಟನೆಗಳನ್ನು ಮಾಡಿ ನನ್ನ ಭವಿಷ್ಯಕ್ಕೆ ತೊಂದರೆ ಮಾಡಬೇಡಿ- ಡಿ.ಕೆ.ರವಿ, ಜಿಲ್ಲಾಧಿಕಾರಿ