ದೇಶದ ಅತ್ಯಂತ ನಂಬಿಕಾರ್ಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನ ಪಡೆದ ಬೆಂಗಳೂರಿನ 10 ಕಾಲೇಜುಗಳು
ಬೆಂಗಳೂರು: ಬೆಂಗಳೂರು ಪ್ರಸ್ತುತ ಭಾರತದಲ್ಲಿ ಮುಂಚೂಣಿಯ ಶೈಕ್ಷಣಿಕ ಕೇಂದ್ರವಾಗಿದ್ದು ದೇಶದ 100 ಅಗ್ರಮಾನ್ಯ ವಿದ್ಯಾಸಂಸ್ಥೆಗಳಲ್ಲಿ 10 ಸಂಸ್ಥೆಗಳ ಕೊಡುಗೆ ನೀಡಿರುವುದಲ್ಲದೇ ಭಾರತದ 1000 ನಂಬಿಕಾರ್ಹ ವಿದ್ಯಾ ಸಂಸ್ಥೆಗಳ ಪೈಕಿ ನಗರದ 76 ಸಂಸ್ಥೆಗಳು ಸ್ಥಾನ ಪಡೆದಿವೆ.
ಟಿಆರ್ಎ(ಈ ಹಿಂದೆ ಟ್ರಸ್ಟ್ ರಿಸಚರ್್ ಅಡ್ವೈಸರಿ) ನಡೆಸಿದ ಭಾರತದ ಅತ್ಯಂತ ನಂಬಿಕಾರ್ಹ ಶೈಕ್ಷಣಿಕ ಸಂಸ್ಥೆಗಳ ಕುರಿತಾದ ಸಮೀಕ್ಷೆಯಲ್ಲಿ ಈ ವಿಷಯ ಕಂಡುಬಂದಿದೆ. 7710 ಪ್ರತಿಕ್ರಿಯೆಗಳನ್ನು 40 ನಗರಗಳಿಂದ ಪಡೆದು ನಡೆಸಲಾದ ಈ ಸಮೀಕ್ಷೆ ಭಾರತದಲ್ಲಿ ಶೈಕ್ಷಣಿಕ ಸಂಸ್ಥೆಗಳ ಮೇಲೆ ಅತ್ಯಂತ ಸಮಗ್ರ ಅಧ್ಯಯನವಾಗಿದೆ.
ಪಿಇಎಸ್ ಯುನಿವಸರ್ಿಟಿ(ಅಖಿಲ ಭಾರತ ಮಟ್ಟದಲ್ಲಿ 7ನೇ ರ್ಯಾಂಕ್) ಬೆಂಗಳೂರಿನ ಅತ್ಯಂತ ನಂಬಿಕಾರ್ಹ ಶೈಕ್ಷಣಿಕ ಸಂಸ್ಥೆಯಾಗಿದ್ದು 2ನೇ ಅತ್ಯಂತ ನಂಬಿಕಾರ್ಹ ಸ್ಥಾನ ಆರ್ವಿ ಕಾಲೇಜ್ ಆಫ್ ಇಂಜಿನಿಯರಿಂಗ್(ಅಖಿಲ ಭಾರತ ಮಟ್ಟದಲ್ಲಿ 19ನೇ ಸ್ಥಾನ) ಪಡೆದಿದೆ. ಪಿವಿಪಿ ಕಾಲೇಜ್ ಫಾರ್ ವುಮೆನ್(ಅಖಿಲ ಭಾರತ ಮಟ್ಟದಲ್ಲಿ 32ನೇ ರ್ಯಾಂಕ್) ನಗರದಲ್ಲಿನ 3ನೇ ಅತ್ಯಂತ ನಂಬಿಕಾರ್ಹ ಸಂಸ್ಥೆಯಾಗಿದ್ದು ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್(ಅಖಿಲ ಭಾರತ ಮಟ್ಟದಲ್ಲಿ 39ನೇ ಸ್ಥಾನ) ಬೆಂಗಳೂರಿನ 4ನೇ ಅತ್ಯಂತ ನಂಬಿಕಾರ್ಹ ಶೈಕ್ಷಣಿಕ ಸಂಸ್ಥೆಯಾಗಿದೆ.
ಈ ವರದಿಯನ್ನು ಬಿಡುಗಡೆ ಮಾಡಿದ ಟಿಆರ್ಎನ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎನ್. ಚಂದ್ರಮೌಳಿ ಅವರು ಮಾತನಾಡಿ, ಬೆಂಗಳೂರು ದೇಶದ ಎಲ್ಲೆಡೆಯಿಂದ ವಿದ್ಯಾಥರ್ಿಗಳನ್ನು ಬೆಂಗಳೂರು ಆಕಷರ್ಿಸುತ್ತಿದ್ದು ಗುಣಮಟ್ಟದ ಶಿಕ್ಷಣಕ್ಕಾಗಿ ಬೇಡಿಕೆಯನ್ನು ಹೆಚ್ಚುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಪೂರೈಸುತ್ತಿವೆ. ಉತ್ತಮ ಪರಂಪರೆಯ ಸಾಫ್ಟ್ವೇರ್ ಕಂಪನಿಗಳಿಗೆ ಕೇಂದ್ರವಾಗಿರುವ ಬೆಂಗಳೂರು ವೃತ್ತಿಪರ ವಿಭಾಗದಲ್ಲಿ ಅತ್ಯಂತ ನಂಬಿಕಾರ್ಹ ಸಂಸ್ಥೆಗಳ ಪೈಕಿ 13 ಇಂಜಿನಿಯರಿಂಗ್ ಕೋಸರ್್ ಹೊಂದಿರುವ ವಿದ್ಯಾ ಸಂಸ್ಥೆಗಳನ್ನು ಹೊಂದಿದೆ. ಇದಲ್ಲದೆ ನಗರದ 20ಕ್ಕೂ ಹೆಚ್ಚಿನ ಹಲವಾರು ಬೋಡರ್್ಗಳಲ್ಲಿನ ಪ್ರೌಢಶಾಲೆಗಳನ್ನು ಪಟ್ಟಿಯಲ್ಲಿ ಹೆಸರಿಸಲಾಗಿದ್ದು ಇದರೊಂದಿಗೆ ಬೆಂಗಳೂರು ಪ್ರಾಥಮಿಕ ಶಿಕ್ಷಣದಲ್ಲಿಯೂ ದೃಢವಾದ ಸ್ಪಧರ್ಿಯಾಗಿದೆ ಎಂದರು.
10 ಅತ್ಯಂತ ನಂಬಿಕಾರ್ಹ ಸಂಸ್ಥೆಗಳಲ್ಲಿ ಸ್ಥಾನ ಪಡೆದಿರುವ ಬೆಂಗಳೂರಿನ ಇತರೆ ವಿದ್ಯಾ ಸಂಸ್ಥೆಗಳು ಇಂತಿವೆ. 5ನೇ ರ್ಯಾಂಕ್ನಲ್ಲಿ ಜೈನ್ ಕಾಲೇಜ್(ಅಖಿಲ ಭಾರತ 40ನೇ), 6ನೇ ಸ್ಥಾನದಲ್ಲಿ ವಿಜಯ ಕಾಲೇಜ್ (ಅಖಿಲ ಭಾರತ 47ನೇ), 7ನೇ ರ್ಯಾಂಕ್ನಲ್ಲಿ ಕ್ರೈಸ್ಟ್ ಯುನಿವಸರ್ಿಟಿ (ಅಖಿಲ ಭಾರತ 54ನೇ), 8ನೇ ಸ್ಥಾನದಲ್ಲಿ ಎಂಇಎಸ್ ಕಾಲೇಜ್ ಆಫ್ ಆಟ್ಸರ್್, ಸೈನ್ಸ್ ಮತ್ತು ಕಾಮಸರ್್ (ಅಖಿಲ ಭಾರತ 70ನೇ), 9ನೇ ರ್ಯಾಂಕ್ನಲ್ಲಿ ಕೆಎಲ್ಇ ಸೊಸೈಟಿ ಕಾಲೇಜ್ (ಅಖಿಲ ಭಾರತ 74ನೇ), 10ನೇ ಸ್ಥಾನದಲ್ಲಿ ಬಿಎಂಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಅಖಿಲ ಭಾರತ 120ನೇ) ಸೇರಿವೆ.
ಟಿಆರ್ಎನ ಅಧ್ಯಯನದಲ್ಲಿ 30,000ಕ್ಕೂ ಹೆಚ್ಚಿನ ಅನನ್ಯ ವಿದ್ಯಾಸಂಸ್ಥೆಗಳು ಸೇರಿದ್ದು ಇವುಗಳಲ್ಲಿ ಅಗ್ರ 1000 ಸಂಸ್ಥೆಗಳನ್ನು ಪಟ್ಟಿ ಮಾಡಿ ವರದಿ ಮಾಡಲಾಗಿದೆ. ಟಿಆರ್ಎ ಇನ್ನು ಎರಡು ಅಧ್ಯಯನಗಳನ್ನು ನಡೆಸಿದ್ದು ಬ್ರಾಂಡ್ ಟ್ರಸ್ಟ್ ರಿಪೋಟರ್್(ಬಿಟಿಆರ್) ಮತ್ತು ಇಂಡಿಯಾಸ್ ಮೋಸ್ಟ್ ಅಟ್ರ್ಯಾಕ್ಟಿವ್ ಬ್ರಾಂಡ್ಸ್(ಎಂಎಬಿ) ಇವುಗಳಲ್ಲಿ ಸೇರಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

